ಖುದ್ದು ಸಾಹಿತ್ಯದ ಓದಿನಲ್ಲಿ ಮುಳುಗಿ ಎದ್ದವರು ವಿಮರ್ಶಾ ಕಾರ್ಯ ಕೈಗೊಂಡರೆ ಅದಕ್ಕೆ ಅಪರೂಪದ ವಿಸ್ತಾರ ಪ್ರಾಪ್ತವಾಗುತ್ತದೆ. ಕೃತಿಯೊಂದರ ಹೂರಣವನ್ನು ಬಿಡಿಸಿ ನೋಡುವುದನ್ನು ಒಂದು ಸಿದ್ಧ ಮಾದರಿ ಎಂದುಕೊಳ್ಳೋಣ. ಅದಷ್ಟೇ ಅಲ್ಲದೆ ಅದರ ನೆವದಲ್ಲಿ ಇನ್ನಷ್ಟು ನೆನಪುಗಳನ್ನು, ವಿಚಾರಗಳನ್ನು, ಮಾಹಿತಿ - ಒಳನೋಟಗಳನ್ನು ದಾಟಿಸಿದರೆ? ಅದು ಎಸ್. ದಿವಾಕರ್ ಅವರ ಮಾದರಿಯಾಗುತ್ತದೆ. ‘ವಾಸ್ತವ ಪ್ರತಿವಾಸ್ತವ’ ಕೃತಿಯು ಅದಕ್ಕೆ ಇನ್ನೊಂದು ಉದಾಹರಣೆ. ಎಸ್. ದಿವಾಕರ್ ಸಣ್ಣ ಕಥೆಗಾರರಾಗಿ ಹಾಗೂ ಪ್ರಬಂಧಕಾರರಾಗಿ ಪ್ರಯೋಗಶೀಲ ಕೃತಿಗಳನ್ನು ನೀಡಿರುವವರು. ವಿಶ್ವ ಸಾಹಿತ್ಯದ ಹಲವು ಅಗುಳುಗಳನ್ನು ನಮಗೂ ಬಡಿಸಿದವರು. ಅವರ ಮಾತಿನಲ್ಲೇ ಸಾಹಿತ್ಯದ ಅನೂಹ್ಯ ನೆನಪುಗಳ ಮೆರವಣಿಗೆ ಕಾಣುತ್ತದೆ. ‘ವಾಸ್ತವ ಪ್ರತಿವಾಸ್ತವ’ ಕೂಡ ಅವರು ನುಡಿಯಲ್ಲಿ ಹಂಚಿಕೊಳ್ಳುವಷ್ಟೇ ಆಪ್ತ ವಿಷಯಗಳನ್ನು ಪದಗಳಲ್ಲಿ ಕಟ್ಟಿಕೊಟ್ಟಿದೆ.

ಈ ಕೃತಿಯನ್ನು ಕೇವಲ ವಿಮರ್ಶೆಗಳ ಸಂಕಲನ ಎನ್ನಲಾಗದು. ಸಾಹಿತ್ಯಪ್ರೇಮಿಯೊಬ್ಬರು ರಸಾಸ್ವಾದವನ್ನು ಹಂಚಿಕೊಳ್ಳುವ ಅಪರೂಪದ ಬಗೆ ಎಂದೇ ಹೇಳಬೇಕು. ‘ಸುಗಮ ಸಂಗೀತದ ಇತಿಹಾಸ’ ಎಂಬ ವಿಮರ್ಶೆಯನ್ನು ಉದಾಹರಣೆಯಾಗಿ ನೋಡೋಣ. ಲೀಲಾವತಿಯವರು ಸುಗಮ ಸಂಗೀತವನ್ನು ಕಂಡರಿಸಿದ ರೀತಿಯನ್ನು ಬಣ್ಣಿಸುತ್ತಲೇ ದಿವಾಕರರ ಸಂಗೀತದ ಒಳನೋಟಗಳೂ ಆ ಮೂಲಕ ದಕ್ಕುತ್ತವೆ. ಸಂಗೀತಗಾರ ಎಸ್. ಕೃಷ್ಣಮೂರ್ತಿ ಅವರ ಕುರಿತ ಬರಹವೂ ಇದನ್ನೇ ಪುಷ್ಟೀಕರಿಸುತ್ತದೆ.

ಕೃತಿಯ ಬರಹಗಳನ್ನು ಮೂರು ಭಾಗಗಳಾಗಿ ವಿಂಗಡಿಸಿದ್ದಾರೆ. ಆದರೂ ಎಲ್ಲವುಗಳಲ್ಲಿ ವಿಸ್ತಾರದ ತಂತುವೊಂದು ಸಾಮಾನ್ಯ ಎನ್ನುವಂತೆ ಕಾಣುತ್ತದೆ. ಮಾಸ್ತಿ ಅವರ ಕುರಿತ ಬರಹದಲ್ಲಿ ಕಥೆಗಾರ ಮಾಸ್ತಿ, ಮನುಷ್ಯನಾಗಿ ಮಾಸ್ತಿ, ವಿಮರ್ಶಕರಾಗಿ ಮಾಸ್ತಿ ಎಲ್ಲವೂ ಅನಾವರಣಗೊಳ್ಳುವುದು ದಿವಾಕರರ ಶಕ್ತಿ. ಮಾಸ್ತಿ ಅವರು ‘ಕ್ರೌರ್ಯ’ ಕಥೆಯಲ್ಲಿ ತಮಗೆ ಇಷ್ಟವಾಗದ ಒಂದು ಸಂಗತಿಯನ್ನು ಹೇಳಿದ್ದಾರೆ. ಅದನ್ನೂ ದಿವಾಕರ್ ಮುಚ್ಚುಮರೆ ಮಾಡದೆ ದಾಖಲಿಸಿದ್ದಾರೆ.

ಇಂತಹ ರಚನೆ ಅಪ್ಪಟ ಸಾಹಿತ್ಯ ಪ್ರೀತಿ ಇರುವವರಿಗಷ್ಟೇ ಸಾಧ್ಯ. ದಿವಾಕರರ ವಿಮರ್ಶಾ ವಿವೇಕದ ಜೊತೆಗೆ ರಸಾನುಭವಕ್ಕೂ ಈ ಕೃತಿಯ ಓದು ಮುಖ್ಯ.

ವಾಸ್ತವ ಪ್ರತಿವಾಸ್ತವ

ಲೇ:ಎಸ್.ದಿವಾಕರ್

ಪ್ರ: ವೀರಲೋಕ

ಸಂ: 7022122121

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.