ಬುಧವಾರ, ಜನವರಿ 20, 2021
28 °C

ಮಾವಿನ ಬೆಳೆ ರಕ್ಷಣೆಗೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀನಿವಾಸಪುರ: ಮಾವು ಬೆಳೆಗಾರರು ಮಾವಿನ ಬೆಳೆ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಉತ್ತಮ ಗುಣಮಟ್ಟದ ಮಾವಿನ ಫಸಲು ಪಡೆಯಲು ಪೂರಕವಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೊಗಳಗೆರೆ ಮಾವು ಅಭಿವೃದ್ಧಿ ಕೇಂದ್ರದ ತೋಟಗಾರಿಕೆ ಉಪ ನಿದರ್ೇಶಕ ಎಚ್.ಟಿ.ಬಾಲಕೃಷ್ಣ ಸಲಹೆ ಮಾಡಿದ್ದಾರೆ.

ಈಗ ಮಾವು ಹಂಗಾಮು ಪ್ರಾರಂಭವಾಗಿದೆ. ಮಾವು ಬೆಳೆಯುವ ಪ್ರದೇಶದಲ್ಲಿ ಹೂತೆನೆ ಹೊರಹೊಮ್ಮಿದ್ದು, ಕೆಲವು ಕಡೆ ಕಾಯಿ ಕಚ್ಚಿದೆ. ಆದರೆ ರಾಜ್ಯಾದ್ಯಂತ ವಾತಾವರನ ವೈಪರೀತ್ಯ ಉಂಟಾಗಿದೆ. ಮೋಡ ಕವಿದ ವಾತಾವರಣ ಹಾಗೂ ತುಂತುರು ಮಳೆ ಮಾವಿನ ಬೆಳೆಗೆ ಮಾರಕವಾಗಿ ಪರಿಣಮಿಸಿದೆ. ಇಂಥ ಸಂದರ್ಭದಲ್ಲಿ ಹೂ ಕಪ್ಪಾಗುವುದನ್ನು ತಪ್ಪಿಸಲು, ಬೂದಿರೋಗದಿಂದ ಪಾರುಮಾಡಲು, ಹಾಗೂ ಒಣಗದಂತಿರಲು ರೈತರು ಸಿಲೀಂದ್ರ ನಾಶಕ ಸಿಂಪಡಣೆ ಮಾಡಬೇಕು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮಾವಿನ ಹೂ ರಕ್ಷಣೆಗೆ ಹೆಕ್ಸಾಕೋನ್ಜೋಲ್2.0 ಮಿ.ಲೀ (5%ಇಸಿ) ಅಥವಾ ಥಯೋಫಿನೆಟ್ ಮಿಥೈಲ್ 1 ಗ್ರಾಂ (70%ಡಬ್ಲ್ಯುಪಿ) ಔಷಧಿಯನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು ಎಂದು ಸಲಹೆ ಮಾಡಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಹತ್ತಿರದ ತೋಟಗಾರಿಕೆ ಅಧಿಕಾರಿಗಳು ಅಥವಾ ಮಾವು ಅಭಿವೃದ್ಧಿ ನಿಗಮದ ಅಧಿಕಾರಿಗಳನ್ನು ಸಂಪಕರ್ಿಸುವಂತೆ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು