ಬುಧವಾರ, ಮಾರ್ಚ್ 3, 2021
29 °C
ಆಸ್ಟ್ರೇಲಿಯಾದಲ್ಲಿ ಕಟ್ಟು ನಿಟ್ಟಿನ ಲಾಕ್‌ಡೌನ್, ಹೊಸ ವರ್ಷಾಚರಣೆಗೆ ನಿರ್ಬಂಧ

ಮನೆಯಲ್ಲೇ ಕುಳಿತು ಹೊಸ ವರ್ಷದ ಸಂಭ್ರಮ ಸವಿಯಿರಿ: ಆಸ್ಟ್ರೇಲಿಯಾ ಸರ್ಕಾರ ಸಲಹೆ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ಮೆಲ್ಬರ್ನ್:  ಕೊರೊನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಈ ವರ್ಷ ಮನೆಯಲ್ಲೇ ಕುಳಿತು ಸಿಡ್ನಿಯಲ್ಲಿ ನಡೆಯುವ ಹೊಸ ವರ್ಷಾಚರಣೆ ಕಾರ್ಯಕ್ರಮಗಳನ್ನು ಸವಿಯುವಂತೆ ಸರ್ಕಾರ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

ಹೊಸ ವರ್ಷವನ್ನು ಸ್ವಾಗತಿಸಲು ದಿನಗಣನೆ ಆರಂಭವಾಗಿದೆ. ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲು ಸಿಡ್ನಿಯ ಒಪೆರಾ ಹೌಸ್‌ ಸಿಡಿಮದ್ದುಗಳ ಪ್ರದರ್ಶನಕ್ಕೆ ಸಜ್ಜಾಗುತ್ತಿದೆ. ಈ ವರ್ಷ ಕೊರೊನಾ ಸಾಂಕ್ರಾಮಿಕದ ಭೀತಿ ಇರುವುದರಿಂದ, ಹೊಸ ವರ್ಷಾಚರಣೆಗೆ ಹೆಚ್ಚು ಜನರು ಸೇರದಂತೆ ಸರ್ಕಾರ ನಿಬಂಧನೆಗಳನ್ನು ವಿಧಿಸಿದೆ.

’ಸಿಡಿಮದ್ದುಗಳ ಪ್ರದರ್ಶನವಿದ್ದರೂ, ಆ ಪ್ರದರ್ಶನಕ್ಕೆ ಹೆಚ್ಚು ಜನರು ಸೇರದಂತೆ ನಿಷೇಧ ಹೇರಲಾಗಿದೆ. ಇದರ ಜತೆಗೆ, ದೊಡ್ಡ ದೊಡ್ಡ ಪಾರ್ಟಿಗಳು ನಡೆಯುವುದನ್ನು ನಿಷೇಧಿಸಲಾಗಿದೆ‘ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಿಡಿಮದ್ದು ಪ್ರದರ್ಶನ ಕಾರ್ಯಕ್ರಮ ನೇರ ಪ್ರಸಾರವಿದ್ದು, ಸಾರ್ವಜನಿಕರು ಮನೆಯಲ್ಲೇ ಕುಳಿತು ಈ ಸಂಭ್ರಮವನ್ನು ಸವಿಯಬಹುದು ಎಂದು ಸರ್ಕಾರ ತಿಳಿಸಿದೆ.

ಸಿಡ್ನಿಯ ಉತ್ತರ ಬೀಚ್ ಪ್ರದೇಶದಲ್ಲಿರುವ ಉಪನಗರಗಳಲ್ಲಿ ಡಿಸೆಂಬರ್ ತಿಂಗಳ ಮಧ್ಯಭಾಗದಲ್ಲಿ ಕೊರೊನಾ ವೈರಸ್‌ನ ಎರಡನೇ ಅಲೆ ಕಾಣಿಸಿಕೊಂಡಿತ್ತು. ಸೋಮವಾರದ ಐದು ಪ್ರಕರಣಗಳು ದೃಢಪಡುವ ಮೂಲಕ, ಎರಡನೆ ಅಲೆಯಲ್ಲಿ ಸೋಂಕಿಗೊಳಗಾದವರ ಸಂಖ್ಯೆ 125ಕ್ಕೆ ಏರಿದೆ. ಈ ಹಿನ್ನೆಲೆಯಲ್ಲಿ ಬೀಚ್‌ ಪ್ರದೇಶಗಳಲ್ಲಿರುವ 2 ಕೋಟಿಯಷ್ಟು ಜನರು ಜನವರಿಗೆ ತಿಂಗಳು ಪೂರ್ಣ ಕಟ್ಟುನಿಟ್ಟಾದ ಲಾಕ್‌ಡೌನ್‌ನಲ್ಲಿರಬೇಕೆಂದು ಸೂಚಿಸಲಾಗಿದೆ.

ಈಗಾಗಲೇ ಹೊಸ ವರ್ಷದ ಸಂಭ್ರಮಾಚರಣೆಗೆ ಎಲ್ಲೆಡೆ ನಿರ್ಬಂಧ ಹೇರಲಾಗಿದೆ. ನ್ಯೂ ಸೌತ್‌ ವೇಲ್ಸ್‌ನ(ಎನ್‌ಎಸ್‌ಡಬ್ಲ್ಯು) ಪ್ರೀಮಿಯರ್ ಗ್ಲಾಡೀಸ್‌ ಬೆರೆಜಿಕ್ಲಿಯಾನ್‌ನಿಂದ ಸಿಡ್ನಿ ನಗರಕ್ಕೆ ಬರುವವರಿಗೆ ನಿರ್ಬಂಧ ವಿಧಿಸಲಾಗಿದೆ. ಬಯಲು ಪ್ರದೇಶದಲ್ಲಿ ಸಂತೋಷ ಕೂಟಗಳನ್ನು ಏರ್ಪಡಿಸುವವರಿಗೂ 50 ಜನರು ಸೇರಲು ಮಾತ್ರ ಅವಕಾಶ ನೀಡಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು