ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯೂರು | ಮತ ಚಲಾಯಿಸಿದ 109 ವರ್ಷದ ತಿಪ್ಪೀರಮ್ಮ

Published 26 ಏಪ್ರಿಲ್ 2024, 15:47 IST
Last Updated 26 ಏಪ್ರಿಲ್ 2024, 15:47 IST
ಅಕ್ಷರ ಗಾತ್ರ

ಹಿರಿಯೂರು: ಕ್ಷೇತ್ರದಲ್ಲಿ ಶುಕ್ರವಾರ ಲೋಕಸಭೆಗೆ ನಡೆದ ಮತದಾನ ಶಾಂತಿಯುತವಾಗಿತ್ತು. ಬೆಸ್ಕಾಂ ಇಲಾಖೆ ವಸತಿ ಗೃಹದ ಆವರಣದಲ್ಲಿರುವ ಸರ್ಕಾರಿ ಶಾಲೆಯ ಮತಗಟ್ಟೆಯಲ್ಲಿ 109 ವರ್ಷದ ತಿಪ್ಪೀರಮ್ಮ ಅವರು ತಮ್ಮ ಮೊಮ್ಮಗ ಪ್ರಮೋದ್ ಜೊತೆ ಹೋಗಿ ಮತ ಚಲಾಯಿಸಿ ಅಚ್ಚರಿ ಮೂಡಿಸಿದರು.

ನಗರದ ವರ್ತಕ ಎಚ್.ಎಸ್.ಅಮರನಾಥ್ ಅವರ ಪುತ್ರ ಎಚ್.ಎ. ಸತ್ಯ ಹುಳಿಯಾರು ರಸ್ತೆಯಲ್ಲಿರುವ ತುಳಸಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಮಾಂಗಲ್ಯ ಧಾರಣೆ ಮುಗಿಸಿಕೊಂಡು ಮತಗಟ್ಟೆ ಸಂಖ್ಯೆ 174ಕ್ಕೆ ಬಂದು ಮತದಾನ ಮಾಡುವ ಮೂಲಕ ಗಮನ ಸೆಳೆದರು.

ತಾಲ್ಲೂಕಿನ ಮ್ಯಾಕ್ಲೂರಹಳ್ಳಿಯ ಬೋವಿ ಕಾಲೊನಿಯಲ್ಲಿ ಶುಕ್ರವಾರ ಬೆಳಿಗ್ಗೆ 20ಕ್ಕೂ ಹೆಚ್ಚು ಮಹಿಳೆಯರು ಕುಡಿಯುವ ನೀರಿಗೆ ಶಾಶ್ವತ ವ್ಯವಸ್ಥೆ ಮಾಡುವವರೆಗೆ ಮತ ಚಲಾಯಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಚುನಾವಣಾ ಕರ್ತವ್ಯದಲ್ಲಿದ್ದ ಪೊಲೀಸರು ಮಹಿಳೆಯರ ಮನ ಒಲಿಸಿ ಮತದಾನ ಮಾಡಿಸಿದರು.

ಹಣ ಹಂಚಿಕೆಯಲ್ಲಿ ತಾರತಮ್ಯ: ‘ಪ್ರಮುಖ ರಾಜಕೀಯ ಪಕ್ಷವೊಂದು ನಗರದಲ್ಲಿನ ಮತದಾರರಿಗೆ ತಲಾ ₹ 300 ಹಂಚಿದ್ದು, ಗ್ರಾಮೀಣ ಭಾಗದಲ್ಲಿ ₹ 200 ಕೊಟ್ಟಿದ್ದಾರೆ. ಹಳ್ಳಿಯ ಓಟುಗಳಿಗೆ ಬೆಲೆ ಕಡಿಮೆಯೇ? ಇಂತಹ ತಾರತಮ್ಯ ಸರಿಯಲ್ಲ, ತಕ್ಕ ಪಾಠ ಕಲಿಸುತ್ತೇವೆ’ ಎಂಬ ಮಾತುಗಳು ನಗರಕ್ಕೆ ಹೊಂದಿಕೊಂಡಿರುವ ಹಳ್ಳಿಗಳಲ್ಲಿ ಕೇಳಿ ಬಂದವು.

ಬೆಳಿಗ್ಗೆ 10 ಗಂಟೆವರೆಗೆ ಮತಗಟ್ಟೆಗಳಲ್ಲಿ ಸಣ್ಣ ಪ್ರಮಾಣದಲ್ಲಿ ಸಾಲು ಕಂಡು ಬಂದಿತು. ಮಧ್ಯಾಹ್ನ 2 ಗಂಟೆ ಸಮಯಕ್ಕೆ ಬಿಸಿಲಿನ ಬೇಗೆ ಹೆಚ್ಚಿದ್ದರಿಂದ ಮತಕೇಂದ್ರಗಳ ಬಳಿ ರಾಜಕೀಯ ಪಕ್ಷಗಳು ಹಾಕಿದ್ದ ಶಾಮಿಯಾನದಲ್ಲಿ ಒಂದಿಬ್ಬರು ಕಾರ್ಯರ್ತರು ಮಾತ್ರ ಕಂಡುಬಂದರು. ಸಂಜೆ 4 ಗಂಟೆಯ ನಂತರ ಮತ್ತೆ ಮತಗಟ್ಟೆಗಳ ಮುಂದೆ ಮತದಾರರು ಸಾಲುಗಟ್ಟಿ ನಿಂತಿದ್ದರು.

ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಹಿರಿಯೂರು ಕ್ಷೇತ್ರದಲ್ಲಿ 67.52 ಮತದಾನವಾಗಿತ್ತು.

ಹಿರಿಯೂರಿನಲ್ಲಿ ಶುಕ್ರವಾರ ಮಾಂಗಲ್ಯಧಾರಣೆ ನಂತರ ಮತಗಟ್ಟೆಗೆ ಬಂದು ಮತಚಲಾಯಿಸಿದ ನವಜೋಡಿ
ಹಿರಿಯೂರಿನಲ್ಲಿ ಶುಕ್ರವಾರ ಮಾಂಗಲ್ಯಧಾರಣೆ ನಂತರ ಮತಗಟ್ಟೆಗೆ ಬಂದು ಮತಚಲಾಯಿಸಿದ ನವಜೋಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT