ಮಂಗಳವಾರ, ಜೂನ್ 15, 2021
27 °C

ಕೋವಿಡ್‌ ಬಿಕ್ಕಟ್ಟು ನಿವಾರಣೆಯಲ್ಲಿ ಭಾರತದ ಪ್ರಯತ್ನ ಶ್ಲಾಘನೀಯ: ಅಮೆರಿಕ ಸಂಸದ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಕೋವಿಡ್‌–19 ಬಿಕ್ಕಟ್ಟಿನ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಯತ್ನವನ್ನು ಶ್ಲಾಘಿಸಿರುವ ಅಮೆರಿಕದ ಸಂಸದರೊಬ್ಬರು ಭಾರತವು ಆದಷ್ಟು ಬೇಗ ಈ ಸವಾಲಿನ ವಿರುದ್ಧ ಜಯ ಸಾಧಿಸಲಿದೆ ಎಂದಿದ್ದಾರೆ.

‘ಭಾರತ ಮತ್ತು ಅಮೆರಿಕವು ವಿಶೇಷ ಪಾಲುದಾರಿಕೆಯನ್ನು ಹಂಚಿಕೊಂಡಿವೆ. ಭಾರತಕ್ಕೆ ಸಾಂಕ್ರಾಮಿಕವನ್ನು ಎದುರಿಸಲು ಅಗತ್ಯವಿರುವ ಸಾಧನಗಳನ್ನು ಪೂರೈಸಲು ಅಮೆರಿಕ ಪ್ರಯತ್ನಿಸುತ್ತಿದೆ. ಇದಕ್ಕೆ ನನ್ನ ಬೆಂಬಲವಿದೆ’ ಎಂದು ಸಂಸದ ಜೋ ವಿಲ್ಸನ್‌ ಅವರು ಹೇಳಿದ್ದಾರೆ.

‘ಕೋವಿಡ್‌ಗೆ ತುತ್ತಾಗಿರುವ ಭಾರತೀಯರ ಮೇಲೆ ಅನುಕಂಪವಿದೆ. ಈ ಹೃದಯ ವಿದ್ರಾವಕ ಬಿಕ್ಕಟ್ಟನ್ನು ಎದುರಿಸಲು ಪ್ರಧಾನಿ ನರೇಂದ್ರ ಮೋದಿ ಕೈಗೊಳ್ಳುತ್ತಿರುವ ಕ್ರಮಗಳು ಪ್ರಶಂಸನೀಯ’ ಎಂದು ವಿಲ್ಸನ್‌ ಅಭಿಪ್ರಾಯಪಟ್ಟಿದ್ದಾರೆ.

‘ಸಿಇಒ ಮತ್ತು ಅಧ್ಯಕ್ಷ ಕೆ.ವಿ.ಕುಮಾರ್ ನೇತೃತ್ವದ ಭಾರತೀಯ ಅಮೆರಿಕನ್‌ ಇಂಟರ್‌ನ್ಯಾಷನಲ್‌ ಚೇಂಬರ್‌ ಆಫ್‌ ಕಾಮರ್ಸ್‌(ಐಎಐಸಿಸಿ) ಭಾರತಕ್ಕೆ ಬಿಕ್ಕಟ್ಟನ್ನು ಎದುರಿಸಲು ನೆರವಾಗುತ್ತಿದೆ. ಐಎಐಸಿಸಿಯು ಡಾ.ನರಸಿಂಹಲು ಅವರ ನೇತೃತ್ವದಲ್ಲಿ ತಂಡವೊಂದನ್ನು ರಚಿಸಿದೆ. ಈ ತಂಡವು ಅಮೆರಿಕದಲ್ಲಿರುವ ಭಾರತದ ರಾಯಭಾರಿ ತರನ್‌ಜೀತ್‌ ಸಿಂಗ್‌ ಸಂಧು, ಭಾರತದ ಕಾನ್ಸುಲ್‌ ಜನರಲ್‌ ಡಾ.ಸ್ವಾತಿ ಕುಲಕರ್ಣಿ ಮತ್ತು ಅಮಿತ್‌ ಕುಮಾರ್‌ ಅವರ ಮೂಲಕ ಭಾರತಕ್ಕೆ ನೆರವು ಒದಗಿಸುತ್ತಿದೆ’ ಎಂದು ಅವರು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು