ಸೋಮವಾರ, ನವೆಂಬರ್ 30, 2020
24 °C

ಟ್ರಂಪ್‌, ಬೈಡನ್‌ ಬೆಂಬಲಿಗರು ಮುಖಾಮುಖಿ; ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಾದವನ್ನು ಬೆಂಬಲಿಸಿ ಅವರ ಬೆಂಬಲಿಗರು ಶನಿವಾರ ಹಲವೆಡೆ ರ‍್ಯಾಲಿ ನಡೆಸಿದ್ದು, ಈ ವೇಳೆ ಹಿಂಸಾಚಾರ ಭುಗಿಲೆದ್ದಿದೆ.

ಒಂದೆಡೆ ಟ್ರಂಪ್‌ ಬೆಂಬಲಿಗರು ಚುನಾವಣಾ ಫಲಿತಾಂಶದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರೆ, ಇನ್ನೊಂದಡೆ ಜೋ ಬೈಡನ್ ಗೆಲುವನ್ನು ಸಂಭ್ರಮಿಸಿ ಅವರ ಬೆಂಬಲಿಗರು ರ‍್ಯಾಲಿ ನಡೆಸಿದರು. ಆದರೆ  ಶ್ವೇತಭವನದಿಂದ ಸ್ವಲ್ಪ ದೂರದಲ್ಲಿ ಎರಡು ಬಣಗಳು ಮುಖಾಮುಖಿಯಾಗಿದ್ದು, ಶಾಂತಿಯುತ ರ‍್ಯಾಲಿಯು ಹಿಂಸಾಚಾರಕ್ಕೆ ತಿರುಗಿತು.

ಈ ವೇಳೆ ‘ಬ್ಲ್ಯಾಕ್‌ ಲೈಫ್‌ ಮ್ಯಾಟರ್‌’ ಪ್ರತಿಭಟನಕಾರೊಬ್ಬರು ಚಾಕು ಇರಿತಗೊಳಗಾಗಿದ್ದು, ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರು ಪೊಲೀಸ್‌ ಅಧಿಕಾರಿಗಳಿಗೂ ಗಾಯಗಳಾಗಿವೆ ಎಂದು ವರದಿಯೊಂದು ಹೇಳಿದೆ. 

ಟ್ರಂಪ್‌ ವಿರೋಧಿ ಪ್ರತಿಭನಕಾರರು ಟ್ರಂಪ್‌ ಬೆಂಬಲಿಗರ ಮೇಲೆ ಮೊಟ್ಟೆ ಎಸೆದಿದ್ದಾರೆ. ಬ್ಯಾನರ್‌,ಟೋಪಿಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಫಾಕ್ಸ್‌ ನ್ಯೂಸ್‌ ವರದಿ ಮಾಡಿದೆ.

ಈ ಗಲಭೆಯ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, ವಿಡಿಯೊದಲ್ಲಿ ಎರಡು ಬಣದ ಬೆಂಬಲಿಗರು ಪರಸ್ಪರ ಹೊಡೆದಾಡುತ್ತಿರುವುದು ಕಂಡುಬಂದಿದೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಟ್ರಂಪ್‌,‘ ನ್ಯೂಸ್‌ ಚಾನೆಲ್‌ಗಳು ಜೋ ಬೈಡನ್‌ ಬೆಂಬಲಿಗರು ನಡೆಸಿದ ರ‍್ಯಾಲಿಯನ್ನು ಪ್ರಸಾರ ಮಾಡುತ್ತಿಲ್ಲ. ಕೇವಲ ನನ್ನ ಬೆಂಬಲಿಗರ ಪೋಟೊಗಳನ್ನು ತೋರಿಸುತ್ತಿದ್ದಾರೆ. ನಮ್ಮನ್ನು ಮಾಧ್ಯಮದವರೂ ಕೂಡ ತಡೆಯುತ್ತಿದ್ದಾರೆ’ ಎಂದು ದೂರಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು