ಚಿತ್ರಗಳು: ತಾಜುದ್ದೀನ್ ಆಜಾದ್

ಕಲಬುರಗಿ ಜಿಲ್ಲೆಯ ಮೇಳಕುಂದಾ ಕೆ. ಗ್ರಾಮಕ್ಕೆ ಭೇಟಿ ಕೊಟ್ಟಾಗ ವೈವಿಧ್ಯಮಯ ವಿನ್ಯಾಸದ ಹಣತೆಗಳು ಸ್ವಾಗತ ಕೋರಿದಂತೆ ಭಾಸವಾಯಿತು. ಅಲ್ಲಿ ಒಂದಕ್ಕಿಂತ ಮತ್ತೊಂದು ಹಣತೆ ಆಕರ್ಷಕ, ಅತ್ಯಾಕರ್ಷಕ.

ಈ ಊರಲ್ಲಿ ಮೂವತ್ತಕ್ಕೂ ಅಧಿಕ ಕುಟುಂಬಗಳು ಕುಂಬಾರಿಕೆಯಲ್ಲಿ ತೊಡಗಿವೆ. ಇವರೆಲ್ಲರೂ ಮರಾಠ ಕುಂಬಾರರು. ವರ್ಷವಿಡೀ ಇದೇ ಕಾಯಕ. ಇದರಲ್ಲಿ ಕೈಗೆ ಸಿಗುವ ದುಡಿಮೆಯಲ್ಲೇ ಬದುಕಿನ ಬಂಡಿ ಸಾಗುತ್ತಿದೆ.

ಊರಿನ ಹೃದಯಭಾಗದಲ್ಲೇ ವಾಸವಿರುವ ಈ ಕುಟುಂಬಗಳು ಮಣ್ಣಿನಲ್ಲಿ ಹಣತೆಗಳು, ಮತ್ತಿತರ ಕಲಾಕೃತಿಗಳಿಗೆ ಜೀವ ಕೊಡುತ್ತ, ತಮ್ಮ ಜೀವನವನ್ನೂ ಕಟ್ಟಿಕೊಂಡಿವೆ. ಒಂದಲ್ಲ, ಎರಡಲ್ಲ, ಹತ್ತಾರು ಬಗೆಯ ಹಣತೆಗಳು ಇಲ್ಲಿ ರೂಪ ಪಡೆಯುತ್ತಿವೆ. ಹಣತೆಗಳು ಮಾತ್ರವಲ್ಲ; ಮಣ್ಣಿನ ತಟ್ಟೆಗಳು, ಮಣ್ಣಿನಮೂರ್ತಿಗಳನ್ನೂ ಮಾಡಲಾಗುತ್ತದೆ.

ಇದು ಫ್ಯಾಷನ್ ಯುಗ. ಈ ಕಾಲಘಟ್ಟದಲ್ಲಿ ಕುಂಬಾರಿಕೆ ನೇಪಥ್ಯಕ್ಕೆ ಸರಿಯುತ್ತಿದೆ ಎನ್ನುವುದು ಅಲ್ಲಗಳೆಯಲಾಗದ ಮಾತು. ಹೀಗಿದ್ದರೂ ಅನೇಕ ಸವಾಲುಗಳ ಮಧ್ಯೆಯೂ
ಈ ಕುಟುಂಬಗಳು ತಮ್ಮ ಕುಲಕಸುಬು ಮುಂದುವರಿಸಿಕೊಂಡು ಹೊರಟಿವೆ. ಈ ವೃತ್ತಿ ಮಾಡುವವರಲ್ಲಿ ಪುರುಷರಷ್ಟೇ ಅಲ್ಲ; ಮಕ್ಕಳು, ಮಹಿಳೆಯರು ಮತ್ತು ಹಿರಿಯರೂ ಕಾಣಸಿಗುತ್ತಾರೆ.

ಇಲ್ಲಿ ಜೀವತಳೆದ ಮಣ್ಣಿನ ಹಣತೆಗಳು ಬೀದರ್, ಕಲಬುರಗಿ, ರಾಯಚೂರು ಜಿಲ್ಲೆಗಳು ಅಲ್ಲದೆ ಮಹಾರಾಷ್ಟ್ರದ ಸೊಲ್ಲಾಪುರ, ಆಂಧ್ರ ಪ್ರದೇಶದಲ್ಲೂ ಮಾರಾಟವಾಗುತ್ತವೆ.
ಎಂದಿನಂತೆ ಈ ವರ್ಷವೂ ಲಕ್ಷಾಂತರ ಹಣತೆಗಳು ಇಲ್ಲಿ ಸಿದ್ಧವಾಗಿವೆ. ರಾಜ್ಯ ಮತ್ತು ಹೊರ ರಾಜ್ಯಗಳ ಮನೆ–ಮನಗಳನ್ನು ಬೆಳಗಲು ಸಜ್ಜಾಗಿವೆ.