ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್‌ ಹೊಸ ರೂಪಾಂತರ: ಇಂದು ವಿಶ್ವ ಆರೋಗ್ಯ ಸಂಸ್ಥೆ ಸಭೆ

ಬ್ರಿಟನ್‌, ಜಪಾನ್‌, ಸಿಂಗಪುರದಲ್ಲಿ ಬಿಗಿ ಕ್ರಮ
Last Updated 26 ನವೆಂಬರ್ 2021, 7:16 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ/ ಜಿನೀವಾ: ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಕೋವಿಡ್‌ನ ಹೊಸ ರೂಪಾಂತರ ಬಿ.1.1.529 ತಳಿ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯು ನಿಗಾ ವಹಿಸಿದ್ದು ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ಶುಕ್ರವಾರ ವಿಶೇಷ ಸಭೆ ನಡೆಸಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಾರದ ಆರಂಭದಲ್ಲಿ ಈ ಹೊಸ ರೂಪಾಂತರ ಪತ್ತೆಯಾಗಿದ್ದು ಈಗಾಗಲೇ ನೆರೆಯ ರಾಷ್ಟ್ರ ಬೊಟ್ಸ್‌ವಾನಾ ಸೇರಿದಂತೆ ಹಲವು ರಾಷ್ಟ್ರಗಳಿಗೆ ಹರಡಿದೆ. ಎರಡೂ ಲಸಿಕೆ ಹಾಕಿಸಿಕೊಂಡವರಲ್ಲೂ ಇದು ಕಾಣಿಸಿಕೊಂಡಿದೆ.

ಹಾಂಗ್‌ಕಾಂಗ್‌ನಲ್ಲಿ ಪತ್ತೆ:ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಹೊಸ ರೂಪಾಂತರದ ಎರಡು ಪ್ರಕರಣಗಳು ಹಾಂಗ್‌ಕಾಂಗ್‌ನಲ್ಲಿ ಕೂಡ ಪತ್ತೆಯಾಗಿದೆ ಎಂದು ಸರ್ಕಾರ ಹೇಳಿದೆ.

ಜಪಾನ್‌ನ್‌ನಲ್ಲಿ ಬಿಗಿಕ್ರಮ: ಹೊಸ ರೂಪಾಂತರದ ಕಾರಣ ದಕ್ಷಿಣ ಆಫ್ರಿಕಾ ಮತ್ತು ಆಫ್ರಿಕಾದ ಇತರ ಐದು ರಾಷ್ಟ್ರಗಳಿಂದ ಬರುವ ಪ್ರಯಾಣಿಕರನ್ನು ನಿಯಂತ್ರಿಸಲು ಜಪಾನ್‌ ಸರ್ಕಾರ ಗಡಿಯಲ್ಲಿ ಬಿಗಿ ಕ್ರಮ ಕೈಗೊಂಡಿದೆ.

ಹೊಸ ರೂಪಾಂತರಕ್ಕೆ ಕೋವಿಡ್‌ ಲಸಿಕೆ ಹೆಚ್ಚಿನ ಪರಿಣಾಮ ಬೀರದು ಎಂಬ ಆತಂಕದ ನಡುವೆಯೇ ಬ್ರಿಟನ್‌ ಗುರುವಾರದಿಂದ ದಕ್ಷಿಣ ಆಫ್ರಿಕಾ ಮತ್ತು ಇತರ ಕೆಲ ರಾಷ್ಟ್ರಗಳ ವಿಮಾನಗಳ ಪ್ರವೇಶಕ್ಕೆ ತಾತ್ಕಾಲಿಕ ನಿಷೇಧ ಹೇರಿದೆ.ಸಿಂಗಪುರ ಕೂಡ ಈ ರಾಷ್ಟ್ರಗಳಿಂದ ಬರುವವರ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದೆ ಎಂದು ಆರೋಗ್ಯ ಸಚಿವಾಲಯ ಶುಕ್ರವಾರ ಹೇಳಿದೆ.

ಕೋವಿಡ್‌: ಜೆಕ್‌ ಗಣರಾಜ್ಯದಲ್ಲಿ ದಿನದಲ್ಲಿ 27,717 ಪ್ರಕರಣ

ಜೆಕ್‌ ಗಣರಾಜ್ಯದಲ್ಲಿ ಗುರುವಾರಕೊರೊನಾ ಸೋಂಕಿನ 27,717 ಹೊಸ ಪ್ರಕರಣಗಳು ವರದಿಯಾಗಿದ್ದು ದೇಶದಲ್ಲಿ ಒಟ್ಟು 1 ಕೋಟಿಗೂ ಹೆಚ್ಚು ಪ್ರಕರಣಗಳು ಸಕ್ರಿಯವಾಗಿವೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ಅಕ್ಟೋಬರ್‌ ತಿಂಗಳಲ್ಲಿ 73,200 ಪ್ರಕರಣಗಳು ವರದಿಯಾಗಿದ್ದರೆ, ಕಳೆದ 7 ದಿನಗಳಲ್ಲಿ ಈ ಪ್ರಮಾಣ ತ್ವರಿತ ಗತಿಯಲ್ಲಿ ಏರಿಕೆ ಕಂಡಿದ್ದು 1,31,731 ಪ್ರಕರಣಗಳು ವರದಿಯಾಗಿವೆ.

ಗುರುವಾರ ದಾಖಲಾದ ಪ್ರಕರಣಗಳ ಸಂಖ್ಯೆಯು ಏಳು ದಿನಗಳಲ್ಲೇ ಮೂರನೇ ಬಾರಿಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾದ ಪ್ರಕರಣಗಳಾಗಿವೆ. ಗುರುವಾರದಿಂದ ಬಾರ್ ಮತ್ತು ಕ್ಲಬ್‌ಗಳನ್ನು ರಾತ್ರಿ 10ಕ್ಕೆ ಮುಚ್ಚಬೇಕೆಂದು ಸರ್ಕಾರ ಆದೇಶಿಸಿದೆ. ಅಲ್ಲದೆ ಕ್ರಿಸ್‌ಮಸ್‌ ಮಾರುಕಟ್ಟೆಯನ್ನು ನಿಷೇಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT