ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿದಾನಂದ ಪ್ರಶಸ್ತಿ

Last Updated 9 ಮೇ 2011, 19:30 IST
ಅಕ್ಷರ ಗಾತ್ರ

ಚಿದಾನಂದ ಪ್ರಶಸ್ತಿ ಪ್ರದಾನ ಸಮಿತಿ: ಮಂಗಳವಾರ ಭಾಷಾ ವಿಜ್ಞಾನಿ ಡಾ. ಕೆ.ಕುಶಾಲಪ್ಪ ಗೌಡ ಅವರಿಗೆ ‘ಚಿದಾನಂದ ಪ್ರಶಸ್ತಿ’ ಪ್ರದಾನ. ಅಭಿನಂದನಾ ಭಾಷಣ: ಪ್ರೊ.ನಂ.ನಾಗಲಕ್ಷ್ಮಿ. ಅಧ್ಯಕ್ಷತೆ: ಪ್ರೊ.ಎಲ್.ಎಸ್. ಶೇಷಗಿರಿರಾವ್.

ದ್ರಾವಿಡ ಭಾಷಾ ವಿಜ್ಞಾನ ಹಾಗೂ ಕನ್ನಡ ಉಪ ಭಾಷೆಗಳ ಅಧ್ಯಯನ ಕ್ಷೇತ್ರದಲ್ಲಿ ಪ್ರೊ.ಕೆ. ಕುಶಾಲಪ್ಪ ಗೌಡರದು ಪ್ರಮುಖ ಹೆಸರು. ಆಧುನಿಕ ಭಾಷಾ ವಿಜ್ಞಾನ ಹಾಗೂ ಪರಂಪರಾಗತ ವ್ಯಾಕರಣಶಾಸ್ತ್ರ ಈ ಎರಡರಲ್ಲೂ ಸಮದಂಡಿಯಾದ ಪಾಂಡಿತ್ಯವನ್ನು ಹೊಂದಿರುವ ಇವರ ಬರಹಗಳು ಸ್ವತಂತ್ರವಾದ ಒಳನೋಟವನ್ನು ಹೊಂದಿವೆ, ಪಾಂಡಿತ್ಯಮಾನ್ಯವಾಗಿವೆ.

ಕೋಡಿ ಕೃಷ್ಣಪ್ಪ ಮತ್ತು ಕೋಡಿ ಗೌರಮ್ಮ ದಂಪತಿಗಳ ಮಗನಾಗಿ 1931ರ ಮೇ 31ರಂದು ಕೊಡಗು ಜಿಲ್ಲೆಯ ಪೆರಾಜೆಯಲ್ಲಿ ಜನನ. ಸುಳ್ಯ, ಪುತ್ತೂರು ಹಾಗೂ ಮಡಿಕೇರಿಗಳಲ್ಲಿ ಆರಂಭಿಕ ಶಿಕ್ಷಣ. ಮದ್ರಾಸ್ ವಿಶ್ವವಿದ್ಯಾಲಯದ ಬಿಎ (ಆನರ್ಸ್), ಎಂಎ  ಮತ್ತು ಅಣ್ಣಾಮಲೈ ವಿವಿಯಿಂದ ಭಾಷಾ ವಿಜ್ಞಾನ ಡಿಪ್ಲೊಮಾ, ಎಂ.ಲಿಟ್ ಮತ್ತು ಪಿಎಚ್‌ಡಿ ಪದವೀಧರ.

ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸಹಾಯಕ ಕನ್ನಡ ಪ್ರಾಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿದ ಇವರು ಅಣ್ಣಾಮಲೈ ವಿವಿ ಭಾಷಾ ವಿಜ್ಞಾನ ಪ್ರೌಢ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ‘ಕನ್ನಡ ಭಾಷಾವಲೋಕನ’, ‘ಕನ್ನಡ ಭಾಷೆ ಮತ್ತು ವ್ಯಾಕರಣಗಳ ಒಂದು ಅಧ್ಯಯನ’, ‘Gowda kannada, Dravidian case system ಮುಂತಾದ ಶಾಸ್ತ್ರಗ್ರಂಥಗಳನ್ನು ‘ಸಿಂಜಿನಿ’, ‘ಊರೊಸಗೆ’ ‘ಕಡಲ ತಡಿಯ  ಕನವರಿಕೆ’ ಮೊದಲಾದ ಸೃಜನಶೀಲ ಕೃತಿಗಳನ್ನು ರಚಿಸಿದ್ದಾರೆ. ರಾಜ್ಯ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ,ಆಳ್ವಾಸ್ ನುಡಿಸಿರಿ ಪ್ರಶಸ್ತಿಗಳು ಇವರಿಗೆ ಸಂದಿವೆ
ಸ್ಥಳ: ಬಿಎಂಶ್ರಿ ಕಲಾಭವನ, 3ನೇ ಮುಖ್ಯ ರಸ್ತೆ, ನರಸಿಂಹರಾಜ ಕಾಲೋನಿ. ಸಂಜೆ 5.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT