ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಜಾದಲ್ಲಿ ಕದನ ವಿರಾಮ ಘೋಷಣೆಗೆ ಮುಂದಾದ ವಿಶ್ವಸಂಸ್ಥೆ: ಅಮೆರಿಕ ವಿರೋಧ

Last Updated 20 ಮೇ 2021, 4:32 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ಇಸ್ರೇಲ್ ಮತ್ತು ಗಾಜಾದ ಹಮಸ್‌ನ ಉಗ್ರರ ನಡುವಿನ ಸಂಘರ್ಷಕ್ಕೆ ಅಂತ್ಯ ಹಾಡಲು ಮುಂದಾಗಿರುವ ವಿಶ್ವಸಂಸ್ಥೆ ಕದನ ವಿರಾಮ ಘೋಷಿಸಲು ಮುಂದಾಗಿದೆ. ಆದರೆ ವಿಶ್ವಸಂಸ್ಥೆಯ ಈ ಪ್ರಸ್ತಾವಿತ ಕ್ರಮಕ್ಕೆ ಅಮೆರಿಕ ವಿರೋಧ ವ್ಯಕ್ತಪಡಿಸಿದೆ.

ಕದನ ವಿರಾಮ ಘೋಷಣೆಗೆ ಸಂಬಂಧಿಸಿ ವಿಶ್ವಸಂಸ್ಥೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಲು ಯತ್ನಿಸಿತ್ತಾದರೂ, ಈಗಾಗಲೇ ಅಮೆರಿಕ ನಾಲ್ಕು ಬಾರಿ ಅದಕ್ಕೆ ತಡೆ ನೀಡಿದೆ. ಅಲ್ಲದೆ, ಈ ಬಾರಿ ಫ್ರಾನ್ಸ್ ಕರಡು ಸಿದ‌್ಧಪಡಿಸಿದೆ. ವಿಶ್ವಸಂಸ್ಥೆಯ ಸಮಿತಿಯ ಇತರ ಎಲ್ಲ ಸದಸ್ಯರು ಕೂಡ ಸಮ್ಮತಿ ಸೂಚಿಸಿದ್ದರೂ, ಕದನ ವಿರಾಮ ಘೋಷಣೆಗೆ ಅಮೆರಿಕ ಮಾತ್ರ ಒಪ್ಪಿಗೆ ನೀಡಿಲ್ಲ.

ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಲು ವಿಶ್ವಸಂಸ್ಥೆಗೆ ಸಮಿತಿಯ ಎಲ್ಲ 15 ಸದಸ್ಯರ ಒಪ್ಪಿಗೆ ಬೇಕಾಗುತ್ತದೆ. ಆದರೆ ನಿರ್ಧಾರ ಪ್ರಕಟಿಸಬೇಕಾದರೆ ಕನಿಷ್ಠ ಒಂಭತ್ತು ಮಂದಿ ಅನುಮತಿ ಹಾಗೂ ಅಮೆರಿಕ ಅಥವಾ ಇತರ ನಾಲ್ಕು ಶಾಶ್ವತ ಸದಸ್ಯ ರಾಷ್ಟ್ರಗಳು ವಿಟೋ ಬಳಸದೇ ಇರಬೇಕಾಗುತ್ತದೆ.

ಗಾಜಾದಲ್ಲಿ ಕದನ ವಿರಾಮ ಘೋಷಣೆ ಮತ್ತು ಪರಿಹಾರ ಕಾರ್ಯ ಕೈಗೊಳ್ಳಲು ಅನುವಾಗುವಂತೆ ವಿಶ್ವಸಂಸ್ಥೆಯ ಅಧಿಕಾರಿಗಳು ಅಮೆರಿಕ ಜತೆ ಚರ್ಚೆ ನಡೆಸುತ್ತಿದ್ದಾರೆ ಎಂದು ಫ್ರಾನ್ಸ್ ಸರ್ಕಾರದ ವಕ್ತಾರರು ತಿಳಿಸಿದ್ದಾರೆ.

ಆದರೆ ಈ ಬಗ್ಗೆ ಅಮೆರಿಕದ ಅಧಿಕಾರಿಗಳು ವಿಶ‌್ವಸಂಸ್ಥೆಗೆ ಹೇಳಿಕೆ ನೀಡಿದ್ದು, ಹಿಂಸೆಯನ್ನು ಕೊನೆಗಾಣಿಸುವ ಕುರಿತು ರಾಜತಾಂತ್ರಿಕ ಪ್ರಯತ್ನ ನಡೆಯುತ್ತಿದೆ. ಆದರೆ ಉಗ್ರರ ವಿರುದ್ಧದ ಹೋರಾಟಕ್ಕೆ ಬೆಂಬಲವಿರುತ್ತದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT