ರೈತರಿಗೆ ಸುಧಾರಿತ ಕೃಷಿ ಪದ್ಧತಿಗಳ ಬಗ್ಗೆ ಸಮಗ್ರ ಮಾಹಿತಿ ಮತ್ತು ಮಾರ್ಗದರ್ಶನ ನೀಡುವ 'ಮಾರ್ಗದರ್ಶಿ ಪುಸ್ತಕ' ವೊಂದನ್ನುಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಹೊರತಂದಿದೆ.

ಉಪಯುಕ್ತ ಮಾಹಿತಿಗಳ ಕಣಜದಂತಿರುವ ‘ಕೃಷಿ ಬೆಳೆಗಳ ಸುಧಾರಿತ ಬೇಸಾಯ ಪದ್ಧತಿ’ ಪ್ರತಿಯೊಬ್ಬ ರೈತರ ಮನೆಯಲ್ಲಿರಬೇಕಾದ ಪುಸ್ತಕ. ರೈತರು ಪುಸ್ತಕವನ್ನು ಪಿಡಿಎಫ್ ರೂಪದಲ್ಲಿ ಉಚಿತವಾಗಿ ಮೊಬೈಲ್ನಲ್ಲಿಯೂ ಡೌನ್ಲೋಡ್ ಮಾಡಿಕೊಂಡು ಓದಬಹುದು.

ದಕ್ಷಿಣ ಕರ್ನಾಟಕದ ಹತ್ತು ಜಿಲ್ಲೆಗಳ ಹವಾಗುಣ, ಮಳೆ ದಿನ ಮತ್ತು ಪ್ರಮಾಣ, ಉಷ್ಣಾಂಶ, ಮಣ್ಣಿನ ಆರೋಗ್ಯ, ಪೋಷಕಾಂಶ, ಬೆಳೆ ನಿರ್ವಹಣೆ, ಇಳುವರಿ, ರೈತರಿಗೆ ಕೃಷಿ ವಿಶ್ವವಿದ್ಯಾಲಯದಲ್ಲಿ ದೊರೆಯುವ ಸೌಲಭ್ಯ ಇತ್ಯಾದಿ ಮಾಹಿತಿಗಳ ಕೃಷಿ ಜ್ಞಾನ ಭಂಡಾರದಂತೆ ಕೆಲಸ ಮಾಡುತ್ತದೆ.

‘ರೈತರ ಆಪ್ತ ಮಾರ್ಗದರ್ಶಿಯಂತಿರುವ ಈ ಪುಸ್ತಕ ಮನೆಯಲ್ಲಿದ್ದರೆ ಸಾಕು, ಸಲಹೆ, ಸೂಚನೆ ಕೇಳಿ ರೈತರು ಯಾರ ಬಳಿಯೂ ಅಲೆದಾಡುವ ಅವಶ್ಯಕತೆ ಇಲ್ಲ. ಕೃಷಿ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುವ ದಕ್ಷಿಣ ಕರ್ನಾಟಕದ ಹತ್ತು ಜಿಲ್ಲೆಗಳ ರೈತರ ಅವಶ್ಯಕತೆ ಮತ್ತು ಈ ಪ್ರದೇಶದಲ್ಲಿ ಬೆಳೆಯುವ ಬೆಳೆಗಳನ್ನು ಗಮನದಲ್ಲಿರಿಸಿಕೊಂಡು ಈ ಪುಸ್ತಕ ರೂಪಿಸಲಾಗಿದೆ’ ಎನ್ನುತ್ತಾರೆಕುಲಪತಿ ಡಾ.ಎಸ್. ರಾಜೇಂದ್ರಪ್ರಸಾದ್.

220 ಪುಟಗಳ ಪುಸ್ತಕದ ಬೆಲೆ ₹200. ಪಿಡಿಎಫ್ ರೂಪದ ಪುಸ್ತಕ ಪಡೆಯಲು ವಾಟ್ಸ್ಆ್ಯಪ್ ಸಂಖ್ಯೆ9972035456 ಅಥವಾ 9591347043 ಸಂದೇಶ ಕಳಿಸಬಹುದು. ಕೃಷಿ ವಿಶ್ವವಿದ್ಯಾಲಯದ ಅಂತರ್ಜಾಲತಾಣ www.uasbangalore.edu.in ಇದರ e-Krishi AGRI Portal ಭೇಟಿ ನೀಡಬಹುದು.

ಪುಸ್ತಕ ದೊರೆಯುವ ವಿಳಾಸ: ಕೃಷಿ ತಂತ್ರಜ್ಞಾನ ಮಾಹಿತಿ ಕೇಂದ್ರ, ವಿಸ್ತರಣಾ ನಿರ್ದೇಶನಾಲಯ, ಜಿಕೆವಿಕೆ ಕ್ಯಾಂಪಸ್, ಬೆಂಗಳೂರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.