ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೊದಲ ಓದು | ಮಕ್ಕಳನ್ನು ಸೆಳೆಯುವ ಮೀನಿನ ಬುಟ್ಟಿ

Published 17 ಡಿಸೆಂಬರ್ 2023, 0:30 IST
Last Updated 17 ಡಿಸೆಂಬರ್ 2023, 0:30 IST
ಅಕ್ಷರ ಗಾತ್ರ

ಮಕ್ಕಳ ಸಾಹಿತ್ಯ ಲೋಕ ಈಗ ಸಮೃದ್ಧವಾಗುತ್ತಿದೆ. ಸಾಲು ಸಾಲು ಹೊತ್ತಿಗೆಗಳು ಈ ಲೋಕಕ್ಕೆ ಸೇರ್ಪಡೆಯಾಗುತ್ತಿದ್ದು, ಮಕ್ಕಳನ್ನು ಆಕರ್ಷಿಸುವಂತಹ ವಿಷಯ, ಚಿತ್ರಕಲೆಯುಳ್ಳ ಕಥಾ ಪುಸ್ತಕಗಳ ಹೊಸ ಪ್ರಪಂಚವೇ ಸೃಷ್ಟಿಯಾಗಿದೆ. ಇದಕ್ಕೆ ಹೊಸ ಸೇರ್ಪಡೆ ‘ಮೀನಿನ ಬುಟ್ಟಿ’. 

ಸಾಹಿತ್ಯ ಮತ್ತು ಸಿನಿಮಾ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಕಿರಣ್‌ ಮಂಜುನಾಥ್‌, ಮಕ್ಕಳಿಗಾಗಿ ಮೀನಿನ ಪ್ರಪಂಚ ಪರಿಚಯಿಸುವ, ಒಡನಾಟದ ಸಂತೋಷವನ್ನು ಹರಡುವ ಪುಟ್ಟ ಕೃತಿ ಹೊರತಂದಿದ್ದಾರೆ. ಇಲ್ಲಿ ಚಿತ್ರಕಲೆಗೆ ಆದ್ಯತೆ. ಮಕ್ಕಳಿಗೆ ಅರ್ಥವಾಗುವಂತೆ ಪುಟ್ಟ ವಾಕ್ಯಗಳಲ್ಲಿ ಕಥೆ ಹೇಳಿದ್ದಾರೆ ಕಿರಣ್‌. ಚಿತ್ರಕಲೆಯ ಮೂಲಕ ಮಕ್ಕಳಿಗೆ ಕಥೆಯನ್ನು ಹೇಳಲು ಇಚ್ಛಿಸುವ ನಿಹಾರಿಕಾ ಶೆಣೈ ಅವರ ಚಿತ್ರಕಲೆಯ ಸೊಬಗನ್ನು ಇಲ್ಲಿ ಕಾಣಬಹುದು. ‘ಮೀನಿನ ಬುಟ್ಟಿ’ಯನ್ನು ನೆಪವಾಗಿಟ್ಟುಕೊಂಡು ಒಡನಾಟದ ಖುಷಿಯನ್ನು ಕಿರಣ್‌ ಇಲ್ಲಿ ಹರಡಿದ್ದಾರೆ. ಆನ್‌ಲೈನ್‌ನಲ್ಲೇ ಮೀನು ಆರ್ಡರ್‌ ಮಾಡುವ ಈ ಸಂದರ್ಭದಲ್ಲಿ, ಆ ಕಾಲದಲ್ಲಿದ್ದ ‘ಮೀನಮ್ಮ’ನಂತಹ ಹಲವು ಮಹಿಳೆಯರೊಂದಿಗೆ ಊರಿನ ಜನರಿಗಿದ್ದ ಒಡನಾಟವನ್ನು ಕಿರಣ್‌ ಇಲ್ಲಿ ಮೆಲುಕು ಹಾಕಿದ್ದಾರೆ. ಹಳ್ಳಿಗಳಲ್ಲಿ ಆಕೆಯೊಂದಿಗಿಷ್ಟು ಹರಟೆ, ವ್ಯಾಪಾರ ನಡೆಯುತ್ತಿದ್ದ ಘಟನೆಗಳು ಮಕ್ಕಳಿಗೆ ಕಥೆ ಓದುತ್ತಾ ನೆನಪಾಗಬಹುದು. ಮಕ್ಕಳಿಗೂ ಮೀನಿನ ಒಂದು ಹೊಸ ಪ್ರಪಂಚ ತೆರೆದಿಡಬಹುದು.

ಮೀನಿನ ಬುಟ್ಟಿ

ಕಥೆ: ಕಿರಣ್‌ ಮಂಜುನಾಥ್‌

ಚಿತ್ರಗಳು: ನಿಹಾರಿಕ ಶೆಣೈ

ಪ್ರ: ಮೊಗ್ಗು–ಋತುಮಾನ ಪುಸ್ತಕ

ಸಂ:9480035877

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT