ಶನಿವಾರ, ಮೇ 21, 2022
27 °C

ಬಾಹ್ಯಾಕಾಶ ದೂರದರ್ಶಕ ‘ಜೇಮ್ಸ್‌ ವೆಬ್‌’ ಉಡಾವಣೆ

ಎಎಫ್‌ಪಿ, ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕುರು (ಫ್ರೆಂಚ್ ಗಯಾನಾ): ವಿಶ್ವದ ಅತ್ಯಂತ ಶಕ್ತಿಶಾಲಿ ಬಾಹ್ಯಾಕಾಶ ದೂರದರ್ಶಕ ಎನ್ನಲಾಗಿರುವ ನಾಸಾದ ‘ಜೇಮ್ಸ್‌ ವೆಬ್‌’ ದೂರದರ್ಶಕವನ್ನು ಫ್ರೆಂಚ್‌ ಗಯಾನಾದ ಕುರು ಉಪಗ್ರಹ ಉಡಾವಣಾ ಕೇಂದ್ರದಿಂದ ಶನಿವಾರ ಉಡಾಯಿಸಲಾಯಿತು.

ಇದು ಭೂಮಿಯಿಂದ 15 ಲಕ್ಷ ಕಿ.ಮೀ (9,30,000 ಮೈಲು) ದೂರದ ಕಕ್ಷೆ ಸೇರುವ ಗುರಿ ಹೊಂದಿದೆ. ಈ ದೂರದರ್ಶಕವು ಬಲಿಷ್ಠ ‘ಏರಿಯನ್‌ 5’ ರಾಕೆಟ್‌ನೊಂದಿಗೆ ಪ್ರಯಾಣ ಬೆಳೆಸಿದ್ದು, ಒಂದು ತಿಂಗಳಲ್ಲಿ ತನ್ನ ಗಮ್ಯ ಸ್ಥಾನ ತಲುಪಲಿದೆ.

ಹಬಲ್ ದೂರದರ್ಶಕಕ್ಕಿಂತ ಹಲವು ಪಟ್ಟು ಶಕ್ತಿಶಾಲಿಯಾಗಿರುವ ಇದು, ವಿಶ್ವ ಹೇಗೆ ಉಗಮವಾಯಿತು ಎಂಬುದನ್ನು ಅರಿತುಕೊಳ್ಳಲು ನೆರವಾಗಲಿದೆ. ನಾವು ಈವರೆಗೆ ನೋಡಿರುವ ಗೆಲಾಕ್ಸಿಗಳಿಗಿಂತಲೂ ಬಹುದೂರವಿರುವ ಗೆಲಾಕ್ಸಿಗಳನ್ನು ಈ ದೂರದರ್ಶಕವು ಸೆರೆ ಹಿಡಿಯುವ ಸಾಮರ್ಥ್ಯ ಹೊಂದಿದೆ. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು