ನಮ್ಮ ನಿಮ್ಮ ಸುತ್ತ ಇರುವ ಚಿತ್ರಗಳನ್ನು ನೋಡಿ ಸುಮ್ಮನಾಗುತ್ತೇವೆ. ಹಾಗೆ ಸುಮ್ಮನಾಗದೇ ತಮ್ಮ ಸುತ್ತಲಿನ ಕಥೆಗಳನ್ನು ಈ ಕಥೆಗಾರ ಅನುಭವಿಸುತ್ತಲೇ ಹೋಗುತ್ತಾರೆ. ಇಲ್ಲಿಯ ಪ್ರತಿಪಾತ್ರಗಳೂ ತಮ್ಮ ಹಿಂದೆ ಹೊಸ ಕಥೆ ಬಚ್ಚಿಟ್ಟುಕೊಂಡಿರುವಂತಿವೆ. ರಾಯಚೂರಿನ ನೆಲದ ಭಾಷೆ, ಬಿಸಿಲಿನ ಬೇಗೆ, ಸಾಲ ಶೂಲವಾಗಿ ಬಲಿ ತೆಗೆದುಕೊಂಡ ಜೀವಗಳು ಎಲ್ಲವೂ ಇಲ್ಲಿ ಕಣ್ಮುಂದೆ ದೃಶ್ಯ ಕಟ್ಟುತ್ತ ಹೋಗುತ್ತವೆ. ಅಂಥ ಚಿತ್ರಕ ಶಕ್ತಿಯ ಕಥೆಗಳು ಈ ಸಂಕಲನದಲ್ಲಿವೆ. ಪ್ರತಿ ಮನುಷ್ಯನಿಗೂ ತುಸು ಪ್ರೀತಿ, ತುಸು ಗುರುತಿಸಿಕೊಳ್ಳುವಿಕೆ ಮತ್ತಿನಿತು ವ್ಯಾಲಿಡೇಷನ್, ಈ ಮೂರು ಗುಣಗಳು ನವಿರಾಗಿ ಕಥೆಗಳಲ್ಲಿ ಹರಡಿಕೊಳ್ಳುತ್ತವೆ. ಅಧಿಕಾರ, ವಂಚನೆ, ದುರಾಸೆ, ಮೋಸ, ದುರಾಡಳಿತ ಇವು ಢಾಳಾಗಿ ಕಾಣಿಸಿಕೊಳ್ಳುತ್ತವೆ. ನಮ್ಮ ಜೊತೆಗಿನವರ ಜೀವನ ಚಿತ್ರಗಳನ್ನು ನೋಡದಷ್ಟು ನಾವೆಲ್ಲ ಕಳೆದುಹೋಗಿದ್ದೇವೆಯೇ ಎಂಬ ಪ್ರಶ್ನೆಯನ್ನು ಈ ಕಥೆಗಳು ನಮ್ಮಲ್ಲಿ ಮೂಡಿಸುತ್ತವೆ. ಅಹುದಹುದು, ಇಂಥ ಪಾತ್ರಗಳು ನಮ್ಮ ಸುತ್ತಲೂ ಇವೆ, ಇಂಥ ಕಥೆಗಳನ್ನು ನಾವೂ ಕೇಳಿದ್ದೇವೆ ಎಂದಷ್ಟೇ ಅನಿಸಿದ್ದರೆ ಸಾಮಾನ್ಯ ಕಥೆಗಳಾಗಿರುತ್ತಿದ್ದವು. ಆದರೆ ಜಗತ್ತು ಇಷ್ಟೆಲ್ಲ ಚೂರಾಗಿದ್ದಾಗಲೂ, ಚೂರಾದಾಗಲೂ ನಾವು ಗಮನಿಸಲಿಲ್ಲವಲ್ಲ, ಸರಿಪಡಿಸಲು ಯತ್ನಿಸಲಿಲ್ಲವಲ್ಲ ಎಂಬ ಹಳಹಳಿಕೆಯನ್ನು ಈ ಕಥೆಗಳು ಉಳಿಸುತ್ತವೆ. ಇಲ್ಲಿ ಕಥೆಗಾರನೂ, ಕಥೆಯ ಪಾತ್ರಗಳೂ ನಮ್ಮ ಮೇಲೆ ಪಾರಮ್ಯ ಸಾಧಿಸುತ್ತ ಹೋಗುತ್ತವೆ. ರಾಯಚೂರು, ಕೊಪ್ಪಳ ಸುತ್ತಲಿನ ಭಾಷಾ ಸೊಗಡು, ಅಲ್ಲಿಯ ವಸ್ತ್ರವೈವಿಧ್ಯ, ಆಹಾರ ಎಲ್ಲವೂ ಕಥೆಯಲ್ಲಿ ಮೂಡಿ ಬಂದಾಗಲೆಲ್ಲ ಅದನ್ನು ಅನುಭವಿಸುವಂತೆಯೇ ದಟ್ಟವಾಗಿ ಕಥೆಗಳನ್ನು ನಿರೂಪಿಸಲಾಗಿದೆ.

ಮಾಯೆಯೆಂಬುದು ಮಾಯೆಯಲ್ಲ

ಲೇ: ಹಳೆಮನೆ ರಾಜಶೇಖರ

ಪ್ರ: ಅಂಕಿತ ಪ್ರಕಾಶನ

ಸಂ: 9019190502

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.