ಭಾನುವಾರ, ಫೆಬ್ರವರಿ 23, 2020
19 °C
ರಾಷ್ಟ್ರೀಯ ತೋಟಗಾರಿಕಾ ಮೇಳ

ಕೈ ಬೀಸಿ ಕರೆಯುತ್ತಿದೆ ಡ್ರಾಗನ್ ಹಣ್ಣಿನ ತೋಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಲಹಂಕ: ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯಲ್ಲಿ ಆಯೋಜಿಸಿರುವ ರಾಷ್ಟ್ರೀಯ ತೋಟಗಾರಿಕಾ ಮೇಳದಲ್ಲಿ ಡ್ರಾಗನ್ ಹಣ್ಣಿನ ಬಿಳಿ ಮತ್ತು ಕೆಂಪು ತಿರುಳಿನ ಪ್ರಾತ್ಯಕ್ಷಿಕೆಯ ತಾಕುಗಳು ಜನರ ಗಮನ ಸೆಳೆಯುತ್ತಿವೆ.

ಮಳಿಗೆಗಳಿಗೆ ಭೇಟಿ ನೀಡುವ ಸ್ಥಳದ ಸಮೀಪದಲ್ಲಿ ಈ ತಾಕು ಇದೆ. ಜನರು ಕುತೂಹಲದಿಂದ ಈ ಬೆಳೆ ವೀಕ್ಷಿಸುತ್ತಿದ್ದಾರೆ.
‘ಗಿಡದಿಂದ ಗಿಡಕ್ಕೆ 8 ರಿಂದ 10 ಅಡಿ ಅಂತರದಲ್ಲಿ ಕಂಬಗಳನ್ನು ನಿರ್ಮಿಸಲಾಗಿದೆ. ಅದರ ಮೇಲೆ ಸಿಮೆಂಟ್ ರಿಂಗುಗಳನ್ನು ಅಳವಡಿಸಿ, ಗಿಡವು ನಾಲ್ಕೂ ಕಡೆಗಳಿಂದ ಹಬ್ಬುವ ರೀತಿಯಲ್ಲಿ ಕಲ್ಲುಚಪ್ಪಡಿಗಳನ್ನು ಆಧಾರವಾಗಿಟ್ಟು ಕಡಿಮೆ ನೀರು ಮತ್ತು ಕಡಿಮೆ ಗೊಬ್ಬರವನ್ನು ಬಳಸಿ ಈ ಬೆಳೆಯನ್ನು ಬೆಳೆಯಲಾಗಿದೆ’ ಎಂದು ಐಐಎಚ್ಆರ್ ಸಂಸ್ಥೆಯ ಪ್ರಧಾನ ವಿಜ್ಞಾನಿ ಡಾ.ಬಿ.ನಾರಾಯಣಸ್ವಾಮಿ ತಿಳಿಸಿದರು.

‘ಗಿಡನೆಟ್ಟ 6 ತಿಂಗಳಿಗೆ ಹೂವು ಬಿಡಲು ಆರಂಭವಾಗುತ್ತದೆ. ಒಂದು ಗಿಡದಿಂದ 16 ರಿಂದ 18 ಡ್ರಾಗನ್ ಹಣ್ಣುಗಳನ್ನು ಬೆಳಯಬಹುದಾಗಿದೆ. ಇಂದು ಮಾರುಕಟ್ಟೆಯಲ್ಲಿ ಕೆ.ಜಿಗೆ ₹120ರಿಂದ ₹250 ಬೆಲೆ ಇದೆ. ಒಂದು ಹಣ್ಣಿನ ತೂಕ 400 ಗ್ರಾಂನ ವರೆಗೆ ಇರುತ್ತದೆ’ ಎಂದರು.

‘ಆರೋಗ್ಯದ ದೃಷ್ಟಿಯಿಂದ ಈ ಹಣ್ಣು ಉಪಯುಕ್ತವಾಗಿದ್ದು, ಬಿಳಿ ರಕ್ತಕಣಗಳ ಸಂಖ್ಯೆಯನ್ನು ಹೆಚ್ಚಿಸುವಲ್ಲಿ ಸಹಕಾರಿ ಎಂಬುದು ವೈದ್ಯಕೀಯವಾಗಿ ಸಾಬೀತಾಗಿದೆ’ ಎಂದು ತಿಳಿಸಿದರು.

‘ರಾಜ್ಯದಲ್ಲಿ 18ರಿಂದ 20 ರೈತರು ಈ ಹಣ್ಣು ಬೆಳೆಯುತ್ತಿದ್ದಾರೆ. ಒಂದು ಎಕರೆಯಲ್ಲಿ 8ರಿಂದ 8 ಅಡಿಗೆ 400ರಿಂದ 800 ಗಿಡಗಳನ್ನು ಬೆಳಸಲು ಸಾಧ್ಯವಿದೆ. ಹಣ್ಣು ಬೆಳೆದ ನಂತರ ಗಿಡಗಳನ್ನು ಮಾರಾಟ ಮಾಡಿ ಲಾಭ ಗಳಿಸಬಹುದಾಗಿದೆ. ಸದ್ಯದ ಪರಿ ಸ್ಥಿತಿಯಲ್ಲಿ ಈ ಬೆಳೆಗೆ ಹೆಚ್ಚಿನ ಬೇಡಿಕೆಯಿದೆ’ ಎಂದು ಅವರು ಮಾಹಿತಿ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು