ಸಂಚಾರಿ ಈಗ ‘ಮಾಯಾವಿ’

 ಬೆಂಗಳೂರು: ಬಿ. ನವೀನ್‍ ಕೃಷ್ಣ ನಿರ್ದೇಶನದ ‘ಮೇಲೊಬ್ಬ ಮಾಯಾವಿ?’ ಚಿತ್ರ ಪೋಸ್ಟರ್ ಮೂಲಕ ಸದ್ದು ಮಾಡಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ.

ಇದೇ ತಂಡ ಈಗ ನಟ ಸಂಚಾರಿ ವಿಜಯ್ ಅವರು ವಿಶೇಷ ಅವತಾರದಲ್ಲಿ ಇರುವ ಕ್ಲೈಮಾಕ್ಸ್ ದೃಶ್ಯದ ಪ್ಯಾಚ್‍ಅಪ್ ಚಿತ್ರೀಕರಣದ ಮೂಲಕ ಸಿನಿಮಾ ಬಗೆಗಿನ ಕುತೂಹಲವನ್ನು ಇಮ್ಮಡಿಗೊಳಿಸಿದೆ.

ಮೈಸೂರಿನ ಅರಮನೆ ಮುಂಭಾಗ ಅರ್ಧಂಬರ್ಧ ಯಕ್ಷಗಾನದ ಗೆಟಪ್‌ನಲ್ಲಿ ಕಾಣಿಸಿಕೊಂಡ ವಿಜಯ್ ಮೂಟೆಗಳನ್ನು ಹೊತ್ತುಕೊಂಡು ತಿರುಗಾಡುತ್ತಿದ್ದದ್ದು ಜನರಲ್ಲಿ ಅಚ್ಚರಿ ಮೂಡಿಸಿತು. ಶೂಟಿಂಗ್‌ಗಾಗಿ ಮೈಸೂರಿನಲ್ಲಿ ಬೀಡುಬಿಟ್ಟಿದ್ದ ಚಿತ್ರತಂಡದಲ್ಲಿ ನೂರಕ್ಕಿಂತೂ ಹೆಚ್ಚು ಕಲಾವಿದರು ಪಾಲ್ಗೊಂಡಿದ್ದರು.

‘ಚಿತ್ರದಲ್ಲಿ ನನ್ನ ಪಾತ್ರದ ಹೆಸರು ಇರುವೆ. ಈ ಇರುವೆಗೆ ಯಕ್ಷಗಾನದ ವೇಷ ಹಾಕಬೇಕೆಂಬ ಆಸೆ. ಆದರೆ, ಯಕ್ಷಗಾನದ ಮೇಸ್ಟ್ರು ಇರುವೆ ಹುಟ್ಟಿನಿಂದಲೇ ಬಂದ ನ್ಯೂನತೆಯೊಂದರ ಕಾರಣಕ್ಕಾಗಿ ಆತನನ್ನು ಯಕ್ಷಗಾನ ಮೇಳಕ್ಕೆ ಸೇರಿಸಿಕೊಳ್ಳುವುದಿಲ್ಲ. ಮುಂದೆ ಇರುವೆ ಹೇಗೆ ಅದೇ ಯಕ್ಷಗಾನದ ಮೂಲಕ ಏನು ಮಾಡುತ್ತಾನೆ ಅನ್ನೋದೆ ಚಿತ್ರದ ಕಥಾಹಂದರ.  ಕರಾವಳಿಯ ಮಾಫಿಯವೊಂದನ್ನು ಅಲ್ಲಿಯದೇ ಕಲೆಯ ಮೂಲಕ ಹೇಳಲು ಹೊರಟಿರುವ ನಿರ್ದೇಶಕರ ತಯಾರಿ ಮೆಚ್ಚುವಂತದ್ದು’ ಎನ್ನುತ್ತಾರೆ ಸಂಚಾರಿ ವಿಜಯ್.

ಪ್ರಮುಖ ಸುದ್ದಿಗಳು