ಅಕ್ಕನ ವಚನದ ಸಾಲು, ಪುರಂದರ ದಾಸರ ಕೀರ್ತನೆಯ ಸಾಲು ಎರಡೂ ಸಮ್ಮಿಳಿತಗೊಂಡಂತೆಯೇ ಇದೆ ಇಡೀ ಪುಸ್ತಕ. ನಮ್ಮ ಸುತ್ತಲೂ ಕಂಡಿದ್ದು, ಕೇಳಿದ್ದು ಇಲ್ಲಿ ಪಾತ್ರಗಳಾಗಿವೆ. ಆರು ತೆರೆಯ ನೋಡಂಬಿಗ ಅದು ಮೀರಿ ಬರುತಲಿದೆ ಅಂಬಿಗ ಎಂಬ ಸಾಲಿನ ಅರಿಷಡ್ವರ್ಗಗಳ ತೆರೆಗಳಿಲ್ಲಿ ಮನದ ಸಮುದ್ರದೊಳಗೆ ಕೋಲಾಹಲವನ್ನೇ ಎಬ್ಬಿಸುತ್ತವೆ. ಅತಿ ಸಣ್ಣ ನಾಟಕಗಳಾದರೂ ಬದುಕಿನ ಎಲ್ಲ ದೊಡ್ಡ ನಾಟಕಗಳೂ ಇಲ್ಲಿ ಕಾಣಿಸುತ್ತವೆ. ಪ್ರತಿ ನಾಟಕದಲ್ಲಿಯೂ ನಮ್ಮೊಳಗಿನ ಸಣ್ಣತನ, ನಮ್ಮೊಳಗಿನ ಅಸೂಯೆ, ನಮ್ಮೊಳಗಿನ ಶ್ರೇಷ್ಠತೆಯ ವ್ಯಸನದ ದಾಸರಾಗಿರುವುದು, ನಾವು ಇರುವುದಕ್ಕಿಂತಲೂ ಉತ್ತಮರು ಎನಿಸಿಕೊಳ್ಳಲು ಏನು ಮಾಡುತ್ತೇವೆ ಎಂಬ ಸಂಘರ್ಷವೇ ಇಲ್ಲಿ ಪದಗಳ ರೂಪ ಪಡೆದಿವೆ. ಸದಾ ಬೆಟ್ಟ ಏರುವ, ಬೆಟ್ಟದ ತಪ್ಪಲಿನಲ್ಲಿ ಕೂತಿರುವ ಭಿಕ್ಕು ನಮ್ಮ ಆಂತರ್ಯ ಹಾಗೂ ಅಂತಃಸಾಕ್ಷಿಯ ಪ್ರತೀಕದಂತೆನಿಸುತ್ತದೆ. ಸಾವು, ನೋವು, ನಲಿವು, ಅಹಂಕಾರ, ದುರಹಂಕಾರ, ಹೆಮ್ಮೆ, ತ್ಯಾಗ ಇವೆಲ್ಲವೂ ಇಲ್ಲಿ ಪಾತ್ರಗಳಾಗಿವೆ. ನಾವು, ನಮ್ಮ ಏಕಾಂತದಲ್ಲಿ ಕನ್ನಡಿಯ ಮುಂದೆ ನಿಂತು ಸಂವಾದಕ್ಕಿಳಿದಂತೆಯೇ ಪ್ರತಿಯೊಂದು ಪಾತ್ರಗಳೂ ಧ್ವನಿಸುತ್ತವೆ. ಒಬ್ಬ ನಾಟಕಕಾರ ಇಷ್ಟೊಂದು ಪಾತ್ರಗಳನ್ನು ಜೀವಿಸುವ ಪರಿ, ಅವುಗಳಿಂದ ಒಂದೊಂದೇ ಗುಣಗಳನ್ನು ಹೆಕ್ಕಿ, ಪ್ರತಿಧ್ವನಿಸುವ ಪರಿ ಅನನ್ಯವಾಗಿದೆ. ಸಣ್ಣ ನಾಟಕ ಓದಲು ಹೆಚ್ಚು ಸಮಯ ತೆಗೆದುಕೊಳ್ಳದು. ಆದರೆ ಓದಿದ ನಂತರ ಜೀರ್ಣಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ಕೆಲವು ನಾಟಕಗಳು ಹತಾಶೆಯನ್ನೂ, ಇನ್ನೂ ಕೆಲವು ಮುಗುಳ್ನಗೆಯನ್ನೂ ಮೂಡಿಸುತ್ತವೆ. ಆತ್ಮಾವಲೋಕನದ ಓದಿಗೆ ಈ ನಾಟಕಗಳು ಪ್ರೇರೇಪಿಸುತ್ತವೆ.

ಕೃತಿ:ಕಾಣುತ್ತ ಕಾಣುತ್ತ ಕೇಳುತ್ತ ಕೇಳುತ್ತ ಆರು ತೆರೆಯ ನೋಡಂಬಿಗ

ನಾಟಕಕಾರರು: ಗಿರಿಧರ ಖಾಸನೀಸ್

ಪ್ರ: ನವಕರ್ನಾಟಕ ಪ್ರಕಾಶನ

ಮೊ: 9448257518

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.