ಬುಧವಾರ, ಅಕ್ಟೋಬರ್ 28, 2020
17 °C

Covid-19 World Update: ಜಗತ್ತಿನಲ್ಲಿ 2.54 ಕೋಟಿಗೂ ಹೆಚ್ಚು ಸೋಂಕಿತರು ಗುಣಮುಖ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ನ್ಯೂ ಯಾರ್ಕ್‌ನ ರೆಸ್ಟೊರೆಂಟ್‌ವೊಂದರ ದೃಶ್ಯ

ಬೆಂಗಳೂರು: ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ಇಳಿಮುಖವಾಗಿರುವುದರಿಂದ ದ್ವೀಪ ರಾಷ್ಟ್ರ ಕ್ಯೂಬಾ ಹವಾನಾದಲ್ಲಿ ಕರ್ಫ್ಯೂ ಮತ್ತು ಲಾಕ್‌ಡೌನ್‌ ತೆರವುಗೊಳಿಸಿದೆ. ಯುರೋಪ್‌ ಹೊರಗಿನ ರಾಷ್ಟ್ರಗಳಿಗೆ ಸಂಚರಿಸಲು ವಿಧಿಸಿದ್ದ ನಿರ್ಬಂಧಗಳನ್ನು ಜರ್ಮನಿ ಸಡಿಲಗೊಳಿಸಿದೆ.

ಭಾರತದಲ್ಲಿಯೂ ಲಾಕ್‌ಡೌನ್‌ ತೆರವುಗೊಳಿಸುವ ಐದನೇ ಹಂತದ ಮಾರ್ಗಸೂಚಿಗಳನ್ನು ಸರ್ಕಾರ ಪ್ರಕಟಿಸಿದೆ. ಅಮೆರಿಕ ಮತ್ತು ಭಾರತದಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಬಾರದಿದ್ದರೂ, ಆರ್ಥಿಕ ಚಟುವಟಿಕೆಗಳನ್ನು ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ.

ಸೋಂಕು ಪ್ರಕರಣಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಅಮೆರಿಕದಲ್ಲಿ ಒಟ್ಟು 74,47,282 ಜನರಿಗೆ ಕೋವಿಡ್-19 ದೃಢಪಟ್ಟಿದೆ. ಈವರೆಗೂ 2,11,740 ಮಂದಿ ಮೃತಪಟ್ಟಿದ್ದರೆ, 46,99,706 ಜನರು ಚೇತರಿಸಿಕೊಂಡಿದ್ದಾರೆ.

ಜಗತ್ತಿನಾದ್ಯಂತ 3.41 ಕೋಟಿಗೂ ಅಧಿಕ ಜನರು ಕೋವಿಡ್-19 ಸೋಂಕಿಗೆ ಒಳಗಾಗಿದ್ದರೆ, 10.18 ಲಕ್ಷಕ್ಕೂ ಹೆಚ್ಚು ಜನರು ಮೃತಪಟ್ಟಿರುವುದು ವರ್ಡೊ ಮೀಟರ್‌ ವೆಬ್‌ಸೈಟ್‌ನಿಂದ ತಿಳಿದು ಬಂದಿದೆ.

ಈವರೆಗೂ 2.54 ಕೋಟಿಗೂ ಹೆಚ್ಚು ಸೋಂಕಿತರು ಗುಣಮುಖರಾಗಿದ್ದಾರೆ. ಒಟ್ಟು 77,09,496 ಕೋವಿಡ್‌ ಪ್ರಕರಣಗಳು ಸಕ್ರಿಯವಾಗಿವೆ.

ಭಾರತದಲ್ಲಿ ಈವರೆಗೂ ಸೋಂಕಿನಿಂದ 98,708 ಮಂದಿ ಸಾವಿಗೀಡಾಗಿದ್ದರೆ, ಬ್ರೆಜಿಲ್‌ನಲ್ಲಿ 1,43,962 ಮಂದಿ, ಮೆಕ್ಸಿಕೊದಲ್ಲಿ 77,646 ಜನರು ಮೃತಪಟ್ಟಿದ್ದಾರೆ.

ಚೀನಾದಲ್ಲಿ ಬುಧವಾರ ಕೋವಿಡ್‌–19 ದೃಢಪಟ್ಟ 12 ಹೊಸ ಪ್ರಕರಣಗಳು ದಾಖಲಾಗಿವೆ. ಚೀನಾದಲ್ಲಿ ಒಟ್ಟು 85,414 ಪ್ರಕರಣಗಳು ದಾಖಲಾಗಿದ್ದು, 4,634 ಜನರು ಮೃತಪಟ್ಟಿರುವುದಾಗಿ ವರದಿಯಾಗಿದೆ.

ಹೆಚ್ಚು ಸಕ್ರಿಯ ಪ್ರಕರಣಗಳಿರುವ ರಾಷ್ಟ್ರಗಳು:

* ಅಮೆರಿಕ: 25,35,836
* ಭಾರತ: 9,41,552
* ಬ್ರೆಜಿಲ್‌: 4,89,248
* ಫ್ರಾನ್ಸ್‌: 4,34,782
* ರಷ್ಯಾ: 1,97,307
* ಅರ್ಜೆಂಟಿನಾ: 1,39,419
* ಮೆಕ್ಸಿಕೊ: 1,31,684
* ಉಕ್ರೇನ್‌: 1,12,470
* ಪೆರು: 98,551

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು