ಗುರುವಾರ , ಜೂನ್ 30, 2022
22 °C

ಉಕ್ರೇನ್‌ ದಾಳಿಯಲ್ಲಿ ‘ಥರ್ಮೋಬಾರಿಕ್ ಬಾಂಬ್‌’ ಬಳಕೆಗೆ ರಷ್ಯಾ ಯೋಜನೆ: ಬ್ರಿಟನ್‌

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಲಂಡನ್: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಉಕ್ರೇನ್‌ನಲ್ಲಿ ಥರ್ಮೋಬಾರಿಕ್ ಶಸ್ತ್ರಾಸ್ತ್ರಗಳ ಬಳಕೆಗೆ ಯೋಜನೆ ರೂಪಿಸಿದ್ದಾರೆ ಎಂದು ಬ್ರಿಟನ್‌ ಸರ್ಕಾರ ಆರೋಪಿಸಿದೆ.

ಈ ಕುರಿತು ಹೇಳಿಕೆ ನೀಡಿರುವ ಬ್ರಿಟನ್‌ ರಕ್ಷಣಾ ಕಾರ್ಯದರ್ಶಿ ಬೆನ್ ವ್ಯಾಲೇಸ್, ‘ಉಕ್ರೇನ್‌ನಲ್ಲಿ ಥರ್ಮೋಬಾರಿಕ್ ಶಸ್ತ್ರಾಸ್ತ್ರಗಳ ಬಳಕೆಗೆ ರಷ್ಯಾ ಯೋಜನೆ ರೂಪಿಸಿದೆ. ಅವುಗಳನ್ನು ಯಾವ ಪ್ರಮಾಣದಲ್ಲಿ ಬಳಸಬಹುದು ಎಂಬುದರ ಕುರಿತು ನಮ್ಮ ಸರ್ಕಾರ ಚಿಂತಿಸುತ್ತಿದೆ’ ಎಂದು ತಿಳಿಸಿದ್ದಾರೆ.

’ಅವರು(ಪುಟಿನ್‌) ತಮ್ಮ ಅಂತಿಮ ಗುರಿಯನ್ನು ಸಾಧಿಸಲು ಎಂತಹ ಶಸ್ತ್ರಾಸ್ತ್ರಗಳನ್ನು ಬಳಸಲು ಸೇನೆಗೆ ಅಧಿಕಾರ ನೀಡಲಿದ್ದಾರೆ ಎಂಬುದು ತಿಳಿದಿಲ್ಲ. ಈಗಾಗಲೇ ಬೃಹತ್ ಪ್ರಮಾಣದ ಫಿರಂಗಿಗಳ ಬಳಕೆಯನ್ನು ನಾವು ನೋಡಿದ್ದೇವೆ. ಥರ್ಮೋಬಾರಿಕ್ ಫಿರಂಗಿ ಶಸ್ತ್ರಾಸ್ತ್ರ ಪಡೆಗಳ ನಿಯೋಜನೆ ಬಗ್ಗೆಯೂ ನಮಗೆ ಮಾಹಿತಿ ಇದೆ’ ಎಂದು ವ್ಯಾಲೇಸ್ ಹೇಳಿದ್ದಾರೆ.

ಏನಿದು ಥರ್ಮೋಬಾರಿಕ್ ಶಸ್ತ್ರಾಸ್ತ್ರ?

ಈ ಶಸ್ತ್ರಾಸ್ತ್ರಗಳನ್ನು ‘ವ್ಯಾಕ್ಯೂಮ್‌ ಬಾಂಬ್‌’ ಅಥವಾ ‘ನಿರ್ವಾತ ಬಾಂಬ್‌’ಗಳೆಂದು ಕರೆಯುತ್ತಾರೆ. ವಿಷಕಾರಿ ಪುಡಿ ಲೋಹಗಳು ಮತ್ತು ಸಾವಯವ ಪದಾರ್ಥಗಳನ್ನು ಹೊಂದಿರುವ ವಿವಿಧ ಇಂಧನಗಳು ಈ ಬಾಂಬ್‌ಗಳಲ್ಲಿ ಬಳಕೆಯಾಗಿರುತ್ತವೆ. ಇದು ಸ್ಫೋಟಿಸಿದ ನಂತರ ಆಮ್ಲಜನಕದ ಸಹಾಯದೊಂದಿಗೆ ದೊಡ್ಡ ಪ್ರಮಾಣದ ಬೆಂಕಿ ಹೊತ್ತಿಕೊಂಡು ಅಪಾರ ಪ್ರಾಣಹಾನಿಗೆ ಕಾರಣವಾಗುತ್ತದೆ.

ಎರಡನೆಯ ಮಹಾಯುದ್ಧದ ಸಂದರ್ಭದಲ್ಲಿ ಜರ್ಮನಿಯು ಥರ್ಮೋಬಾರಿಕ್ ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸಿತು. 1960 ರ ದಶಕದಿಂದಲೂ ಪಾಶ್ಚಿಮಾತ್ಯ ದೇಶಗಳು ಹಾಗೂ ರಷ್ಯಾ ಈ ಶಸ್ತ್ರಾಸ್ತ್ರ ಬಳಸುತ್ತಿವೆ.

ಇದನ್ನೂ ಓದಿ...

ಉಕ್ರೇನ್‌ನ ಖೆರ್ಸನ್‌ ನಗರ ವಶಪಡಿಸಿಕೊಂಡ ರಷ್ಯಾ ಪಡೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು