ಸೋಮವಾರ, ಸೆಪ್ಟೆಂಬರ್ 20, 2021
28 °C

ಕಾಬೂಲ್‌ನಿಂದ 3,200 ಮಂದಿ ಸ್ಥಳಾಂತರ: ಶ್ವೇತ ಭವನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ‘ಅಫ್ಗಾನಿಸ್ತಾನದ ಕಾಬೂಲ್‌ನಿಂದ ಈವರೆಗೆ 3,200ಕ್ಕೂ ಹೆಚ್ಚು ಜನರನ್ನು ಅಮೆರಿಕವು ಸ್ಥಳಾಂತರಿಸಿದೆ’ ಎಂದು ಶ್ವೇತ ಭವನ ಹೇಳಿದೆ.

‘ಅಮೆರಿಕದ ಕಾಯಂ ನಿವಾಸಿಗಳು, ಅವರ ಕುಟುಂಬದವರು ಸೇರಿದಂತೆ ಒಟ್ಟು 1,100 ಮಂದಿಯನ್ನು ಮಂಗಳವಾರ 13 ವಿಮಾನಗಳ ಮೂಲಕ ಸ್ಥಳಾಂತರಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮಂದಿಯನ್ನು ಕರೆದೊಯ್ಯಲಾಗುವುದು’ ಎಂದು ಶ್ವೇತಭವನದ ಅಧಿಕಾರಿಯೊಬ್ಬರು ಟ್ವೀಟ್‌ ಮಾಡಿದ್ದಾರೆ.

‘ನಮ್ಮ ಅಧಿಕಾರಿಗಳು ಸೇರಿದಂತೆ ಅಫ್ಗಾನಿಸ್ತಾನದಿಂದ ಈವರೆಗೆ 3,200 ಮಂದಿಯನ್ನು ಕರೆತರಲಾಗಿದೆ. ಇದರೊಂದಿಗೆ ಹೆಚ್ಚುವರಿಯಾಗಿ 2,000 ಅಫ್ಗನ್‌ ವಿಶೇಷ ವಲಸಿಗರನ್ನು ಅಮೆರಿಕಕ್ಕೆ ಸ್ಥಳಾಂತರಿಸಿದ್ದೇವೆ’ ಎಂದು ಅವರು ತಿಳಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು