ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪುಸ್ತಕ ವಿಮರ್ಶೆ | ಅಭಿವೃದ್ಧಿಯೊಂದಿಗಿನ ವಿನಾಶದ ವಿಶ್ಲೇಷಣೆ

Published : 22 ಸೆಪ್ಟೆಂಬರ್ 2024, 0:45 IST
Last Updated : 22 ಸೆಪ್ಟೆಂಬರ್ 2024, 0:45 IST
ಫಾಲೋ ಮಾಡಿ
Comments

ಬಾಲಗೋಪಾಲ್‌ ವೃತ್ತಿಯಿಂದ ಅಧ್ಯಾಪಕ. ಓದಿನಿಂದ ಗಣಿತಶಾಸ್ತ್ರಜ್ಞ. ಜನಪರ ಚಳವಳಿಯನ್ನು ಕರುಣೆಯಿಂದ ಕಾಣುವ ಮಾನವತಾವಾದಿ. ಸಮಾಜದೊಳಗಿನ ಅಸಮಾನತೆ ಅದರ ವಿರುದ್ಧದ ಹೋರಾಟದ ಕಡೆ ದೃಷ್ಟಿ ನೆಟ್ಟು ಉದ್ಯೋಗಕ್ಕೆ ರಾಜೀನಾಮೆ ನೀಡಿ ಮಾನವ ಹಕ್ಕುಗಳ ರಕ್ಷಣೆಗೆ ನಿಲ್ಲುತ್ತಾರೆ. ಕೋಮುವಾದ ಸೃಷ್ಟಿಸಿರುವ ಅನಾಹುತ, ವರ್ತಮಾನದ ತಲ್ಲಣಗಳಿಗೆ ಸ್ಪಂದನೆಯೇ ‘ಅಭಿವೃದ್ಧಿ ಎಂಬ ವಿನಾಶ’ ಅವತರಿಸಿದೆ.

ಕೃತಿ ‘ಅಭಿವೃದ್ಧಿ ಎಂಬ ವಿನಾಶ’, ‘ಸರ್ಕಾರ–ಸಂಕ್ಷೇಮ’, ‘ಜಾತಿಯನ್ನು ಅರ್ಥಮಾಡಿಕೊಳ್ಳುವುದು ಹೇಗೆ’, ‘ಜಾತಿ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವ’ ಎಂಬ ನಾಲ್ಕು ಸುದೀರ್ಘ ಅಧ್ಯಯಗಳನ್ನು ಒಳಗೊಂಡಿದೆ. ಅಭಿವೃದ್ಧಿ ಎನ್ನುವುದು ಗ್ರಾಮಗಳ ಉದ್ಧಾರ ಅಥವಾ ಜನರ ಬದುಕಿನ ಸುಧಾರಣೆ ನಿಟ್ಟಿನಲ್ಲಿ ಆಗಿದ್ದರೆ ಅದನ್ನು ಪ್ರಗತಿಯ ಸೂಚಕದಲ್ಲಿ ಅಳೆಯಬಹುದು. ಅಭಿವೃದ್ದಿ ಬಂಡವಾಳಶಾಹಿ ಕಂಪನಿಗಳ ಅಗತ್ಯಗಳಿಗೆ ಆಗುತ್ತಿದೆ. ಅದಕ್ಕೆ ಬಹುಮುಖಿಯ ಆಯಾಮ ಇಲ್ಲದೆ ವಿನಾಶಕ್ಕೆ ನಾಂದಿ ಹಾಡುತ್ತಿದೆ ಎನ್ನುವುದು ಭಯಾನಕ. ಈ ಕುರಿತು ಸುದೀರ್ಘವಾಗಿ ಚರ್ಚಿಸುತ್ತಾರೆ.

ಜನರ ಕ್ಷೇಮ ಸರ್ಕಾರಗಳ ಜವಾಬ್ದಾರಿ. ಅದು ದುರ್ಬಲರನ್ನು ರಕ್ಷಿಸಬೇಕು. ಸಂಕ್ಷೇಮ ಅಂದರೆ ಅಷ್ಟೇ ಅಲ್ಲ. ಸಾಮಾಜಿಕ ನ್ಯಾಯ, ಆರ್ಥಿಕ ನ್ಯಾಯ, ರಾಜಕೀಯ ನ್ಯಾಯವೂ ಅವರಿಗೆ ಸಲ್ಲಬೇಕು. ಸಾಮಾಜಿಕ ನ್ಯಾಯಕ್ಕಾಗಿ ದನಿ ಎತ್ತಿದರೆ, ಅದನ್ನು ಎಷ್ಟು ಮಂದಿ ಸ್ವಾಗತಿಸುತ್ತಾರೆ ಎನ್ನುವ ಅನುಮಾನವನ್ನು ಲೇಖಕರು ವ್ಯಕ್ತಪಡಿಸಿದ್ದಾರೆ.

ಜಾತಿ ಸಮಾಜದಲ್ಲಿ ಜಾತಿಯನ್ನು ವಿವರವಾಗಿ ಅಧ್ಯಯನ ಮಾಡಬೇಕು. ಅದನ್ನು ಜಾತಿ, ಜಾತಿ ವ್ಯವಸ್ಥೆ, ವರ್ಣ ಧರ್ಮ ಎಂಬ ಮೂರು ವಿಷಯಗಳ  ಮೇಲೆ ನೋಡಬೇಕು. ಅಂತೆಯೇ ರಾಜಕೀಯ ಸಿದ್ಧಾಂತವನ್ನು ನಂಬುವುದು ತಪ್ಪಲ್ಲ. ಅದುವೇ ಪರಮ ಸತ್ಯ ಎಂದುಕೊಳ್ಳುವುದು ತಪ್ಪು ಎನ್ನುವ ವಿವರವನ್ನು ಲೇಖಕರು ನೀಡುತ್ತಾರೆ. ಸಂಶೋಧನಾ ಮನೋಭೂಮಿಕೆಯಲ್ಲಿ ಕೃತಿ ಅರಳಿದ್ದು, ಲೇಖಕರ ಅಧ್ಯಯನ, ಪ್ರವಾಸ, ಹೋರಾಟದ ನೆಲೆ ಗೋಚರಿಸುತ್ತದೆ. ಒಟ್ಟಿನಲ್ಲಿ ಬಹುಶಿಸ್ತಿನ ಅಧ್ಯಯನಕ್ಕೆ ಇನ್ನೊಂದು ಮಾದರಿ ರೂಪದಲ್ಲಿ
ಈ ಕೃತಿ ನಿಲ್ಲುತ್ತದೆ.

ಅಭಿವೃದ್ಧಿ ಎಂಬ ವಿನಾಶ

ತೆಲುಗು ಮೂಲ: ಡಾ.ಕೆ. ಬಾಲಗೋಪಾಲ್‌

ಕನ್ನಡಕ್ಕೆ: ಡಾ. ಬಂಜಗೆರೆ ಜಯಪ್ರಕಾಶ

ಪ್ರ: ಆಕೃತಿ ಪುಸ್ತಕ

ಸಂ: 080– 23409479

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT