ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪುಸ್ತಕ ವಿಮರ್ಶೆ: ಪಠ್ಯಪುಸ್ತಕದಲ್ಲಿ ಮತೀಯವಾದ ಸೂಕ್ಷ್ಮಕ್ಕೆ ಕನ್ನಡಿ

Published 13 ಜನವರಿ 2024, 23:30 IST
Last Updated 13 ಜನವರಿ 2024, 23:30 IST
ಅಕ್ಷರ ಗಾತ್ರ

ಪಠ್ಯಪುಸ್ತಕದಲ್ಲಿನ ವಸ್ತುವಿಷಯಗಳು ಚರ್ಚೆಗೆ ಒಳಪಡುತ್ತಿರುವ ಸಂದರ್ಭವಿದು. ನಿರ್ದಿಷ್ಟ ಅಜೆಂಡಾ ಹೇರುವುದು ಎಷ್ಟು ಸರಿ ಎಂದು ಶಿಕ್ಷಣ ತಜ್ಞರೇ ದನಿ ಎತ್ತಿರುವ ಉದಾಹರಣೆಗಳಿವೆ. ಕಲಿಕಾರ್ಥಿಗಳಿಗೂ ಅಧ್ಯಯನದಲ್ಲಿ ಇದರಿಂದಾಗಿಯೇ ಗೊಂದಲ ಕೂಡ ಮೂಡುತ್ತಿದೆ. ಪಠ್ಯಪುಸ್ತದಲ್ಲಿ ಮತೀಯವಾದೀಕರಣ ಮತ್ತು ಇತಿಹಾಸದ ತಿರುಚುವಿಕೆ ಹೇಗೆಲ್ಲ ಆಗಿದೆ ಎನ್ನುವುದರ ವಿಶ್ಲೇಷಣಾತ್ಮಕ ಕೃತಿ ಇದು. ಸರ್ಕಾರಿ ಶಿಕ್ಷಣ ಸಂಸ್ಥೆಗಳು ಹಾಗೂ ಪಠ್ಯಪುಸ್ತಕಗಳಲ್ಲಿ ಮತೀಯವಾದೀಕರಣದ ಬೆಳವಣಿಗೆಗಳು 1999ರಿಂದ ಇಲ್ಲಿಯವರೆಗೆ ಹೇಗೆಲ್ಲಾ ಆಗಿವೆ ಎನ್ನುವುದನ್ನು ಮಾಹಿತಿ ಸಹಿತ ಚರ್ಚಿಸುವ ಗುಣದ ಕೃತಿ ಇದು. ಇಂತಹ ಕೃತಿಯ ರಚನೆಗೆ ಬಳಸಿರುವ ಆಕರ ಲೇಖನಗಳು ಹಾಗೂ ಪುಸ್ತಕಗಳನ್ನೂ ಕೊನೆಯಲ್ಲಿ ಹೆಸರಿಸಿರುವುದರಿಂದ ಅಧ್ಯಯನ ವಿಸ್ತರಣೆಗೂ ಅವಕಾಶ ಕಲ್ಪಿಸಿದಂತೆ ಆಗಿದೆ.

‘ಶಿಕ್ಷಣ ತಜ್ಞರು ಕೇವಲ ಅಕಾಡೆಮಿಕ್ ಶಿಸ್ತಿನಲ್ಲಿ ಶಿಕ್ಷಣದ ಬಗ್ಗೆ ಮಾತನಾಡಿದರೆ ಸಾಲದು. ಅದು ಬಹುಮುಖೀ ಸಮಾಜಗಳನ್ನು ಒಳಗೊಂಡ ಪರಿಜ್ಞಾನದಲ್ಲಿ ಶಿಕ್ಷಣದ ಅನುಷ್ಠಾನದ ಬಗ್ಗೆ ಯೋಚಿಸಬೇಕು ಎಂಬ ಹೊಣೆಗಾರಿಕೆಯಲ್ಲಿ ಶ್ರೀಪಾದರವರು ಬರಹಕ್ಕೆ ತೊಡಗಿದ್ದಾರೆ... ಇಡೀ ಪುಸ್ತಕ ಮಾಹಿತಿಗಳ ವರದಿ ನಿರೂಪಣೆಯಾಗಿಲ್ಲ; ಯಾವುದೇ ಆಡಳಿತಗಾರರಿಗೆ, ಆಳುವ ಪಕ್ಷಗಳಿಗೆ ಮಾರ್ಗದರ್ಶಿ ಕೈಪಿಡಿಯಂತಿದೆ’ ಎಂದು ಪ್ರೊ. ಎಸ್‌.ಜಿ. ಸಿದ್ಧರಾಮಯ್ಯ ಅವರು ಕೃತಿಯ ಕುರಿತು ಬರೆದಿದ್ದಾರೆ. ಅವರ ಈ ಮಾತಿಗೆ ಪುಷ್ಟಿ ಕೊಡುವ ಅಸಂಖ್ಯ ಮಾಹಿತಿ ಪುಸ್ತಕದಲ್ಲಿ ಇದೆ. 

ಕೃ: ವಿಷವಟ್ಟಿ ಸುಡುವಲ್ಲಿ

ಲೇ: ಬಿ. ಶ್ರೀಪಾದ ಭಟ್

ಪ್ರ: ಕ್ರಿಯಾ ಮಾಧ್ಯಮ ಪ್ರೈ. ಲಿಮಿಟೆಡ್

ಪು: 164 ದ: ₹180 ಸಂ: 9036082005

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT