ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೊದಲ ಓದು: ರೆಕ್ಕೆ ಕಟ್ಟುವ ಊರುಗಳ ಕಥೆ

Published 20 ಜನವರಿ 2024, 23:47 IST
Last Updated 20 ಜನವರಿ 2024, 23:47 IST
ಅಕ್ಷರ ಗಾತ್ರ

1903ರಲ್ಲಿ ರೈಟ್ ಸಹೋದರರು ಯಂತ್ರಚಾಲಿತ ವಿಮಾನ ಹಾರಿಸಿದ ಚಾರಿತ್ರಿಕ ಘಟನೆಯ ನಂತರ ಬ್ರಿಟನ್‌ನ ಬ್ರಿಸ್ಟಲ್‌ನ ಜಾರ್ಜ್ ವೈಟ್‌ ಆರಂಭಿಸಿದ ವಿಮಾನ ತಯಾರಿಕಾ ಕಂಪನಿ ಆ ಕಾಲದಲ್ಲಿ ಭಾರಿ ಸದ್ದು ಮಾಡಿತ್ತು. ಆದರೆ ಈಗಲೂ ವಿಮಾನ ಕ್ಷೇತ್ರದೊಂದಿಗೆ ಬ್ರಿಸ್ಟಲ್‌ ಸಂಪರ್ಕ ಹೊಂದಿದೆ. ಜತೆಗೆ 2021 ಫೆ. 19ಕ್ಕೆ 111 ವರ್ಷ ಪೂರ್ಣಗೊಳಿಸಿದೆ. ವಿಮಾನ ಕ್ಷೇತ್ರದ ಇಂಥ ಬಹಳಷ್ಟು ಕುತೂಹಲಕಾರಿ ಅಂಶಗಳನ್ನು   ಯೋಗೀಂದ್ರ ಮರವಂತೆ ಅವರ ‘ಏರೋ ಪುರಾಣ’ ಕೃತಿ ಒಳಗೊಂಡಿದೆ.

ವಿಮಾನ ತಯಾರಿಕಾ ಸಂಸ್ಥೆ ಏರ್‌ಬಸ್‌ನೊಂದಿಗೆ ಸುಮಾರು ಎರಡು ದಶಕಗಳ ಒಡನಾಟ ಹೊಂದಿರುವ ಯೋಗೀಂದ್ರ ಅವರು ತಮ್ಮ ವೃತ್ತಿ ಬದುಕಿನಲ್ಲಿ ಕಂಡ ವಿಮಾನಲೋಕದ ಬಹಳಷ್ಟು ಅಚ್ಚರಿಯ ಅನುಭವಗಳನ್ನು ಇಲ್ಲಿ ದಾಖಲಿಸಿದ್ದಾರೆ. ಇದು ಕೇವಲ ಅನುಭವದ ಪಯಣವಾಗಿರದೆ, ಲೋಹದ ಹಕ್ಕಿಗಳ ಒಳ–ಹೊರಗಿನ ಮಾಹಿತಿ ಕೋಶವೂ ಆಗಿದೆ.

ವಿಮಾನ ಹಾರುವ ಮೊದಲಿನ ತಯಾರಿಯಿಂದ ಹಿಡಿದು, ವಿಮಾನಗಳ ಅಂಗವಿಜ್ಞಾನ, ಬಾನಾಡಿಗಳ ರೆಕ್ಕೆ ಕಟ್ಟುವ ಊರುಗಳ ಇತಿಹಾಸ, ವಿಮಾನ ನಿಲ್ದಾಣಗಳಲ್ಲಿನ ವಿಧಿವಿಧಾನಗಳು, ಅಪಘಾತಗಳು, ವಿಮಾನ ಹಾರಾಟದಿಂದ ಹಸಿರು ಹೋರಾಟದಂತಹ ಅಧ್ಯಯನಗಳ ಮಾಹಿತಿಯೂ ಇದರಲ್ಲಿದೆ. ಮಂಗಳೂರು ವಿಮಾನ ಅಪಘಾತದ ಮರುಓದು ಆಸಕ್ತಿಕರವಾಗಿದೆ. ಲೋಹದ ಹಕ್ಕಿಗಳ ಕುರಿತು ಕುತೂಹಲ ಹೊಂದಿರುವವರು ಮತ್ತು ವಾಯುಬಲ ವಿಜ್ಞಾನದಲ್ಲಿ ಆಸಕ್ತಿ ಹೊಂದಿದವರಿಗೆ ಇದೊಂದು ಮಾಹಿತಿಪೂರ್ಣ ಕೃತಿ.

***

ಏರೋ ಪುರಾಣಲೇ: ಯೋಗೀಂದ್ರ ಮರವಂತೆ

ಪ್ರ: ಪ್ರಿಸಮ್‌ ಬುಕ್ಸ್‌ ಪ್ರೈ ಲಿ.

ಪು: 128ಬೆಲೆ: ₹195ಸಂ: 080–26714108

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT