ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜರ್ಮನಿಯ ಮ್ಯೂನಿಕ್‌ನಲ್ಲಿ ಮಹಿಳಾ ದಿನಾಚರಣೆ: ವಿಜೃಂಭಿಸಿದ ನಾರೀ ಶಕ್ತಿ

Last Updated 22 ಮಾರ್ಚ್ 2023, 7:38 IST
ಅಕ್ಷರ ಗಾತ್ರ

ಮ್ಯೂನಿಕ್‌: ಇಲ್ಲಿನ ಸಿರಿಗನ್ನಡ ಕೂಟ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಮ್ಯೂನಿಕ್ ಮಹಿಳೆಯರೊಂದಿಗೆ ಸಂಭ್ರಮದಿಂದ ಆಚರಿಸಲಾಯಿತು.

ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಮಹಿಳೆಯರು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.

ಭಾರತ ಸರ್ಕಾರದ ಅಧಿಕಾರಿಯಾದ ಸತ್ಯ ಹೇಮಾ ರಜನಿ ಅವರು ತಮ್ಮ ದೀರ್ಘ ಸೇವಾ ಹಾದಿಯ ಬಗ್ಗೆ ಸಭೆಯಲ್ಲಿ ಹಂಚಿಕೊಂಡರು. ನಾನು ಅಧಿಕಾರಿಯಾಗಿ ಬಂದಾಗ ಮಹಿಳೆಯರು ತೀರಾ ಕಡಿಮೆ ಸಂಖ್ಯೆಯಲ್ಲಿದ್ದರು. ಈಗ ಹೆಚ್ಚು ಹೆಚ್ಚು ಮಹಿಳೆಯರು ಬರುತ್ತಿದ್ದಾರೆ ಎಂದರು. ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಮತ್ತು ಅವರ ಆಸಕ್ತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಜೀವನ ಮತ್ತು ಉದ್ಯೋಗವನ್ನು ಸಮತೂಗಿಸಿಕೊಂಡು ಹೋಗಲು ಮಹಿಳೆಯರಿಗೆ ಸಲಹೆಗಳನ್ನು ನೀಡಿದರು.

ಉದಯೋನ್ಮುಖ ಉದ್ಯಮಿಗಳು ಹೇಗೆ ತಮ್ಮ ಹವ್ಯಾಸವನ್ನು ಉದ್ಯೋಗವನ್ನಾಗಿ ಮಾಡಿಕೊಂಡು ಯಶಸ್ವಿಯಾದ ಬಗ್ಗೆ ರಶ್ಮಿ ಭೂಷಣ್ ವಿವರಿಸಿದರು. ಮಹಿಳೆಯರು ಯಾವುದೇ ಉದ್ಯೋಗವನ್ನು ಆರಂಭಿಸಲು ಅದರ ಬಗ್ಗೆ ಪ್ರೀತಿ ,ಆಸಕ್ತಿ, ಉತ್ಸಾಹ, ಅಚಲ ನಿರ್ಧಾರ ಅತಿ ಮುಖ್ಯ. ಇವುಗಳಿದ್ದರೆ ಸಾಧನೆ ಮಾಡುವುದು ಸುಲಭವೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮಹಿಳೆಯರ ಆರೋಗ್ಯ ,ಊಟೋಪಚಾರ ಹವ್ಯಾಸ ಉತ್ತಮವಾಗಿದ್ದರೆ ಆ ಇಡೀ ಕುಟುಂಬದ ಆರೋಗ್ಯ ಉತ್ತಮವಾಗಿರುತ್ತದೆ . ಹಾಗಾಗಿ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕು. ನಾವು ಉಷ್ಣವಲಯದಿಂದ ಸಮಶೀತೋಷ್ಣವಲಯಕ್ಕೆ ಬಂದುದರಿಂದ ಆರೋಗ್ಯ ಸಮಸ್ಯೆಗಳು ಕೆಲವೊಮ್ಮೆ ಕಾಡುತ್ತವೆ. ಹಾಗಾಗಿ ಅಡುಗೆಯಲ್ಲಿ ಕಾಳು ಮೆಣಸು ,ಶುಂಠಿ ಮುಂತಾದ ಪದಾರ್ಥಗಳನ್ನು ಬಳಸಬೇಕು ಮತ್ತು ಉತ್ತಮ ಜೀವನ ಶೈಲಿಗೆ ಯೋಗ ಧ್ಯಾನವನ್ನು ದಿನನಿತ್ಯ ಮಾಡಬೇಕು ಡಾ.ಅನೂಷ ಶಾಸ್ತ್ರೀ ಉತ್ತಮ ಸಲಹೆಗೆಳನ್ನು ನೀಡಿದರು.

ದೀಪಿಕಾ ಕೊಂಡಜ್ಜಿ ಸೇರಿದಂತೆ ನೂರಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು. ಕೂಟದ ಸದಸ್ಯರಾದ ದಿವ್ಯಾ ಮತ್ತು ವೈಷ್ಣವಿ ಕುಲಕರ್ಣಿ ನಿರೂಪಣೆ ಮಾಡಿದರು. ದೀಪ್ತಿ ನಾಗೇಶ್ , ಮಾಧುರಿ , ಶೃತಿ, ಶ್ರೀವಿದ್ಯಾ, ಲತಾ, ತನುಜಾ ಮತ್ತು ಕಾವ್ಯ ಕಾರ್ಯಕ್ರಮ ಸರಾಗವಾಗಿ ನಡೆಯಲು ತಾಂತ್ರಿಕ ಸಹಾಯ ನೀಡಿದರು.

ವರದಿ: ರೇಷ್ಮಾ ಮೋರ್ಟ, ಮ್ಯೂನಿಕ್‌, ಜರ್ಮನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT