ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್ ಬ್ಯಾಲೆನ್ಸ್‌ ನೋಡಿ ತಲೆ ತಿರುಗಿ ಬಿದ್ದ ಮಹಿಳೆ!

ಜೂಲಿಯಾ ಯೋಂಕೊವಾಸ್ಕಿ ಎಂಬ ಮಹಿಳೆ
ಅಕ್ಷರ ಗಾತ್ರ

ಪ್ಲೋರಿಡಾ: ಮಹಿಳೆಯೊಬ್ಬಳು ತನ್ನ ಬ್ಯಾಂಕ್‌ ಖಾತೆಯ ಬಾಕಿ ಮೊತ್ತ ನೋಡಿ ಅಚ್ಚರಿಗೆ ಒಳಗಾಗಿರುವ ಘಟನೆ ಅಮೆರಿಕದ ಪ್ಲೋರಿಡಾ ರಾಜ್ಯದ ಲಾರ್ಗೋ ಎಂಬಲ್ಲಿ ಇತ್ತೀಚೆಗೆ ನಡೆದಿದೆ.

ಪೀಪಲ್ ಮ್ಯಾಗ್‌ಜಿನ್ ವರದಿ ಪ್ರಕಾರ, ಜೂಲಿಯಾ ಯೋಂಕೊವಾಸ್ಕಿ ಎಂಬ ಮಹಿಳೆ 20 ಡಾಲರ್ ತೆಗೆದುಕೊಳ್ಳಲು ಕಳೆದ ಸೋಮವಾರ ಎಟಿಎಂ ಒಂದಕ್ಕೆ ಹೋಗಿದ್ದರು. ಹಣ ಪಡೆದುಕೊಂಡ ನಂತರ ಬಾಕಿ ಮೊತ್ತ ನೋಡಿದಾಗ ಅವರು ಅಚ್ಚರಿಗೆ ಒಳಗಾಗಿದ್ದಾರೆ. ಏಕೆಂದರೆ ಜೂಲಿಯಾ ಅವರ ಬಾಕಿ ಮೊತ್ತ 1 ಬಿಲಿಯನ್ ಡಾಲರ್ (ಸುಮಾರು 7465 ಕೋಟಿ ರೂಪಾಯಿ) ಎಂದು ತೋರಿಸಿದೆ.

ಇದರಿಂದ ಆಘಾತಕ್ಕೆ ಒಳಗಾಗದ ಜೂಲಿಯಾ ಅವರು ತಕ್ಷಣವೇ ತಮ್ಮ ಬ್ಯಾಂಕ್ ಪ್ರತಿನಿಧಿಯನ್ನು ಸಂಪರ್ಕಿಸಿದ್ದಾರೆ. ಆಗ ತಿಳಿದು ಬಂದಿದ್ದೇನೆಂದರೆ, ಜೂಲಿಯಾ 20 ಡಾಲರ್ ಹಣ ಪಡೆದಿದ್ದು ಓವರ್ ಡ್ರಾಫ್ಟ್ ಆಗಿದೆ. ಏಕೆಂದರೆ ಜೂಲಿಯಾ ಖಾತೆ ಅವರ ಗಂಡನೊಂದಿಗೆ ಇದ್ದ ಜಂಟಿ ಖಾತೆಯಾಗಿತ್ತು. ಖಾತೆ ಬಳಸದಿದ್ದರಿಂದ ಅದು ಸ್ಥಗಿತಗೊಂಡಿತ್ತು. ಹೀಗಾಗಿಯೇ ಹಣ ಪಡೆದಾಗ ದಂಡ ಬಿದ್ದಿದೆ.

ನಂತರ ಬಾಕಿ ಮೊತ್ತ ನೋಡಿದಾಗ 1 ಬಿಲಿಯನ್ ಡಾಲರ್ ಎಂಬುದು ಬ್ಯಾಂಕ್‌ನ ತಂತ್ರವಾಗಿತ್ತು ಎಂದು ಬ್ಯಾಂಕ್ ಪ್ರತಿನಿಧಿ ಹೇಳಿದ್ದಾರೆ. ಏಕೆಂದರೆ ವಂಚನೆ ತಡೆಯಲು ಸೂಚಕವಾಗಿ ಆ ಸಂಖ್ಯೆಯನ್ನು ಬಳಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT