ಇಂಧನ ಬೆಲೆ ಏರಿಕೆ ಬಗ್ಗೆ ಬಿಜೆಪಿಯ 'ಎಡವಟ್ಟು ಗ್ರಾಫ್' ತಿದ್ದಿ ಕಾಂಗ್ರೆಸ್ ಟ್ವೀಟ್

ನವದೆಹಲಿ: ತೈಲ ಬೆಲೆ ಏರಿಕೆ ಪ್ರತಿಭಟಿಸಿ ವಿಪಕ್ಷಗಳು ಭಾರತ್ ಬಂದ್ ನಡೆಸುತ್ತಿದ್ದಾಗ ದೆಹಲಿಯ ಪೆಟ್ರೋಲ್ ಡೀಸೆಲ್ ಬೆಲೆ ಬಗ್ಗೆ ಸೋಮವಾರ ಭಾರತೀಯ ಜನತಾ ಪಕ್ಷ ಪೆಟ್ರೋಲಿಯಂ ಬೆಲೆ ಏರಿಕೆಯ ಸತ್ಯಗಳು ಎಂಬ ಶೀರ್ಷಿಕೆಯೊಂದಿಗೆ ಎರಡು ಇನ್ಫೋಗ್ರಾಫಿಕ್ಸ್ ಗಳನ್ನು ಟ್ವೀಟ್ ಮಾಡಿತ್ತು.

ಆದಾಗ್ಯೂ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯನ್ನು ತೋರಿಸಬೇಕಿದ್ದ ಈ ಗ್ರಾಫ್‍ ದರ ಇಳಿಕೆ ತೋರಿಸಿದ್ದು, ಸಾಮಾಜಿಕ ತಾಣದಲ್ಲಿ ಟ್ರೋಲ್‍ಗೆ ಕಾರಣವಾಯಿತು.

ಬಿಜೆಪಿ ಪ್ರಕಟಿಸಿದ ಗ್ರಾಫ್‌‍ನಲ್ಲಿ 2014 ಮತ್ತು 2018 ರ ಅವಧಿಯಲ್ಲಿ ಪೆಟ್ರೋಲ್ ಬೆಲೆಯಲ್ಲಿ ಶೇ. 13ರಷ್ಟು ಮಾತ್ರ ಏರಿಕೆಯಾಗಿದೆ. ಅದೇ ರೀತಿ 2009- 2014ರ ಕಾಂಗ್ರೆಸ್ ಅವಧಿಯಲ್ಲಿ ಶೇ.75.8 ಏರಿಕೆಯಾಗಿದೆ ಎಂದು ತೋರಿಸಲಾಗಿದೆ. ಡೀಸೆಲ್ ಬೆಲೆಯದ್ದೂ ಇದೇ ರೀತಿ ಇದೆ.

ಆದರೆ ಇಲ್ಲಿನ ಎಡವಟ್ಟುಗಳನ್ನು ತೋರಿಸಿ ಕಾಂಗ್ರೆಸ್ ರಂಗಕ್ಕಿಳಿದಾಗ ಚಿತ್ರಣವೇ ಬದಲಾಗಿ ಬಿಟ್ಟಿತು.

ಕಾಂಗ್ರೆಸ್ ಅಧಿಕಾರ ಅವಧಿಯಲ್ಲಿ ಕಚ್ಛಾ ತೈಲದ ಬೆಲೆ ಏರಿಕೆಯಿಂದಾಗ ಇಂಧನ ಬೆಲೆ ಏರಿಕೆಯಾಗಿತ್ತು. ಆದರೆ 2014ರಿಂದ 2018ರ ಅವಧಿಯಲ್ಲಿ ಕಚ್ಛಾ ತೈಲದ ಬೆಲೆಯಲ್ಲಿ ಶೇ. 34ರಷ್ಟು ಇಳಿಕೆಯಾಗಿದೆ.  ಹೀಗಿದ್ದಾಗಲೂ ದೇಶದಲ್ಲಿ ಇಂಧನ ಬೆಲೆ ಶೇ. 13ರಷ್ಟು ಏರಿಕೆಯಾಯಿತು. ಇದನ್ನು ವಿವರಿಸುವ ಮೂಲಕ ಕಾಂಗ್ರೆಸ್ ಬೇರೊಂದು ಇನ್ಫೋಗ್ರಾಫಿಕ್ಸ್ ಪ್ರಕಟಿಸಿ ಬಿಜೆಪಿಗೆ ಟಾಂಗ್ ನೀಡಿತು.

ಬಿಜೆಪಿಯ ಗ್ರಾಫ್‍ ಟ್ರೋಲ್ ಆಗಿದ್ದು ಹೀಗೆ
 

ಪ್ರಮುಖ ಸುದ್ದಿಗಳು