ಮೋತಿಗುಡ್ಡದಿಂದ ದೊರೆಕಟ್ಟೆಗೆ ಹೋಗುವ ಶಿಖರದಂತಿರುವ ಗುಡ್ಡದ ಇಳಿಜಾರಿನಲ್ಲಿ ಮಾತ್ರ ಕಂಡು ಬರುವ ಈ ಅಡಿಕೆಗೆ ‘ಪಾಂಡವರ ಅಡಿಕೆ’ ಎಂದು ಸ್ಥಳೀಯರು ಕರೆಯುತ್ತಾರೆ. ಪಾಂಡವರು ವನವಾಸದಲ್ಲಿದ್ದಾಗ ಈ ಅಡಿಕೆಯನ್ನು ನೆಟ್ಟಿದ್ದಾರೆಂಬ ಪ್ರತೀತಿ ಇದೆ. ಅತ್ಯಂತ ಚುಗುರಾದ, ತಿನ್ನಲು ಬಾರದ ಈ ಅಡಿಕೆಯನ್ನು ಸುಲಿದಾಗ ನಮ್ಮ ‘ಮಾಣಿ’ ಅಡಿಯನ್ನು ಹೋಲುತ್ತದೆ. ತೋಟದ ಅಡಿಕೆ ಸಿಂಗಾರ ಬಿಡುವ ಸಮಯದಲ್ಲಿಯೇ ಹೂ ಬಿಡುವ ಈ ಅಡಿಕೆಮರ ಮೂರರ ತನಕ ಗೊನೆ ಬಿಡುತ್ತದೆ. ಸಿಂಗಾರ ನಮ್ಮ ತೋಟದಲ್ಲಿಯ ಸಿಂಗಾರಕಿಂತಲೂ ಅತಿ ಹೆಚ್ಚು ಆಕರ್ಷಕ. ನಮ್ಮ ಅಡಿಕೆಮರಗಳಿಗಿಂತ ತೆಳ್ಳಗೆ ಇರುವ ಈ ಗಿಡಗಳನ್ನು ಆಲಂಕಾರಿಕ ಗಿಡಗಳಾಗಿ ಬೆಳೆಯಬಹುದು.
ಇದು ಅಪರೂಪದ ಸಸ್ಯವಾಗಿದ್ದು ಇದರ ವೈಜ್ಞಾನಿಕ ಹೆಸರು Arecaceae ಇದ್ದುBercht ಎನ್ನುವ ಕುಟುಂಬದಾಗಿದ್ದು Plantae ಎನ್ನುವ ಕಿಂಗ್ಡಮ್ ಗೆ ಸೇರಿದ ಗಿಡವಾಗಿದೆ ಎನ್ನುತ್ತಾರೆ ಸಸ್ಯಶಾಸ್ತ್ರಜ್ಞೆ ಪ್ರೊ.ವಾಣಿಶ್ರೀ ಹೆಗಡೆ.