ಕಲ್ಯಾಣಪುರ

ಲೇ: ವಿಕ್ರಮ ವಿಸಾಜಿ

ಪ್ರ: ನೆಲದ ನುಡಿ

ಸಂ: 78927 29847

ಬಸವಣ್ಣ ಕಲ್ಯಾಣ ಬಿಟ್ಟಿದ್ದು ಹೇಗೆ? ಬಿಡುವ ಮುನ್ನ ಅವರ ಮನದೊಳಗಿನ ವಿಪ್ಲವ ಹೇಗಿತ್ತು? ಮಾನವೀಯ ಮೌಲ್ಯಗಳಿಗೆ ಆತುಬಿದ್ದಾಗ ಅಣ್ಣ ಅನುಭವಿಸಿದ ಅಸಹಾಯಕತನ ಎಂಥದ್ದು? ಕನಸುಗಳೆಂದು ಕನವರಿಸುವಾಗ ಹೊರಗಿನ ಹೋರಾಟ, ಒಳಗಿನ ಸಂಘರ್ಷಕ್ಕೆ ಮೌನದ ಮೊರೆ ಹೋಗಿದ್ದು ಯಾಕೆ? ವಚನ ಕ್ರಾಂತಿಗೂ ಮೊದಲಿನ ನೀರವ ರಾತ್ರಿಗಳನ್ನು ಅಣ್ಣ ಹೇಗೆ ಕಳೆದ? ಅಕ್ಕ ನಾಗಲಾಂಬಿಕೆ ಅವರು ನೀಡುವ ಸಮಾಧಾನ, ಅಲ್ಲಮ ಪ್ರಭುಗಳ ಮುನ್ಸೂಚನೆ, ಶರಣರು ಕಲ್ಯಾಣ ತೊರೆಯುವಾಗ ಒಳಗೊಳಗೆ ಅಣ್ಣ ಅನುಭವಿಸಿದ ಕುಸಿತ ಎಂಥದ್ದು? ನೀಲಾಂಬಿಕೆ ಬಸವಣ್ಣನನ್ನು ಒಪ್ಪಿಕೊಂಡ, ಅಪ್ಪಿಕೊಂಡ ಪ್ರೀತಿಯೂ, ಗಂಗಾಂಬಿಕೆ ಪ್ರಶ್ನೆಗಳ ಕೂರಂಬುಗಳನ್ನು ಬಸವಣ್ಣನತ್ತ ಬೀರುತ್ತಲೇ ಒಳ ಹೊರಗಿನ ಸಂಘರ್ಷಕ್ಕೆ ಸ್ಪಷ್ಟ ರೂಪ ಕೊಡುವ ರೀತಿ, ಮೂರು ಸ್ತ್ರೀಪಾತ್ರಗಳು ಮಹಾಮಂತ್ರಿ ಬಸವೇಶ್ವರರನ್ನೂ, ಅನುಭವ ಮಂಟಪದ ಮತ್ತು ಶರಣರ ಪ್ರಿಯ ಬಸವಣ್ಣನನ್ನು ಅನಾವರಣಗೊಳಿಸುತ್ತ ಹೋಗುತ್ತಾರೆ, ನಾಟಕಕಾರರು.

ಹನ್ನೆರಡನೆ ಶತಮಾನದ ವಸ್ತುವಾದರೂ ಓದುವಾಗ, ಇದು ಈ ಕಾಲದ ರಾಜಕಾರಣಕ್ಕೂ ಅನ್ವಯವಾಗುತ್ತ ಹೋಗುತ್ತದೆ. ಪ್ರಭುತ್ವ ಬಯಸುವುದು ಏನು? ಧರ್ಮ ಏನು ಹೇಳುತ್ತದೆ? ಮಹಾಮನೆಯಲ್ಲಿ ನಡೆದ ಸಂವಾದಗಳೆಲ್ಲವೂ ಸಾರ್ವಕಾಲಿಕ ಎನಿಸತೊಡಗುತ್ತವೆ. ಇಲ್ಲಿ ಅಲ್ಲಮ ಪ್ರಭುಗಳ ಅರಿವು, ಬಿಜ್ಜಳನ ಅಧಿಕಾರ ಎರಡೂ ಮಾತಿನಲ್ಲಿಯೇ ಸಂಘರ್ಷಕ್ಕೆ ಒಳಪಡುತ್ತವೆ. ಕಲ್ಯಾಣಪುರದ ಓಣಿಯೊಳಗಣ ಕತ್ತಲು, ಬಸವಣ್ಣನ ಹೃದಯ ಜ್ಯೋತಿ ಎರಡರ ನಡುವಿನ ಸಂಘರ್ಷದ ಕಥನ ಬಲು ಕಾಡುವಂಥದ್ದು.

ಪ್ರತಿ ಅಂಕದ ಮೊದಲಿಗೆ ಆಯ್ದ ವಚನಗಳ ಸಾಲು, ಆ ನಾಟಕ ಸಾಗುವ ದಿಕ್ಕನ್ನು ಸ್ಪಷ್ಟಪಡಿಸುತ್ತ ಹೋಗುತ್ತವೆ. ಬೆಳಗು ಮತ್ತು ಬೈಗುಗಳನ್ನು ಮೌನವಾಗಿಯೇ ಕಳೆಯುವ ಬಸವಣ್ಣನ ಮನದ ನೀರವ ಓದುಗರನ್ನು ಕಾಡತೊಡಗುತ್ತದೆ. ಕ್ರಾಂತಿಕಾರಿಯೊಬ್ಬ ಸಾಮಾನ್ಯ ಮನುಷ್ಯನಾಗಿ ಅನುಭವಿಸುವ ಅಸಹಾಯಕತನ ಈ ನಾಟಕದ ಜೀವಾಳವಾಗಿದೆ. ಕಲ್ಯಾಣಪುರದ ಓಣಿಯೊಳಗಣ ಕತ್ತಲು, ಬಸವಣ್ಣನ ಹೃದಯ ಜ್ಯೋತಿ ಎರಡರ ನಡುವಿನ ಸಂಘರ್ಷದ ಕಥನ ಬಲು ಕಾಡುವಂಥದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.