ಶುಕ್ರವಾರ, ಜನವರಿ 27, 2023
26 °C

ಉಕ್ರೇನ್ ಸ್ವಾತಂತ್ರ್ಯೋತ್ಸವದಂದು ರಷ್ಯಾದ ಕ್ರೂರ ದಾಳಿ: ಝೆಲೆನ್‌ಸ್ಕಿ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೀವ್‌, ಉಕ್ರೇನ್‌ : ಮುಂದಿನ ವಾರದಲ್ಲಿ (ಬುಧವಾರ) 31ನೇ ಸ್ವಾತಂತ್ರ್ಯೋತ್ಸವ ಆಚರಿಸಲು ಸಜ್ಜಾಗಿರುವ ಉಕ್ರೇನ್‌ ಮೇಲೆ ಏನಾದರೊಂದು ಕ್ರೂರವಾದ ದಾಳಿ ನಡೆಸಲು ರಷ್ಯಾ ಸಜ್ಜಾಗಿರಬಹುದು ಎಂದು ಉಕ್ರೇನ್‌ ಅಧ್ಯಕ್ಷ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಭಾನುವಾರ ಎಚ್ಚರಿಸಿದ್ದಾರೆ.

ಶನಿವಾರ ವಿಡಿಯೊ ಭಾಷಣ ಮಾಡಿರುವ ಝೆಲೆನ್‌ಸ್ಕಿ, ರಷ್ಯಾ ಸೇನಾ ಕಾರ್ಯಾಚರಣೆ ಶುರುವಾಗಿ ಇದೇ 24ಕ್ಕೆ ಆರು ತಿಂಗಳು ತುಂಬಲಿದೆ. ಇದೇ ವೇಳೆ ದೇಶದ ಜನತೆ ಸ್ವಾತಂತ್ರ್ಯೋತ್ಸವದಲ್ಲಿ ಮೈಮರೆಯಬಹುದೆಂದು ರಷ್ಯಾ ಭಾವಿಸಿ, ಉಕ್ರೇನಿಗರ ಮೇಲೆ ಕ್ರೌರ್ಯ ಮೆರೆಯುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.

ದೇಶದ ರಾಜಧಾನಿ ಕೀವ್‌, ಸಾರ್ವಜನಿಕರು ಒಂದೇ ಕಡೆ ಹೆಚ್ಚಿನ ಸಂಖ್ಯೆಯಲ್ಲಿ ಒಟ್ಟುಗೂಡುವುದನ್ನು ಇದೇ 22ರಿಂದ 25ರವರೆಗೆ ನಿಷೇಧಿಸಿದೆ. ಹಾಗೆಯೇ ಹಾರ್ಕಿವ್‌ನಲ್ಲಿ ಇದೇ 23ರಿಂದ 25ರವರೆಗೆ ನಿಷೇಧಾಜ್ಞೆ ಘೋಷಿಸಲಾಗಿದೆ.

‘ಕೀವ್‌ ಸೇರಿ ನಮ್ಮ ಹಲವು ನಗರಗಳ ಮೇಲೆ ರಷ್ಯಾ ಬಾಂಬ್‌ಗಳ ಸುರಿಮಳೆ ಮತ್ತು ನೌಕಾ ಕ್ಷಿಪಣಿ ದಾಳಿಯನ್ನು ಇನ್ನಷ್ಟು ತೀವ್ರಗೊಳಿಸುವ ಸಾಧ್ಯತೆ ಇದೆ’ ಎಂದು ಉಕ್ರೇನ್‌ ಅಧ್ಯಕ್ಷರ ಸಲಹೆಗಾರ ಮಿಖಾಯ್ಲೊ ಪೊಡಲಿಯಾಕ್‌ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು