ಗುರುವಾರ , ಅಕ್ಟೋಬರ್ 29, 2020
28 °C
ಅಮಾಯಕರಿಗೆ ಭಯೋತ್ಪಾದಕ ಪಟ್ಟಿ; ಪಾಕಿಸ್ತಾನದ ವಿಫಲ ಪ್ರಯತ್ನ ಉಲ್ಲೇಖಿಸಿದ ಭಾರತ

ವಿಶ್ವ ಸಂಸ್ಥೆ ಭದ್ರತಾ ಮಂಡಳಿ ದುರುಪಯೋಗ ಮಾಡಿಕೊಳ್ಳದಿರಿ: ಭಾರತ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಿಶ್ವಸಂಸ್ಥೆ: ಪ್ರತೀಕಾರದ ಉದ್ದೇಶಕ್ಕಾಗಿ ವಿಶ್ವಾಸಾರ್ಹ ಪುರಾವೆಗಳಿಲ್ಲದೇ ಅಮಾಯಕ ನಾಗರಿಕರನ್ನು ಭಯೋತ್ಪಾದಕರೆಂದು ಬಿಂಬಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ಯಾವ ರಾಷ್ಟ್ರಗಳೂ ದುರುಪಯೋಗ ಮಾಡಿಕೊಳ್ಳಬಾರದು ಎಂದು ಭಾರತ ಹೇಳಿದೆ.

ನಾಲ್ವರು ಭಾರತೀಯರನ್ನು 'ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ 1267 ಅಲ್‌ಖೈದಾ ನಿರ್ಬಂಧ ಸಮಿತಿ' ಅಡಿಯಲ್ಲಿ ಭಯೋತ್ಪಾದಕರೆಂದು ಬಿಂಬಿಸುವಲ್ಲಿ ವಿಫಲವಾದ ಪಾಕಿಸ್ತಾನದ ಪ್ರಯತ್ನವನ್ನು ಭಾರತ ಉಲ್ಲೇಖಿಸಿ, ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಭಾರತೀಯರಾದ ಅಂಗಾರ ಅಪ್ಪಾಜಿ, ಗೊಬಿಂಡ ಪಟ್ನಾಯಕ್, ಅಜಯ್‌ ಮಿಸ್ತ್ರಿ ಮತ್ತು ವೇಣುಮಾಧವ್ ಡೋಂಗರ ಅವರ ಹೆಸರನ್ನು '1267 ಅಲ್‌ಖೈದಾ ನಿರ್ಬಂಧಿತ ಸಮಿತಿ' ಅಡಿಯಲ್ಲಿ ಪಟ್ಟಿ ಮಾಡಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಸಲ್ಲಿಸಿತ್ತು.

ಆದರೆ, ಕಳೆದ ತಿಂಗಳು ಅಮೆರಿಕ, ಬ್ರಿಟನ್‌, ಫ್ರಾನ್ಸ್‌, ಜರ್ಮನಿ ಮತ್ತು ಬೆಲ್ಜಿಯಂ ರಾಷ್ಟ್ರಗಳು ಅಪ್ಪಾಜಿ ಮತ್ತು ಪಟ್ನಾಯಕ್ ಅವರ ಹೆಸರನ್ನು ಪಟ್ಟಿಯಲ್ಲಿ ಸೇರಿಸುವ ಪಾಕಿಸ್ತಾನದ ಪ್ರಯತ್ನವನ್ನು ವಿಫಲಗೊಳಿಸಿದ್ದವು. ಮೂಲಗಳ ಪ್ರಕಾರ, ಪಾಕಿಸ್ತಾನವು ಈ ಪ್ರಕರಣದಲ್ಲಿ ವ್ಯಕ್ತಿಗಳನ್ನು ಪಟ್ಟಿ ಮಾಡಲು ಯಾವುದೇ ಪುರಾವೆಗಳನ್ನು ನೀಡಿಲ್ಲ. ಅದೇ ರೀತಿ, ಮಿಸ್ತ್ರಿ ಮತ್ತು ಡೊಂಗರ ಅವರನ್ನು ಪಟ್ಟಿ ಮಾಡುವ ಪಾಕಿಸ್ತಾನದ ಹಿಂದಿನ ಪ್ರಯತ್ನವನ್ನೂ ಕೌನ್ಸಿಲ್ ಜೂನ್ / ಜುಲೈ ಆಸುಪಾಸಿನಲ್ಲಿ ನಿರ್ಬಂಧ ವಿಧಿಸಿತ್ತು.

ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ಮಿಷನ್‌ನ ಮೊದಲ ಕಾರ್ಯದರ್ಶಿ ಮತ್ತು ಕಾನೂನು ಸಲಹೆಗಾರ ಯೆಡ್ಲಾ ಉಮಾಶಂಕರ್ ಯುಎನ್‌ ಸಾಮಾನ್ಯ ಸಭೆಯ 6ನೇ ಸಮಿತಿ ಸಭೆಯಲ್ಲಿ ‘ಅಂತರರಾಷ್ಟ್ರೀಯ ಭಯೋತ್ಪಾದನೆ ನಿರ್ಮೂಲನೆಗಾಗಿ ಪರಿಹಾರಗಳು‘ ಕುರಿತು ಮಾತನಾಡಿ, ‘ ತಮ್ಮ ಪ್ರತೀಕಾರಕ್ಕಾಗಿ ಯಾವುದೇ ರಾಷ್ಟ್ರಗಳು ಪುರಾವೆಗಳಿಲ್ಲದೇ ಅಮಾಯಕರನ್ನು ಭಯೋತ್ಪಾದಕರ ಪಟ್ಟಿಗೆ ಸೇರಿಸುವುದಿಲ್ಲ ಎಂಬುದನ್ನು ಖಚಿತಪಡಿಸಬೇಕು. ಈ ವಿಚಾರದಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ದುರುಪಯೋಗಪಡಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಬೇಕು‘ ಎಂದು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು