ಸೋಮವಾರ, ಜನವರಿ 17, 2022
18 °C

ಅಮೆರಿಕದೊಂದಿಗಿನ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳಲು ಚೀನಾ ಸಿದ್ಧ: ಷಿ ಜಿನ್‌ಪಿಂಗ್

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

ಬೀಜಿಂಗ್‌: ಅಮೆರಿಕದೊಂದಿಗಿನ ಭಿನ್ನಾಭಿಪ್ರಾಯಗಳನ್ನು ಸೂಕ್ತ ರೀತಿಯಲ್ಲಿ ಬಗೆಹರಿಸಿಕೊಳ್ಳಲು ಚೀನಾ ಸಿದ್ಧವಾಗಿದೆ ಎಂದು ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು ತಿಳಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಮತ್ತು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರ ನಡುವೆ ಸದ್ಯದರಲ್ಲೇ ವರ್ಚುವಲ್‌ ಸಭೆಯೊಂದು ಏರ್ಪಡುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಷಿ ಜಿನ್‌ಪಿಂಗ್‌ ಮಾತನಾಡಿದ್ದಾರೆ.

ಅಮೆರಿಕದಲ್ಲಿರುವ ಚೀನಾದ ರಾಯಭಾರಿ ಕ್ವಿನ್ ಗ್ಯಾಂಗ್ ಅವರು ವಾಷಿಂಗ್ಟನ್‌ನಲ್ಲಿ ನಡೆದ ಅಮೆರಿಕ-ಚೀನಾ ಸಂಬಂಧಗಳ ರಾಷ್ಟ್ರೀಯ ಸಮಿತಿಯ ಭೋಜನಕೂಟದಲ್ಲಿ ಚೀನಾ ಅಧ್ಯಕ್ಷರ ಸಂದೇಶ ಪ್ರಸ್ತುತಪಡಿಸಿದರು. ‌‘ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳಲ್ಲಿ ಅಮೆರಿಕದೊಂದಿಗೆ ಸಹಕರಿಸಲು ಚೀನಾ ಸಿದ್ಧವಾಗಿದೆ,’ ಎಂದು ಷಿ ಹೇಳಿರುವುದಾಗಿ ಕ್ವಿನ್‌ ಗ್ಯಾಂಗ್‌ ತಿಳಿಸಿದರು.

ಬೈಡನ್‌ ಮತ್ತು ಷಿ ಸಭೆಯ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಆದರೆ ಮುಂದಿನ ವಾರದಲ್ಲಿ ಸಭೆ ನಡೆಯುವ ಸಾಧ್ಯತೆಗಳಿವೆ ಎಂದು ಗೊತ್ತಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು