ಜೋಹಾನ್ಸ್‌ಬರ್ಗ್: ಮಾಜಿ ಅಧ್ಯಕ್ಷ ಜಾಕೋಬ್ ಜುಮಾ ಅವರಿಗೆ ಜೈಲು ಶಿಕ್ಷೆಯಾಗಿರುವುದಕ್ಕೂ, ಈಗ ನಡೆಯುತ್ತಿರುವ ಪ್ರತಿಭಟನೆಗಳಿಗೂ ಸಂಬಂಧವೇ ಇಲ್ಲ. ಇದು ದೇಶದ ಆರ್ಥಿಕತೆಯನ್ನು ನಾಶಗೊಳಿಸಲು ನಡೆಯುತ್ತಿರುವ ಸಂಘಟಿತ ಯತ್ನ ಎಂದು ದಕ್ಷಿಣ ಆಫ್ರಿಕಾದ ಇಬ್ಬರು ಸಚಿವರು ಹೇಳಿದ್ದಾರೆ.
‘ಮೂಲಸೌಕರ್ಯಗಳನ್ನು ಧ್ವಂಸಗೊಳಿಸುವುದು. ಅಂಗಡಿಗಳನ್ನು ಲೂಟಿ ಹೊಡೆಯುವುದನ್ನು ನೋಡಿದರೆ, ದೇಶದ ಆರ್ಥಿಕ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಬುಡಮೇಲು ಮಾಡುವ ಹುನ್ನಾರದಂತೆ ಕಾಣುತ್ತದೆ’ ಎಂದು ರಕ್ಷಣಾ ಖಾತೆಯ ಡೆಪ್ಯುಟಿ ಸಚಿವ ಝಿಝಿ ಕೊಡ್ವಾ, ಖನಿಜ ಮತ್ತು ಇಂಧನ ಸಚಿವ ಗ್ವೆಡೆ ಮಂಟಾಶೆ ಹೇಳಿದ್ದಾರೆ.
‘ಸಾಮಾಜಿಕ ಜಾಲತಾಣಗಳ ಮೂಲಕ ಕೆಲವರು ಗಲಭೆಗೆ ಪ್ರಚೋದನೆ ನೀಡುತ್ತಿದ್ದಾರೆ. ಈ ಗಲಭೆ, ಲೂಟಿಯಂಥ ಕೃತ್ಯಗಳು ರಾಜಕೀಯ ಪ್ರೇರಿತ’ ಎಂದು ಕೊಡ್ವಾ ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.