ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಭಾರಿಯ ತೈವಾನ್ ಭೇಟಿ ರದ್ದುಗೊಳಿಸಿದ ಅಮೆರಿಕ

Last Updated 13 ಜನವರಿ 2021, 6:05 IST
ಅಕ್ಷರ ಗಾತ್ರ

ತೈಪೆ: ಚೀನಾದ ತೀವ್ರ ವಿರೋಧ ಮತ್ತು ಎಚ್ಚರಿಕೆಯ ನಂತರ ಅಮೆರಿಕ ಸರ್ಕಾರ ವಿಶ್ವಸಂಸ್ಥೆಯಲ್ಲಿನ ತನ್ನ ರಾಯಭಾರಿ ಕೆಲ್ಲಿ ಕ್ರಾಫ್ಟ್ ಅವರ ಯೋಜಿತ ತೈವಾನ್ ಪ್ರವಾಸವನ್ನು ರದ್ದುಗೊಳಿಸಿದೆ.

ಅಮೆರಿಕದಲ್ಲಿ ಶೀಘ್ರದಲ್ಲೇ ನಡೆಯಲಿರುವ ಅಧಿಕಾರ ಹಸ್ತಾಂತರ ಪ್ರಕ್ರಿಯೆಗೆ ನೆರವಾಗುವ ದೃಷ್ಟಿಯಿಂದ ಸರ್ಕಾರದ ಕಾರ್ಯದರ್ಶಿ ಮೈಕ್ ಪೊಂಪಿಯೊ ಸೇರಿದಂತೆ ಎಲ್ಲ ಹಿರಿಯ ಅಧಿಕಾರಿಗಳ ಸಾಗರೋತ್ತರ ಪ್ರವಾಸವನ್ನು ರದ್ದುಗೊಳಿಸುವ ನಿರ್ಧಾರ ಕೈಗೊಂಡಿರುವುದಾಗಿ ಅಮೆರಿಕ ಪ್ರಕಟಿಸಿದೆ.

ವಿಶ್ವಸಂಸ್ಥೆಯಲ್ಲಿನ ಅಮೆರಿಕ ರಾಯಭಾರಿ ಕೆಲ್ಲಿ ಕ್ರಾಫ್ಟ್ ಅವರು ಬುಧವಾರದಿಂದ ಮೂರು ದಿನಗಳ ಕಾಲ ತೈವಾನ್‌ಗೆ ಭೇಟಿ ನೀಡಿ, ಅಧ್ಯಕ್ಷ ತ್ಸೈ ಇಂಗ್‌–ವೆನ್ ಮತ್ತು ವಿದೇಶಾಂಗ ಸಚಿವ ಜೋಸೆಫ್ ವೂ ಅವರೊಂದಿಗೆ ನಡೆಯುವ ಸಭೆಯಲ್ಲಿ ಪಾಲ್ಗೊಳ್ಳಬೇಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT