ಶನಿವಾರ, ಮೇ 15, 2021
23 °C

ಸಾಂಕ್ರಾಮಿಕ ಸಮಯದಲ್ಲಿ ಪತ್ರಿಕಾ ಸ್ವಾತಂತ್ರ್ಯವೂ ಕ್ಷೀಣ: ವರದಿ

ಎಪಿ Updated:

ಅಕ್ಷರ ಗಾತ್ರ : | |

Prajavani

ಪ್ಯಾರಿಸ್‌: ‘ಕೋವಿಡ್‌ ಸಾಂಕ್ರಾಮಿಕ ಆರಂಭವಾದ ದಿನದಿಂದ ಪತ್ರಿಕಾ ಸ್ವಾತಂತ್ರ್ಯ ಗಣನೀಯವಾಗಿ ಕ್ಷೀಣಿಸುತ್ತಿದೆ’ ಎಂದು ‘ರಿಪೋಟರ್ಸ್‌ ವಿಥೌಟ್‌ ಬಾಡರ್ಸ್‌‘ ಎಂಬ ವಾಚ್‌ಡಾಗ್ ಸಂಸ್ಥೆ ತನ್ನ ವಾರ್ಷಿಕ ವರದಿಯಲ್ಲಿ ಹೇಳಿದೆ.

ಈ ಸಂಘಟನೆಯ ಹೊಸ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕವು ಜಗತ್ತಿನ 180 ರಾಷ್ಟ್ರಗಳಲ್ಲಿ ಮಾಧ್ಯಮಗಳ ಪರಿಸ್ಥಿತಿ ಬಗ್ಗೆ ಮೌಲ್ಯಮಾಪನ ನಡೆಸಿದೆ. ಇದರಲ್ಲಿ ಶೇಕಡ 73 ರಾಷ್ಟ್ರಗಳಲ್ಲಿ ಪತ್ರಿಕಾ ಸ್ವಾತಂತ್ರ್ಯವು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿವೆ ಎಂಬುದು ತಿಳಿದುಬಂದಿದೆ.

ಓದಿ: 

‘ಕೋವಿಡ್‌ ಪಿಡುಗನ್ನು ಆಧಾರವಾಗಿ ಬಳಸಿಕೊಂಡು ಹಲವು ರಾಷ್ಟ್ರಗಳು ಪತ್ರಕರ್ತರಿಗೆ ಮಾಹಿತಿಗಳ ಮೂಲಗಳನ್ನು ನೀಡುತ್ತಿಲ್ಲ ಹಾಗೂ  ಕ್ಷೇತ್ರಗಳಲ್ಲಿ ವರದಿಗಳನ್ನು ಮಾಡದಂತೆ ತಡೆಯುತ್ತಿವೆ. ವಿಶೇಷವಾಗಿ ಏಷ್ಯಾ, ಮಧ್ಯಪ್ರಾಚ್ಯ, ಯುರೋಪ್‌ಗಳಲ್ಲಿ ಪತ್ರಿಕಾ ಸ್ವಾತಂತ್ರ್ಯ ಕ್ಷೀಣಿಸುತ್ತಿದೆ’ ಎಂದು ವರದಿಯಲ್ಲಿ ಹೇಳಲಾಗಿದೆ.

ಅಲ್ಲದೆ ಜನರಿಗೆ ಮಾಧ್ಯಮಗಳ ಮೇಲಿನ ಭರವಸೆಯೂ ಕಡಿಮೆಯಾಗಿದೆ. 28 ರಾಷ್ಟ್ರಗಳಲ್ಲಿ ನಡೆಸಿದ ಸರ್ವೇಯಲ್ಲಿ ಶೇಕಡ 59ರಷ್ಟು ಜನರು, ‘ಮಾಧ್ಯಮಗಳಿಗೆ ತಾವು ವರದಿ ಮಾಡುವುದು ಸುಳ್ಳು ಸುದ್ದಿ ಎಂದು ಗೊತ್ತಿದ್ದರೂ ಉದ್ದೇಶಪೂರ್ವಕವಾಗಿ ಅವುಗಳನ್ನೇ ವರದಿ ಮಾಡಿ ಜನರ ದಾರಿ ತಪ್ಪಿಸಲು ಪ್ರಯತ್ನಿಸುತ್ತಿವೆ’ ಎಂದು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು