ಶನಿವಾರ, ಮೇ 28, 2022
31 °C

ಅಮೆರಿಕದಲ್ಲಿ ಕಾಳ್ಗಿಚ್ಚು: ನಂದಿಸಲು ಹರಸಾಹಸ

ಎಪಿ Updated:

ಅಕ್ಷರ ಗಾತ್ರ : | |

Prajavani

ಸಾಂಟಾ ಫೆ (ಅಮೆರಿಕ): ಅಮೆರಿಕದ ನ್ಯೂ ಮೆಕ್ಸಿಕೊ ರಾಜ್ಯದ ಉತ್ತರ ಭಾಗದ ಸಣ್ಣ ನಗರ ಮತ್ತು ಗಡಿ ಪ್ರದೇಶಗಳಲ್ಲಿ ಕಾಳ್ಗಿಚ್ಚು ಕಾಣಿಸಿಕೊಂಡಿದ್ದು, ಒಂದು ಸಾವಿರಕ್ಕೂ ಅಧಿಕ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಜತೆಗೆ ಬುಲ್ಡೋಜರ್‌ಗಳು ಮತ್ತು ವಿಮಾನಗಳ ನೆರವನ್ನೂ ಪಡೆಯಲಾಗಿದೆ.

ಲಾಸ್ ವೆಗಾಸ್‌ನಲ್ಲಿ ಸಹ ಕಾಳ್ಗಿಚ್ಚಿನ ತೀವ್ರತೆ ಕಾಣಿಸಿಕೊಂಡಿದ್ದು, ಬೆಂಕಿಯಿಂದ 11 ಕಿ.ಮೀ.ವರೆಗೆ ಬೂದಿಯ ರಾಶಿ ಬಿದ್ದಿರುವುದು ಕಂಡುಬಂದಿದೆ. ಈ ಭಾಗದಲ್ಲಿ 13 ಸಾವಿರ ಜನರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ಅಗ್ನಿಶಾಮಕ ನಿರ್ವಹಣಾ ತಂಡದ ವಕ್ತಾರ ಮೈಕ್‌ ಜಾನ್ಸನ್‌ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು