ಬೆಂಗಳೂರಿನ ಮಕ್ಕಳಿಗೆಲ್ಲ ಕುಂಟಾಬಿಲ್ಲೆ, ಲಗೋರಿ, ಚಿಣ್ಣಿ ದಾಂಡು ಇವೆಲ್ಲ ಆಟಗಳು ಗೊತ್ತಿವೆಯೇ? ಮಕ್ಕಳು ಯಾವತ್ತಾದರೂ ಗುಲೇರ್, ಕಾಣೆಬಿಲ್ಲು ಹಿಡಿದು ಹಣ್ಣು, ಕಾಯಿಗಳನ್ನು ಉದುರಿಸಿದ್ದಾರೆಯೇ? ಕಪ್ಪೆಯಂತೆ ಕುಣಿದು ಕುಪ್ಪಳಿಸಿ, ಕುದುರೆಯಂತೆ ನೆಗೆದು ಓಡಿ ಗೊತ್ತಿದೆಯೇ?
ಊಟ ಮಾಡುವಾಗ ಫೋನು, ಶಾಲೆಯಲ್ಲಿ ಚೂರು ಆಟ ಜೊತೆಗೆ ಪಾಠ, ಆಟವೆಂದರೆ ಅಕಾಡೆಮಿಗಳಿಗೆ ಹೋಗಿ ಅಭ್ಯಾಸ ಮಾಡುವುದಷ್ಟೆ ಅಂದುಕೊಂಡಿರುವ ಮಕ್ಕಳೇ ಹೆಚ್ಚು ಎಂದು ಗೊಣಗುವ ಪಾಲಕರಿಗೆ, ಅಜ್ಜ ಅಜ್ಜಿಯಂದಿರಿಗೆ ಸಮಾಧಾನವಾಗುವಂಥ ಚಿತ್ರಾವಳಿಯೊಂದನ್ನು ಪ್ರಜಾವಾಣಿಯ ಫೋಟ್ರೊ ಜರ್ನಲಿಸ್ಟ್ ಕಿಶೋರ್ ಕುಮಾರ್ ಬೋಳಾರ್ ಸೆರೆ ಹಿಡಿದಿದ್ದಾರೆ.
1 ತನ್ನ ತಾಳಕ್ಕೆ ಮನೆಮಂದಿಯನ್ನೆಲ್ಲ ಕುಣಿಸುವ ಪೋರ ಡೋಲು ಹಿಡಿದು ನಿಂತಿದ್ದಾನೆ. ಹೆತ್ತವರಿಗೆ ಹಣ ಕೊಟ್ಟು ತಲೆನೋವು ಕೊಳ್ಳಬೇಕೆ ಎಂಬ ಗೊಂದಲ. ಆದರೆ ವಾದ್ಯ ನುಡಿಸಲೇಬೇಕು ಎಂಬ ಹಟ ಈ ಪುಟಾಣಿಗೆ.
2 ಮನೆಯ ಬಳಿ ಇರುವ ಕ್ರೀಡಾಂಗಣದಲ್ಲಿ ಜೊತೆಯಾಗಿರುವ ಮಕ್ಕಳೆಲ್ಲ ಖುಷಿಯಿಂದ ಕಪ್ಪೆಯಂತೆ ಕುಪ್ಪಳಿಸುವ ಯತ್ನದಲ್ಲಿದ್ದರೆ, ಚಿಣ್ಣನೊಬ್ಬ, ಚಿನ್ನಾರಿಮುತ್ತನ ಲುಕ್‌ನಲ್ಲಿ ಚೆಂಡು ಒದೆಯುವ ಸಂಭ್ರಮದಲ್ಲಿದ್ದಾನೆ. (4)
3 ಒಂದು ತಲೆ ಮಾರು, ಒಡೆದ ಟೈರು, ತೆಂಗಿನಗರಿ ಮೇಲೆ ಕುಳಿತರೆ ಸ್ನೇಹಿತರ ದರದರದರ ಎಳೆದೊಯ್ಯುತ್ತಿದ್ದರು. ಇಲ್ಲಿ ತಳ್ಳುಗಾಡಿ ಸಿಕ್ಕಿದ್ದೇ ನಾಲ್ಕಾರು ಜನ ಎಗರಿ ಕುಳಿತು ಹೊರಟರು.. ಅಂಬಾರಿ ಸವಾರಿ ಎಂಬ ಸಂತೋಷದಲ್ಲಿ..
ಸಾಕಾಯ್ತಪ್ಪಾ.. ಸಾಕು ಸಾಕಾಯ್ತು.. ಈ ಊರಲ್ಲಿ ಗಳಿಗೆಗೆ ಒಂದು ಥರ ಹವಾಮಾನ. ಮಳೆಗೆ ಮುದುರಿದ್ದೆ. ಚಳಿಗೆ ತತ್ತರಿಸಿದ್ದೆ. ಬಿಸಿಲಿಗೆ ಬಸವಳಿದೆ. ಅಪ್ಪನ ಸೈಕಲ್‌ನ ಕ್ಯಾರಿಯರ್‌ಗೆ ಬೆನ್ನು ಆನಿ, ಸೀಟಿನ ಮೇಲೆ ಕಾಲಿರಿಸಿ ವಿರಮಿಸಿದರೆ... ಆಹಹಾ.. ನೀಲಾಗಾಸದ ನೋಟ. ಅಪ್ಪ ಮಾರುವ ಬಲೂನುಗಳಲ್ಲಿ ಕೆಲವೊಮ್ಮೆ ನಮ್ಮೆಲ್ಲರ ಉಸಿರು ಬಂಧಿಯಾಗಿಸಿ ಹಾರಿಬಿಡುತ್ತೇವೆ. ನಿಟ್ಟುಸಿರುಗಳೆಲ್ಲ ಹಗುರಾಗಿ ಹಾರಲಿ ಎಂದು.. ಎಂಬಂತೆ ನಿಟ್ಟಿಸುತ್ತಿದ್ದಾನೆ.
ಒಂದಿನಿತು ಜಾಗ ಸಿಕ್ಕರೂ ಮಕ್ಕಳು ತಮ್ಮ ಸಾಮ್ರಾಜ್ಯ ಸ್ಥಾಪಿಸುವ ನಗರದ ನೋಟಗಳೇ ಚಂದ.
ಪ್ರಜಾ ಪ್ಲಸ್ ಚಿತ್ರಾವಳಿ: ನಗರದ ಮಕ್ಕಳ ಆಟೋಟಗಳು ನಗರದಲ್ಲಿ ವಾಸಿಸುವ ಮಕ್ಕಳು ಯಾವ ರೀತಿಯಾಗಿ ತಮ್ಮ ಸಮಯವನ್ನು ಕಳೆಯುತ್ತಾರೆ ಅನ್ನುವ ಒಂದು ನೋಟ.
ಪ್ರಜಾವಾಣಿ ಚಿತ್ರ ಕಿಶೋರ್ ಕುಮಾರ್ ಬೋಳಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.