ಶನಿವಾರ, ಜನವರಿ 23, 2021
24 °C

'ಅಗೌರವ ಹಾಗೂ ಅವಮಾನಕರ ಕ್ಷಣ': ಹಿಂಸಾಚಾರ ಖಂಡಿಸಿದ ಬರಾಕ್ ಒಬಾಮ

ಪಿಟಿಐ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್: ಅಮೆರಿಕ ಕ್ಯಾಪಿಟಲ್ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿರುವ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಕಟುವಾಗಿ ಟೀಕೆ ಮಾಡಿರುವ ಮಾಜಿ ಅಧ್ಯಕ್ಷ ಬರಾಕ್ ಒಬಾಮ, ಇದು ನಮ್ಮ ರಾಷ್ಟ್ರಕ್ಕೆ ಎದುರಾದ ಅಗೌರವ ಹಾಗೂ ಅವಮಾನಕರ ಕ್ಷಣ ಎಂದು ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ದೃಢೀಕರಣ ವೇಳೆ ಸಂಸತ್ ಭವನಕ್ಕೆ ಮುತ್ತಿಗೆ ಹಾಕಿದ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಭಾರಿ ಹಿಂಸಾಚಾರದಲ್ಲಿ ಭಾಗಿಯಾದರು.

ಅಮೆರಿಕ ಕಾಂಗ್ರೆಸ್ ಜಂಟಿ ಅಧಿವೇಶನವನ್ನು ವಿರೋಧಿಸಿರುವ ಡೊನಾಲ್ಡ್ ಟ್ರಂಪ್ ಬೆಂಬಲಿಗರು, ಚುನಾವಣೆಯಲ್ಲಿ ಮೋಸ ನಡೆದಿದೆ ಎಂದು ಆರೋಪಿಸಿದ್ದರು.

ನಿರ್ಗಮಿಸುತ್ತಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚುನಾವಣೆ ಆಧಾರ ರಹಿತವಾಗಿದ್ದು ಎಂದು ಸುಳ್ಳು ಹೇಳುತ್ತಿದ್ದಾರೆ. ಇತಿಹಾಸವು ಇಂದಿನ ಹಿಂಸಾಚಾರವನ್ನು ಸರಿಯಾಗಿ ನೆನಪಿಸಿಕೊಳ್ಳಲಿದೆ. ಇದು ಅಮೆರಿಕಕ್ಕೆ ಆದ ಅಗೌರವ ಹಾಗೂ ಅವಮಾನಕರ ಕ್ಷಣ ಎಂದು ಬರಾಕ್ ಒಬಾಮ ಹೇಳಿದರು.

ಇದನ್ನೂ ಓದಿ: 

ಕಳೆದ ವರ್ಷ ನವೆಂಬರ್‌ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಾಟ್ ಪಕ್ಷದ ಜೋ ಬೈಡನ್ 306 ಎಲೆಕ್ಟೋರಲ್ ಕಾಲೇಜ್ ಮತಗಳನ್ನು ಪಡೆದು ವಿಜಯಿಶಾಲಿಯಾಗಿದ್ದರು. ಅತ್ತ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ 232 ಮತಗಳನ್ನು ಪಡೆದಿದ್ದರು.

ಇಂದೊಂದು ಅನಿರೀಕ್ಷಿತ ಘಟನೆಯಲ್ಲ. ಕಳೆದೆರಡು ತಿಂಗಳಿನಿಂದ ರಾಜಕೀಯ ಪಕ್ಷವೊಂದು ಚುನಾವಣೆ ಫಲಿತಾಂಶವನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಿದೆ. ಇದು ನಿಕಟ ಚುನಾವಣೆ ಸ್ಪರ್ಧೆಯಾಗಿರಲಿಲ್ಲ. ನಾವೀಗ ಭವಿಷ್ಯತ್ ಪರಿಣಾಮವನ್ನು ಎದುರಿಸುತ್ತಿದ್ದೇವೆ ಎಂದು ಡೊನಾಲ್ಡ್ ಟ್ರಂಪ್ ಹಾಗೂ ಬೆಂಬಲಿಗರ ಹಿಂಸಾಚಾರ ನೀತಿಯನ್ನು ಖಂಡಿಸುತ್ತಾ ತಿಳಿಸಿದರು.

ಅಮೆರಿಕ ಕ್ಯಾಪಿಟಲ್‌ಗೆ ನಡೆದ ಹಿಂಸಾಚಾರವನ್ನು ಮಾಜಿ ಅಧ್ಯಕ್ಷರಾದ ಜಾರ್ಜ್ ಬುಷ್ ಮತ್ತು ಬಿಲ್ ಕ್ಲಿಂಟನ್ ಸಹ ಖಂಡಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು