ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೂಟೌಟ್‌ನಲ್ಲಿ 6 ಮಂದಿ ಸಾವು: ಬಂದೂಕು ನಿಷೇಧ ಜಾರಿಗೆ ಜೋ ಬೈಡನ್ ಕರೆ

Last Updated 28 ಮಾರ್ಚ್ 2023, 4:57 IST
ಅಕ್ಷರ ಗಾತ್ರ

ವಾಷಿಂಗ್ಟನ್: 6 ಜನರನ್ನು ಬಲಿ ಪಡೆದ ಅಮೆರಿಕದ ನ್ಯಾಶ್‌ವಿಲ್ಲೆಯಲ್ಲಿ ನಡೆದ ಗುಂಡಿನ ದಾಳಿಯು ಅಸ್ವಸ್ಥ ಮನಸ್ಥಿತಿಯಿಂದ ನಡೆದಿದೆ ಎಂದು ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ಈ ರೀತಿಯ ದಾಳಿಗಳು ರಾಷ್ಟ್ರದ ಆತ್ಮವನ್ನು ಕತ್ತರಿಸುತ್ತಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಶಸ್ತ್ರಾಸ್ತ್ರಗಳ ನಿಷೇಧವನ್ನು ಪರಿಗಣಿಸವಂತೆ ಅವರು ಅಮೆರಿಕ ಸಂಸತ್ತಿಗೆ ಕರೆ ನೀಡಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

ನ್ಯಾಶ್‌ವಿಲ್ಲೆಯ ಖಾಸಗಿ ಶಾಲೆಯೊಂದರಲ್ಲಿ 28 ವರ್ಷದ ಯುವತಿಯೊಬ್ಬಳು ಸೋಮವಾರ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ವಿದ್ಯಾರ್ಥಿಗಳು ಹಾಗೂ ಮೂವರು ಸಿಬ್ಬಂದಿ ಸೇರಿ 6 ಮಂದಿ ಮೃತಪಟ್ಟಿದ್ದರು.

ಮಹಿಳೆಯರ ಕಿರು ಉದ್ಯಮ ಕುರಿತಾದ ಸಮ್ಮೇಳನದಲ್ಲಿ ಮಾತನಾಡಿದ ಬೈಡನ್, ಇದು ಅಸ್ವಸ್ಥ ಮನಸ್ಥಿತಿ, ನಾವು ಈಗಲೂ ಏನಾಯಿತು ಮತ್ತು ಯಾಕಾಯಿತು ಎಂಬ ಮಾಹಿತಿ ಕಲೆ ಹಾಕುತ್ತಿದ್ದೇವೆ. ಈ ರೀತಿ ಮನಸ್ಥಿತಿಯ ಹಲವರು ನಮ್ಮಲ್ಲಿ ಇದ್ದಾರೆ. ಮಕ್ಕಳನ್ನು ಕಳೆದುಕೊಂಡ ಕುಟುಂಬಕ್ಕೆ ಇದು ನಿಜಕ್ಕೂ ದುಃಸ್ವಪ್ನ ಎಂದು ಹೇಳಿದ್ದಾರೆ.

ಈ ದಾಳಿ ವಿಷಯ ತಿಳಿದ ಕೆಲವೇ ನಿಮಿಷಗಳಲ್ಲಿ ಕ್ರಮ ಜರುಗಿಸಿದ ಪೊಲಿಸರನ್ನು ಬೈಡನ್ ಶ್ಲಾಘಿಸಿದ್ದಾರೆ. ನಾವು ಅತ್ಯಂತ ನಿಕಟವಾಗಿ ಪರಿಸ್ಥಿತಿ ಮೇಲ್ವಿಚಾರಣೆ ಮಾಡುತ್ತಿದ್ದೇವೆ. ಗನ್ ದುರ್ಬಳಕೆ ತಡೆ ಕುರಿತಂತೆ ನಾವು ಮತ್ತಷ್ಟು ಕೆಲಸ ಮಾಡಬೇಕಿದೆ. ಈ ರೀತಿಯ ದಾಳಿಗಳು ನಮ್ಮ ಸಮುದಾಯಗಳನ್ನು ನಾಶಪಡಿಸುತ್ತಿವೆ. ಈ ರಾಷ್ಟ್ರದ ಆತ್ಮವನ್ನು ಕತ್ತರಿಸುತ್ತಿವೆ. ನಮ್ಮ ಶಾಲೆಗಳನ್ನು ರಕ್ಷಿಸಲು ನಾವು ಇನ್ನೂ ಹೆಚ್ಚಿನದನ್ನು ಮಾಡಬೇಕಾಗಿದೆ ಎಂದು ಹೇಳಿದರು.

ಈ ಪ್ರಕರಣದಲ್ಲಿ ಶೂಟರ್ ಎರಡು ಬಂದೂಕು(ಅಸಾಲ್ಟ್ ವೆಪನ್) ಮತ್ತು ಎ.ಕೆ 47 ಗನ್ ಹೊಂದಿದ್ದರು ಎಂಬ ಬಗ್ಗೆ ವರದಿಯಾಗಿದೆ. ಹೀಗಾಗಿ, ನನ್ನ ಶಸ್ತ್ರಾಸ್ತ್ರಗಳೂ ಸೇರಿ ಬಂದೂಕು ನಿಷೇಧವನ್ನು ಅಂಗೀಕರಿಸುವಂತೆ ಕಾಂಗ್ರೆಸ್‌ಗೆ ಮನವಿ ಮಾಡುತ್ತೇನೆ. ನಾವು ಈ ನಿಟ್ಟಿನಲ್ಲಿ ಮತ್ತಷ್ಟು ಪ್ರಗತಿ ಸಾಧಿಸಬೇಕಾದ ಸಮಯವಿದು ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT