ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ: ಜಾನ್ಸನ್‌ ಆ್ಯಂಡ್ ಜಾನ್ಸನ್‌ ಲಸಿಕೆ ನೀಡಿಕೆ ಪುನರಾರಂಭ

ರಕ್ತ ಹೆಪ್ಪುಗಟ್ಟುವ ವಿರಳ ನಿದರ್ಶನಗಳ ಹೊರತಾಗಿಯೂ
Last Updated 24 ಏಪ್ರಿಲ್ 2021, 5:22 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಮೆರಿಕದಲ್ಲಿ 11 ದಿನಗಳ ಕಾಲ ತಡೆಹಿಡಿಯಲಾಗಿದ್ದ ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಕೋವಿಡ್‌ ಲಸಿಕೆ ನೀಡಿಕೆಯನ್ನು ಪುನರಾರಂಭಿಸಲಾಗಿದ್ದು, ಅತಿ ವಿರಳವಾಗಿ ಕಾಣಿಸಿಕೊಂಡ ರಕ್ತ ಹೆಪ್ಪುಗಟ್ಟುವ ಸಮಸ್ಯೆಯನ್ನು ಕಡೆಗಣಿಸಲು ನಿರ್ಧರಿಸಲಾಗಿದೆ.

ಈ ಲಸಿಕೆ ಪಡೆದ 80 ಲಕ್ಷ ಜನರ ಪೈಕಿ 15 ಮಂದಿಗೆ ರಕ್ತ ಹೆಪ್ಪುಗಟ್ಟುವ ಸಮಸ್ಯೆ ಕಾಣಿಸಿತ್ತು. ಮೂವರು ಮೃತಪಟ್ಟಿದ್ದರು. ಹೀಗೆ ಸಮಸ್ಯೆ ಎದುರಿಸಿದವರೆಲ್ಲ 50 ವರ್ಷದೊಳಗಿನ ಮಹಿಳೆಯರಾಗಿದ್ದರು. ಇನ್ನು ಮುಂದೆ ಸಂಭಾವ್ಯ ರಕ್ತ ಹೆಪ್ಪುಗಟ್ಟುವ ವಿಷಯ ತಿಳಿಸಿಯೇ, ಜನರ ಆಯ್ಕೆಗೆ ಅವಕಾಶ ನೀಡಿ ಜಾನ್ಸನ್‌ ಆ್ಯಂಡ್ ಜಾನ್ಸನ್ ಲಸಿಕೆ ನೀಡಲಾಗುವುದು ಎಂದು ಅಮೆರಿಕದ ರೋಗ ನಿಯಂತ್ರಣ ಕೇಂದ್ರದ (ಸಿಡಿಸಿ) ನಿರ್ದೇಶಕ ಡಾ.ರೊಚೆಲ್‌ ವೆಲೆನ್‌ಸ್ಕಿ ತಿಳಿಸಿದ್ದಾರೆ.

ಈ ಲಸಿಕೆಯಿಂದ ಬಹಳಷ್ಟು ಪ್ರಯೋಜನ ಇದ್ದು, ಕೋವಿಡ್‌ ನಿಯಂತ್ರಿಸುವಲ್ಲಿ ಬಹಳ ಪರಿಣಾಮಕಾರಿಯಾಗಲಿದೆ, ಹೀಗಾಗಿ ಈ ಲಸಿಕೆಗೆ ನಿಷೇಧ ಹೇರಬಾರದು ಎಂಬುದು ಬಹುತೇಕ ತಜ್ಞರ ಅಭಿಪ್ರಾಯವಾಗಿತ್ತು. ಹೀಗಾಗಿ ಕಳೆದ ವಾರ ಯೂರೋಪ್‌ ರಾಷ್ಟ್ರಗಳಲ್ಲಿ ತೆಗೆದುಕೊಂಡಂತಹ ನಿರ್ಧಾರವನ್ನೇ ಅಮೆರಿಕವೂ ಈಗ ಕೈಗೊಂಡಿದೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT