ಸೋಮವಾರ, ಅಕ್ಟೋಬರ್ 25, 2021
24 °C

Fact Check: ಅಫ್ಗನ್‌ನಲ್ಲಿ ಅಲ್ಪಸಂಖ್ಯಾತರಿಗೆ ಇದೆಂಥಾ ಶಿಕ್ಷೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ತಾಲಿಬಾನ್ ಆಡಳಿತಕ್ಕೆ ಒಳಪಟ್ಟಿರುವ ಅಫ್ಗಾನಿಸ್ತಾನದಲ್ಲಿ ಅಲ್ಪಸಂಖ್ಯಾತರ ಪರಿಸ್ಥಿತಿ ಅಯೋಮಯವಾಗಿದೆ. ತಮ್ಮ ಮತ, ಧರ್ಮಾಚರಣೆ ಬಿಡಲೊಪ್ಪದ ಕ್ರೈಸ್ತ ಸಮುದಾಯದವರನ್ನು ಶಿಕ್ಷೆಗೆ ಗುರಿಪಡಿಸಲಾಗುತ್ತಿದೆ. ಪಾರದರ್ಶಕ ಪ್ಲಾಸ್ಟಿಕ್ ಚೀಲಗಳಲ್ಲಿ ಮೃತದೇಹಗಳನ್ನು ತುಂಬಿ ರಸ್ತೆಯಲ್ಲಿ ಎಸೆಯಲಾಗಿದೆ’ ಎಂದು ಬಿಂಬಿಸುವ ವಿಡಿಯೊವೊಂದು ವೈರಲ್ ಆಗಿದೆ. ಸಾಮಾಜಿಕ ಜಾಲತಾಣ ಬಳಕೆದಾರರು ಇದನ್ನು ಹಂಚಿಕೊಂಡಿದ್ದಾರೆ. 

ಈ ವಿಡಿಯೊ ಅಫ್ಗಾನಿಸ್ತಾನಕ್ಕೆ ಸಂಬಂಧಿಸಿದ್ದಲ್ಲ ಎಂದು ಲಾಜಿಕಲ್ ಇಂಡಿಯನ್ ಫ್ಯಾಕ್ಟ್ ಚೆಕ್ ವೇದಿಕೆ ತಿಳಿಸಿದೆ. ಇನ್‌ವಿಡ್ ಮತ್ತು ರಿವರ್ಸ್ ಇಮೇಜ್ ತಂತ್ರಜ್ಞಾನಗಳ ಮೂಲಕ ಪರಿಶೀಲನೆ ನಡೆಸಿದ್ದು, ಇದು ಕೊಲಂಬಿಯಾದ ಪ್ರತಿಭಟನೆ ದೃಶ್ಯ ಎಂದು ಮಾಹಿತಿ ನೀಡಿದೆ. ಕೊಲಂಬಿಯಾ ಸರ್ಕಾರದ ತೆರಿಗೆ ಏರಿಕೆ ಖಂಡಿಸಿ ಜನರು ನಡೆಸಿದ ವಿನೂತನ ಪ್ರತಿಭಟನೆಯ ವಿಡಿಯೊವನ್ನು ಅಫ್ಗಾನಿಸ್ತಾನದ್ದು ಎಂದು ಬಿಂಬಿಸಲಾಗಿದೆ. ಇದೇ ಮೇ 26ರಂದು ನಡೆದ ಪ್ರತಿಭಟನೆಯ ಸುದ್ದಿಯನ್ನು ಅಲ್ಲಿನ ಪತ್ರಿಕೆಗಳು ಪ್ರಕಟಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು