ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದ ಸಮೀಪದ ಮುಂಡಾಜೆ ಗ್ರಾಮದಲ್ಲಿ ಜನಿಸಿ, ರಂಗಭೂಮಿಯಲ್ಲಿ ರಂಗಕರ್ಮಿಯಾಗಿ ದಿವಂಗತ ಎಂ.ರಂಗನಾಥ ಭಟ್ ಅವರಿಟ್ಟ ಹೆಜ್ಜೆ ಗುರುತು ಇತಿಹಾಸ. ಅವರ ರಂಗಾನುಭವದ ಸಂಗ್ರಹವೇ ‘ಕಲಾರಾಧನೆ’.

ತಮ್ಮ ಕಲಾಜೀವನದ ಪರಿಚಯವನ್ನು ರಂಗನಾಥ ಭಟ್ ಅವರು 1966ರಲ್ಲಿ ಪ್ರಕಟಿಸಿದ್ದರು. ಈ ಕೃತಿಯನ್ನು ಇದೀಗ ಮೈಸೂರಿನ ಕವಿತಾ ಪ್ರಕಾಶನ ಮರುಮುದ್ರಣಗೊಳಿಸಿದೆ.

ಈ ಕೃತಿಯಲ್ಲಿ ರಂಗನಾಥ ಭಟ್ ಅವರು ತಮ್ಮ ಕಲಾಜೀವನ ಹಾಗೂ ಅಲ್ಲಿ ನಡೆದ ಘಟನೆಗಳನ್ನಷ್ಟೇ ವಾಚಕರ ಮುಂದೆ ತೆರೆದಿಟ್ಟಿಲ್ಲ. ಜೊತೆಗೆ, ಹದಿಮೂರರ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡು ತಾವು ಹಾಗೂ ತಮ್ಮ ಕುಟುಂಬ ಎದುರಿಸಿದ ಸಂಕಷ್ಟ, ಪಿಟೀಲು ವಾದಕರಾಗಿದ್ದ ಶಿವಪ್ಪ ಶಾನುಭೋಗರ ಮೂಲಕ ರಂಗಪ್ರವೇಶಿಸಿದ ಘಟನೆ, ‘ಮೈಸೂರು ಪ್ರಾಂತ್ಯದ ಲಂಡನ್’ ತೀರ್ಥಹಳ್ಳಿಯಲ್ಲಿ ಹರಿಶ್ಚಂದ್ರ ಪಾತ್ರಕ್ಕೆ ಸಿಕ್ಕಿದ ಮನ್ನಣೆ, ಅಂದಿನ ಕಾಂಗ್ರೆಸ್ ಸರ್ಕಾರ ತನಗೆ ನೀಡಿದ ನಿವೃತ್ತಿ ವೇತನದ ಬಗೆಗಿನ ಅಸಮಾಧಾನ, ಕರ್ನಾಟಕದಲ್ಲಿ ನಿವೃತ್ತ ಕಲಾವಿದರನ್ನು ಸರ್ಕಾರ ಹೇಗೆ ನೋಡಿಕೊಳ್ಳುತ್ತಿತ್ತು ಎನ್ನುವುದರ ಬಗ್ಗೆಯೂ ರಂಗನಾಥ ಭಟ್ಟರು ಓದುಗರ ಮುಂದಿರಿಸಿದ್ದಾರೆ. ಮರುಮುದ್ರಣದ ಸಮಯದಲ್ಲೂ ಮೂಲ ಕೃತಿಯಲ್ಲಿ ರಂಗನಾಥ ಭಟ್ ಅವರು ಬಳಸಿದ್ದ ಗ್ರಾಮೀಣ ಭಾಷೆಯ ಸೊಗಡನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ.

ಕೃತಿ: ಕಲಾರಾಧನೆ

ಲೇ: ಎಂ. ರಂಗನಾಥ ಭಟ್

ಪ್ರ: ಕವಿತಾ ಪ್ರಕಾಶನ, ಮೈಸೂರು

ಸಂ: 9880105526

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.