ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಓದು: ಬಿಡಿ ಬರಹಗಳ ಸಂಗ್ರಹ

Published 28 ಅಕ್ಟೋಬರ್ 2023, 23:43 IST
Last Updated 28 ಅಕ್ಟೋಬರ್ 2023, 23:43 IST
ಅಕ್ಷರ ಗಾತ್ರ

ಪತ್ರಕರ್ತ ವಿ.ಹನುಮಂತಪ್ಪನವರ ಬಿಡಿ ಬರಹಗಳ ಸಂಗ್ರಹ ಕೃತಿ ‘ಆಕಾಶಕ್ಕೆ ಏಣಿ’. ಆಯಾ ಕಾಲದಲ್ಲಿ ವಿವಿಧ ವಿಷಯಗಳ ಕುರಿತು ಬರೆದ 37 ಬರಹಗಳು ಈ ಕೃತಿಯಲ್ಲಿದೆ. ಮಾಹಿತಿಯುತ, ಕುತೂಹಲಭರಿತ ಲೇಖನಗಳ ಗುಚ್ಛವಿದು. ಕೃತಿಯ ಮೊದಲ ಲೇಖನ ‘ಎವರೆಸ್ಟ್‌ಗಿಂತ ಎತ್ತರವಾದ ಶಿಖರ ಆಮ್ನೆಮಾಚಿನ್‌’. ಚೀನಾ ಮತ್ತು ಟಿಬೆಟ್‌ ಗಡಿಯರಲ್ಲಿರುವ ಪವರ್ತದ ಕುರಿತಾಗಿನ ಮಾಹಿತಿಯುತ ಬರಹವಿದು.

‘ಅದ್ಬುತಗಳ ಲೋಕ ಸಾಲಾರ್‌ಜಂಗ್‌ ಮ್ಯೂಸಿಯಂ’ ಲೇಖನದಲ್ಲಿ ಕಲಾಕೃತಿಗಳ ವಿಶಿಷ್ಟ ಸಂಗ್ರಹ ಹೊಂದಿರುವ ಈ ಮ್ಯೂಸಿಯಂನ ಪರಿಚಯ ಮಾಡಿಕೊಡುತ್ತಾರೆ. ಸಂತೆಬೆನ್ನೂರಿನ ಪುಷ್ಕರಣಿ ಪರಿಚಯಿಸುವ ಲೇಖನವಿದೆ. ‘ಗೀತ ಗೋವಿಂದ’ ಕಾವ್ಯದ ಕತೃ ಜಯದೇವನ ಕುರಿತಾದ ಲೇಖನ ಈ ಕವಿಯ ಕುರಿತು ಸಾಕಷ್ಟು ಗೊತ್ತಿಲ್ಲದ ಸಂಗತಿಗಳನ್ನು ಹೇಳುತ್ತದೆ.

ಐತಿಹಾಸಿಕ ಸ್ಥಳಗಳು, ವ್ಯಕ್ತಿಗಳ ಕುರಿತಾಗಿನ ಲೇಖನಗಳೇ ಈ ಕೃತಿಯಲ್ಲಿ ಹೆಚ್ಚಿವೆ. ನಾಡಿನ ವಿವಿಧ ಪತ್ರಿಕೆಗಳಲ್ಲಿ ಈಗಾಗಲೇ ಪ್ರಕಟಗೊಂಡಿರುವ ಈ ಬರಹಗಳು ಸುಲಭವಾಗಿ ಓದಿಸಿಕೊಂಡು ಹೋಗುವ ಶೈಲಿಯಲ್ಲಿವೆ. 

ಆಕಾಶಕ್ಕೆ ಏಣಿ ಲೇ:ವಿ.ಹನುಮಂತಪ್ಪ

ಪ‍್ರ:ಜಿಲ್ಲೆ ಸಮಾಚಾರ ದಿನಪತ್ರಿಕೆ

ಸಂ:9740112249

ಪು:152

ಬೆ:200

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT