ಬುಧವಾರ, ಸೆಪ್ಟೆಂಬರ್ 28, 2022
26 °C

ಉಕ್ರೇನ್‌ಗೆ ಶತಕೋಟಿ ಮೊತ್ತದ ರಾಕೆಟ್, ಶಸ್ತ್ರಾಸ್ತ್ರ ಪೂರೈಕೆ: ಅಮೆರಿಕ

ಎಪಿ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಸರ್ಕಾರವು ಉಕ್ರೇನ್‌ಗೆ ಶತಕೋಟಿ ಡಾಲರ್ ಮೊತ್ತದ ಮಿಲಿಟರಿ ಸಹಾಯವನ್ನು ನೀಡುವುದಾಗಿ ಸೋಮವಾರ ಘೋಷಿಸಿದೆ. 

ಉಕ್ರೇನ್‌ನ ಪಡೆಗಳಿಗೆ ರಕ್ಷಣಾ ಇಲಾಖೆಯಿಂದ ನೇರವಾಗಿ ದೊಡ್ಡ ರಾಕೆಟ್‌ಗಳು, ಮದ್ದುಗುಂಡುಗಳು ಮತ್ತು ಶಸ್ತ್ರಾಸ್ತ್ರಗಳು ಪೂರೈಕೆಯಾಗಲಿವೆ ಎಂದು ಅಮೆರಿಕವು ಭರವಸೆ ನೀಡಿದೆ.

ಉಕ್ರೇನ್‌ ಪಡೆಗಳು ನಡೆಸುತ್ತಿರುವ ಪ್ರತಿದಾಳಿಯಿಂದ ರಕ್ಷಿಸಿಕೊಳ್ಳಲು ದಕ್ಷಿಣ ಬಂದರು ನಗರಗಳ ದಿಕ್ಕಿನಲ್ಲಿ ರಷ್ಯಾ ಪಡೆಗಳು ಚಲಿಸುತ್ತಿವೆ ಎಂಬ ಮಾಹಿತಿ ದೊರೆತ ಬಳಿಕ ಅಮೆರಿಕವು, ಉಕ್ರೇನ್‌ಗೆ ಮತ್ತೆ ಹೊಸದಾಗಿ ಶಸ್ತ್ರಾಸ್ತ್ರ ಪೂರೈಸುವುದಾಗಿ ಹೇಳಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು