ಮಾಲೆ (ಮಾಲ್ಡೀವ್ಸ್): ಬೆತ್ ನೀಲ್ (ದಕ್ಷಿಣ ಆಫ್ರಿಕಾ) ಮತ್ತು ಮೈಲ್ಸ್ ಕ್ಲೌಟಿಯರ್ (ಕೆನಡಾ) ಎಂಬ ಜೋಡಿ ನೀರೊಳಗಿನ ಚುಂಬನದ ವಿಶ್ವ ದಾಖಲೆಯನ್ನು ಮುರಿದು ಪ್ರೇಮಿಗಳ ದಿನವನ್ನು ಆಚರಿಸಿದ್ದಾರೆ.
ಈ ದಂಪತಿ ನೀರಿನ ಕೊಳದಲ್ಲಿ ಮುಳುಗಿ 4 ನಿಮಿಷ 6 ಸೆಕೆಂಡುಗಳ ಕಾಲ ಚುಂಬಿಸುವ ಮೂಲಕ ದಾಖಲೆ ಸೃಷ್ಟಿ ಮಾಡಿದ್ದಾರೆ ಎಂದು ಗಿನ್ನಿಸ್ ವಿಶ್ವ ದಾಖಲೆ ಹೇಳಿದೆ.
ಇದಕ್ಕೂ ಮೊದಲು 13 ವರ್ಷಗಳ ಹಿಂದೆ 3 ನಿಮಿಷ 24 ಸೆಕೆಂಡುಗಳ ಅವಧಿಯ ವರೆಗೆ ಚುಂಬಿಸಿದ್ದೇ ಈ ವರೆಗಿನ ದಾಖಲೆಯಾಗಿತ್ತು. ಅದನ್ನು ಈ ದಂಪತಿ ಮುರಿದಿದ್ದಾರೆ.
ಮುಳುಗು ತಜ್ಞರಾಗಿರುವ ಇಬ್ಬರೂ, ಸದ್ಯ ದಕ್ಷಿಣ ಆಫ್ರಿಕಾದಲ್ಲಿ ನೆಲೆಸಿದ್ದಾರೆ. ಜೋಡಿಗೆ ನೆವ್ ಎಂಬ ಹೆಸರಿನ ಒಂದೂವರೆ ವರ್ಷದ ಮಗಳಿದ್ದಾಳೆ. ಗಿನ್ನಿಸ್ ದಾಖಲೆಗೆಂದೇ ಇಬ್ಬರೂ ಮಾಲ್ಡೀವ್ಸ್‌ಗೆ ಪ್ರಯಾಣಿಸಿದ್ದರು. ಸೋಮವಾರ ಬೆಳಗ್ಗೆ 7.30ರಲ್ಲಿ ಈ ವಿಶ್ವದಾಖಲೆ ರಚನೆಯಾಯಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.