ಜುಗಲ್ ಬಂದಿ ಈಗ ಫ್ಯೂಷನ್ ಎನ್ನುವ ಪ್ರಯೋಗ ಜಾಗತಿಕ ಕಲೆಗಳ ನಡುವೆ ಬಹಳ ಉತ್ಕಟವಾಗಿ ನಡೆಯುತ್ತಿದೆ. ಆದರೆ ಫ್ಯೂಷನ್ಗೂ ಸಹಯೋಗಕ್ಕೂ ನಡುವೆ ಏನು ವ್ಯತ್ಯಾಸ? ಎರಡು ಭಿನ್ನ ಶೈಲಿಯ ಕಲೆಯನ್ನು ಅದ್ಭುತವಾಗಿ ಸಂಯೋಜಿಸಿದಾಗ ಒಂದು ಮುಹೂರ್ತದಲ್ಲಿ ಅವುಗಳ ವೈಶಿಷ್ಟ್ಯದ ಜೊತೆಗೇ ಭಿನ್ನತೆಯನ್ನೂ ಮಿಂಚಿನಂತೆ ಝಗ್ಗನೆ ಹೊಳೆಯಿಸಿ ರಸಿಕರನ್ನು ಮಂತ್ರಮುಗ್ಧರನ್ನಾಗಿಸುತ್ತದೆ.

ಸಾಮ್ಯ ಮತ್ತು ವೈಷಮ್ಯಗಳೆರಡೂ ಅವಿನಾಭಾವದಲ್ಲಿ ಮಿಳಿತಗೊಂಡ ಒಂದೇ ಪ್ರಕಾರದ ಎರಡು ಶೈಲಿಯ ಕಲೆಗಳಲ್ಲಿ ಪ್ರಯೋಗಕ್ಕೆ ಮಿತಿ ಇರುತ್ತದೆಯೇ? ಫ್ಯೂಷನ್ ಎನ್ನುವ ಪ್ರಯೋಗಗಳಲ್ಲಿ ಎರಡೂ ಕಲೆಗಳು ತಮ್ಮ ಸ್ವಂತಿಕೆಯನ್ನು ಉಳಿಸಿಕೊಂಡೇ ಮತ್ತೊಂದರ ಜೊತೆ ಸಂವಾದದಲ್ಲಿ ತೊಡಗಿಸಿ ಕೊಳ್ಳುತ್ತದೆಯೋ ಅಥವಾ ಎರಡೂ ತಮ್ಮ ಸ್ವತಂತ್ರ ಅಸ್ತಿತ್ವವನ್ನು ಒಂದರೊಳಗೊಂದು ವಿಲೀನಗೊಳಿಸಿ ಮತ್ತೊಂದೇನೋ ಆಗುತ್ತದೆಯೋ? ಹಿಂದೆ ಸಂಗೀತ ಜುಗಲ್ ಬಂದಿಗಳು ಜನಪ್ರಿಯವಾಗಿದ್ದವು.

ಜುಗಲ್ ಬಂದಿ ಈಗ ಫ್ಯೂಷನ್ ಎನ್ನುವ ಪ್ರಯೋಗ ಜಾಗತಿಕ ಕಲೆಗಳ ನಡುವೆ ಬಹಳ ಉತ್ಕಟವಾಗಿ ನಡೆಯುತ್ತಿದೆ. ಆದರೆ ಫ್ಯೂಷನ್ಗೂ ಸಹಯೋಗಕ್ಕೂ ನಡುವೆ ಏನು ವ್ಯತ್ಯಾಸ? ಎರಡು ಭಿನ್ನ ಶೈಲಿಯ ಕಲೆಯನ್ನು ಅದ್ಭುತವಾಗಿ ಸಂಯೋಜಿಸಿದಾಗ ಒಂದು ಮುಹೂರ್ತದಲ್ಲಿ ಅವುಗಳ ವೈಶಿಷ್ಟ್ಯದ ಜೊತೆಗೇ ಭಿನ್ನತೆಯನ್ನೂ ಮಿಂಚಿನಂತೆ ಝಗ್ಗನೆ ಹೊಳೆಯಿಸಿ ರಸಿಕರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಅದರಲ್ಲೂ ಕಲಾವಿದರು ಅಪೂರ್ವ ದೈವೀಕ ಪ್ರತಿಭೆಯುಳ್ಳವರಾದರೆ ಅದು ಅಮೃತ ಗಳಿಗೆಯೇ ಹೌದು.

ಅಂತಹ ಒಂದು ಮಾಂತ್ರಿಕ ಪ್ರಯೋಗವೇ ಶ್ರೀಲಂಕಾದ ಚಿತ್ರಸೇನಾ ಡ್ಯಾನ್ಸ್ ಕಂಪನಿ ಮತ್ತು ಭಾರತದ ನೃತ್ಯಗ್ರಾಮದ ಕಲಾವಿದರು ಸೇರಿ ಪ್ರಸ್ತುತಪಡಿಸುವ ನೃತ್ಯ ಪ್ರದರ್ಶನ ‘ಆಹುತಿ’. ಇದು ನಮ್ಮ ಒಡಿಸ್ಸಿ ಮತ್ತು ಶ್ರೀಲಂಕಾದ ಕಾಂಡ್ಯನ್ ನೃತ್ಯ ಶೈಲಿಯ ಸಮ್ಮಿಲನ. ಒಡಿಸ್ಸಿ ನೃತ್ಯದ ಶೃಂಗಾರಭರಿತ ಪ್ರಲೋಭನೆಯ ಲಾಲಿತ್ಯವನ್ನು, ಜೊತೆಗೆ ಕಾಂಡ್ಯನ್ ನೃತ್ಯದ ಸುತ್ತುವ 'ಭ್ರಮರಿ' ಮತ್ತು ನೆಗೆತದ ‘ಉತ್ಪಳನ’ವನ್ನು ಅವುಗಳ ಶುದ್ಧ ಸ್ವರೂಪದಲ್ಲಿ ಪ್ರದರ್ಶಿಸುವಾಗ ಅಲ್ಲೊಂದು ದೈವೀಕ ಅನುಭವ ಉಂಟಾಗುತ್ತದೆ. ಅಷ್ಟಲ್ಲದೇ ಈ ಕಲಾವಿದರನ್ನು ವಿಶ್ವದ ಅತ್ಯುತ್ತಮ ಸಾಲಿನಲ್ಲಿ ಹೆಸರಿಸುತ್ತಿದ್ದರೇ?

ಬೆಂಗಳೂರಿನ ಭೂಮಿಜಾ ಪ್ರಸ್ತುತ ಪಡಿಸುತ್ತಿರುವ ಈ ನೃತ್ಯ ವೈಭವದ ನಿರ್ದೇಶನ, ನೃತ್ಯ ಸಂಯೋಜನೆ ಹಾಗೂ ಶ್ರವ್ಯ ವಿನ್ಯಾಸಕಾರ್ತಿ ನೃತ್ಯಗ್ರಾಮದ ಪ್ರಥಮ ಪದವೀಧರೆ ಸುಪ್ರಸಿದ್ಧ ಒಡಿಸ್ಸಿ ನೃತ್ಯ ಕಲಾವಿದೆ ಸುರೂಪಾ ಸೆನ್. ಜೊತೆ ನೀಡಿದವರು ಚಿತ್ರಸೇನಾ ಕಂಪನಿಯನ್ನು ಹುಟ್ಟುಹಾಕಿದ ಕಲಾವಿದ ಚಿತ್ರಸೇನರ ಮೊಮ್ಮಗಳಾದ, ಪ್ರಸ್ತುತ ಅದರ ಆರ್ಟಿಸ್ಟಿಕ್ ಡೈರೆಕ್ಟರ್ ಆದ ಹೇಶ್ಮಾ ವಿಘ್ನರಾಜ. ಸಂಗೀತ ಪ್ರಸಿದ್ಧ ಪಂಡಿತ್ ರಘುನಾಥ್ ಪಾಣಿಗ್ರಾಹಿ ಅವರದು.

ಈ ಎರಡು ತಂಡಗಳು ಹಿಂದೆ 2018ರಲ್ಲಿ ‘ಸಂಹಾರ’ ಎನ್ನುವ ಜಂಟಿ ಪ್ರಯೋಗ ಮಾಡಿತ್ತು. ಅದಕ್ಕೆ ದಿ ನ್ಯೂಯಾರ್ಕ್ ಟೈಮ್ಸ್ ‘ವರ್ಷದ ಅತ್ಯುತ್ತಮ ನೃತ್ಯ’ ಎಂದು ಹೇಳಿತ್ತು. ಈಗ ಎರಡನೆಯ ಬಾರಿಗೆ ‘ಆಹುತಿ’ಯ ಪ್ರಯೋಗವನ್ನು ರೂಪಿಸಿ ಬೆಂಗಳೂರಿಗೆ ತರಲಾಗಿದೆ. ಇದರಲ್ಲಿ ನಾಲ್ಕು ಭಾಗಗಳಿವೆ. ಇವು ಪ್ರತ್ಯೇಕ ಭಾಗಗಳಾಗಿದ್ದು ಒಂದೇ ದೀರ್ಘ ಕಥೆಯಲ್ಲ. ಪ್ರಾರಂಭದ ಸಂಕೀರ್ತನ ಶುದ್ಧ ಒಡಿಸ್ಸಿಯಲ್ಲಿದ್ದು ‘ಸಂಕೀರ್ತನಂ’, ಜಯದೇವನ ಅಷ್ಟಪಡಿ ‘ಧೀರ ಸಮಿರೇ ಯಮುನಾ ತೀರೇ’ ಅಷ್ಟಪದಿಯಲ್ಲಿ ಮೈಮರೆತು ತಲ್ಲೀನರಾಗಿ ನರ್ತಿಸುವ, ಅಭಿನಯಿಸುವ ಸುರೂಪಾ ಅವರದ್ದು ಅದ್ಭುತ ಪ್ರತಿಭೆ. ಕಾವ್ಯ, ನೃತ್ಯ ಮತ್ತು ಸಂಗೀತ ಒಂದಾಗಿ ಮೇಳೈಸುವ ಅನುಭವವನ್ನು ಅದು ನೀಡುತ್ತದೆ.

ನಂತರ ನಾಲ್ಕು ಒಡಿಸ್ಸಿ ಕಲಾವಿದರು ಮತ್ತು ನಾಲ್ಕು ಕಾಂಡ್ಯನ್ ಕಲಾವಿದರಿಂದ ‘ಪೂರ್ಣ ಆರತಿ’ ನಡೆಯುತ್ತದೆ. ಮೂರನೆಯದು ಶಿವ ತಾಂಡವ. ಕೊನೆಯದು ಆಲಾಪ್.

ಈ ಬಾರಿ ಶ್ರೀಲಂಕಾ ತಂಡದಲ್ಲಿ ಇಬ್ಬರು ಪುರುಷ ಕಲಾವಿದರು ಸೇರಿದ್ದಾರೆ. ಕುಶಾಲ್ ಮತ್ತು ಅಖಿಲ. ವರ್ಣರಂಜಿತ ಧೋತ್ರವನ್ನುಟ್ಟು ತೆರೆದ ಎದೆಯಲ್ಲಿ ಪರಿಪೂರ್ಣ ಅಂಗಸೌಷ್ಠವವನ್ನು ಮೆರೆಯುತ್ತಾ, ಹಾರಿ ಹಾರಿ ನರ್ತಿಸುವ ಪರಿಗೆ ಬೆರಗಾಗದೇ ವಿಧಿಯಿಲ್ಲ. ಜಗನ್ನಾಥನ ಆರತಿಯ ಸಂಭ್ರಮವನ್ನು ರಂಗದ ಮೇಲೆ ಸಂಪೂರ್ಣ ವಾದ್ಯ ಧ್ವನಿ ಜಯಘೋಷ ಸಂಗೀತ ನೃತ್ಯದ ಮೂಲಕ ಆಚರಿಸುವಾಗ ಪ್ರೇಕ್ಷಕರೂ ಅದರಲ್ಲಿ ಒಂದಾಗಿ ಬಿಡುತ್ತಾರೆ.

‘ಆಲಾಪ್’ ಶುದ್ಧ ಹೆಜ್ಜೆ ತಾಳ ಚಲನೆಯ ಕೆಲೈಡೊಸ್ಕೊಪಿಕ್ ಪರಿಣಾಮ ಕಣ್ಣಿಗೆ ಹಬ್ಬ. ಒಡಿಸ್ಸಿ ಕಲಾವಿದರು ನೃತ್ಯದಲ್ಲೇ ವೀಣೆ, ಮದ್ದಳೆ, ಕೊಳಲು, ಮಂಜಿರಗಳನ್ನು ನುಡಿಸುತ್ತಾ ಲಾಸ್ಯದಲ್ಲಿದ್ದರೆ ಶ್ರೀಲಂಕಾದ ಕಲಾವಿದರು ಥಟ್ಟನೆ ಪ್ರವೇಶಿಸಿ ರಭಸದ ಜ್ಯಾಮಿತೀಯ ಫಾರ್ಮೇಶನ್ಗಳನ್ನು ಮಾಡುತ್ತಾ ಗಾಳಿಯಲ್ಲಿ ಹಾರುತ್ತಾ ದೇಹದ ಚಲನೆಯ ಎಲ್ಲಾ ಸಾಧ್ಯತೆಗಳನ್ನು ನಿಭಾಯಿಸುತ್ತಾರೆ. ಈ ನೃತ್ಯದಲ್ಲಿ ದೃಷ್ಟಿಯನ್ನು ಕಿತ್ತು ಅತ್ತಿತ್ತ ನೋಡುವುದಕ್ಕಾಗದು ಅಷ್ಟು ಚಿತ್ತಾಕರ್ಷಕ. ದೀಪ ಸಂಯೋಜನೆಯನ್ನು ಮಾಡಿರುವ ಲಿನ್ನ್ ಫೆರ್ನಾಂಡಿಸ್ ಇಡೀ ನೃತ್ಯದ ಆತ್ಮವನ್ನು ಒಳಗು ಮಾಡಿಕೊಂಡು ನಮಗೆ ಗೊತ್ತಾಗದಂತೆಯೇ ಒಂದು ವರ್ಣಲೋಕದಲ್ಲಿ ವಿಹರಿಸುವ ಅನುಭವ ಕೊಡುತ್ತಾರೆ.

ಈ ಪ್ರಯೋಗದ ಯಶಸ್ಸಿಗೆ ಕಾರಣ ಕಲಾವಿದರ ಪ್ರತಿಭೆ ಜೊತೆಗೆ ಸಂಗೀತ ಮತ್ತು ನೃತ್ಯ ಸಂಯೋಜನೆಯ ಉತ್ಕೃಷ್ಠ ಮಟ್ಟ. ಭರತನ ನಾಟ್ಯಶಾಸ್ತ್ರದಲ್ಲಿ, ದೇಗುಲ ಶಿಲ್ಪಗಳಲ್ಲಿ ಜೊತೆಗೆ ಕಾವ್ಯಗಳಲ್ಲಿ ವರ್ಣಿಸಿದ ನೃತ್ಯ ಶ್ರೇಷ್ಠತೆಯನ್ನು ಕಾರ್ಯರೂಪಕ್ಕಿಳಿಸಬೇಕಾದರೆ ಸಾಧನೆ ಬೇಕು. ಕೆ.ವಿ. ಸುಬ್ಬಣ್ಣ ಅವರು ಶ್ರೇಷ್ಠತೆಯ ವ್ಯಸನದ ಬಗ್ಗೆ ಹೇಳಿದಾಗ ಅದನ್ನು ಹಲವರು ತಪ್ಪು ತಿಳಿದರು. ಶ್ರೇಷ್ಠತೆಯ ಕಡೆಗೆ ಸಾಗುವುದು ಮತ್ತು ಸಾಧಿಸುವುದು ಕಲೆಯ ಉತ್ತುಂಗದ ಫಲಶ್ರುತಿ. ಶ್ರೇಷ್ಠತೆಯ ಕಡೆಗೆ ಸಾಗುವ ಬದ್ಧತೆ – ಕಮಿಟ್ಮೆಂಟ್ - ಇಲ್ಲದಿದ್ದರೆ ಕಲಾವಿದರು ಆ ಉತ್ತುಂಗವನ್ನು ತಲುಪದೆಯೇ ಅಲ್ಪ ತೃಪ್ತರಾಗಿ ಬಿಡುತ್ತಾರೆ. ಸತತ ಅಭ್ಯಾಸದ ಫಲ ಕಲಾವಿದರಿಗೋ ಅಥವಾ ಪ್ರೇಕ್ಷಕರಿಗೋ? ಕಲೆಯನ್ನು ತಪಸ್ಸಿಗೆ ಯಾಕೆ ಹೋಲಿಸುತ್ತಾರೆ? ‘ಆಹುತಿ’ ಪ್ರಯೋಗವನ್ನು ನೋಡುತ್ತಾ ಪ್ರೇಕ್ಷಕರೂ ಕಲಾವಿದರೂ ಕಲೆಯೂ ಒಂದೇ ಆಗಿಬಿಡುವ ಮಾಂತ್ರಿಕತೆ ಉಂಟಾಗುತ್ತದೆ. ಕಾರ್ಯಕ್ರಮದಲ್ಲಿ ಲೈವ್ ಸಂಗೀತ ಇರುತ್ತದೆ. ಸುರೂಪಾ, ಮಂಜೀರಾ ಹಿಡಿದು ನುಡಿಸುತ್ತಾ ತಾಳ ಹೇಳತೊಡಗಿದರೆ ಅದೊಂದು ಬೇರೆಯೇ ಲೋಕ.

ಸುರೂಪಾ ಸೆನ್

ಸುರೂಪಾ ಸೆನ್ ಒಡಿಸ್ಸಿಯ ಮಹಾಗುರು ಕೇಲುಚರಣ್ ಮಹಾಪಾತ್ರ ಅವರಲ್ಲಿ ಮೊದಲು ಶಿಷ್ಯೆಯಾಗಿದ್ದರು. ನಟಿ ಪ್ರತಿಮಾ ಬೇಡಿ ಅವರು ಒಡಿಸ್ಸಿ ಕಲಿತು ಅದನ್ನೇ ತಮ್ಮ ಮುಂದಿನ ಜೀವನದ ಕೇೊಂದ್ರವೆಂದು ನಿರ್ಧರಿಸಿ ಬೊಂಗಳೂರಿಗೆ ಬೊಂದು ಹೆಸರಘಟ್ಟದಲ್ಲಿ ನೃತ್ಯಗ್ರಾಮವನ್ನು ಸ್ಥಾಪಿಸಿದರು. ಗುರುಶಿಷ್ಯ ಪರೊಂಪರೆಯಲ್ಲಿ ನೃತ್ಯದ ಸಾಧನೆ ಮಾಡುವ ಕಾರ್ಯ ಪ್ರಾರೊಂಭವಾಯಿತು. ಆಗಲೇ ಸುರೂಪಾ ಸೆನ್ ಅವರಿಗೆ ಶಿಷ್ಯೆಯಾಗಿ ಬೊಂದು ಸೇರಿದರು. ನೃತ್ಯಗ್ರಾಮದ ಮೊದಲ ಪದವೀಧರೆ ಆದರು. ಪ್ರತಿಮಾ ಬೇಡಿಯ ಅಕಾಲಿಕ ಸಾವಿನ ನೊಂತರ ಸುರೂಪಾ ನೃತ್ಯಗ್ರಾಮವನ್ನು ಮುನ್ನಡೆಸುವ ಹೊಣೆಯನ್ನು ಹೊತ್ತುಕೊಂಡು ಮುನ್ನಡೆಸಿದರು. ಒೊಂದರ್ಥದಲ್ಲಿ ಪ್ರತಿಮಾಗಿಂತ ಹೆಚ್ಚು ಯಶಸ್ವಿಯಾಗಿ ಶಿಷ್ಯರನ್ನು ತಯಾರು ಮಾಡಿ ಏಳು ತೊಂಡ ಪ್ರಯೇಗಗಳು, ಎರಡು ದ್ವಿಕಲಾವಿದರ ಪ್ರಯೇಗಗಳು, ಎರಡು ಏಕಕಲಾವಿದ ಪ್ರಯೇಗಗಳನ್ನು ಸೊಂಯೇಜಿಸಿ ದೇಶವಿದೇಶಗಳಲ್ಲಿ ಪ್ರದರ್ಶನ ನೀಡಿ ಹೆಸರಾದರು. 1993ರಲ್ಲಿ ಅಮೆರಿಕದಲ್ಲಿ ಮೊದಲ ಪ್ರದರ್ಶನ ನೀಡಿದ ಮೇಲೆ ಅಲ್ಲಿಯ ಜನ ಇವರ ಕಲೆಯನ್ನು ಎಷ್ಟು ಇಷ್ಟಪಡುತ್ತಾರೆಂದರೆ ಪ್ರತಿ ವರ್ಷ ಅಮೆರಿಕನ್ ಡ್ಯಾನ್ಸ್ ಫೆಸ್ಟಿವಲ್ಗೆ ಬರಲೇಬೇಕೆಂದು ಆಹ್ವಾನಿಸುತ್ತಾರೆ. ಎರಡು ವರ್ಷ ಅತ್ಯುತ್ತಮ ನೃತ್ಯ ಪ್ರಶಸ್ತಿ ನೀಡಿದ್ದಾರೆ.

ಹೆಶ್ ಮಾ ವಿಘ್ನರಾಜ

ಶ್ರೀಲೊಂಕಾದ ಚಿತ್ರಸೇನಾ ಡ್ಯಾನ್ಸ್ ಕೊಂಪನಿ 1940ರಲ್ಲಿ ಗುರು ಚಿತ್ರಸೇನಾ ಅವರು ಸ್ಥಾಪಿಸಿದ ಸಂಸ್ಥೆ. ಗ್ರಾಮ ಕಲೆಯನ್ನು ಮುಖ್ಯವಾಹಿನಿಗೆ ತರುವಲ್ಲಿ ಗುರು ಚಿತ್ರಸೇನಾ ಅವರ ಪಾತ್ರ ಬಹಳ ಹಿರಿದು. ಆಧುನಿಕ ರೊಂಗಕ್ಕೂ ಅದನ್ನು ಅಳವಡಿಸಿದ ಸಾಧನೆ ಅವರದು. ಕಾಂಡ್ಯನ್ ನೃತ್ಯವನ್ನು ಅವರು ಮುಖ್ಯವಾಹಿನಿಯಲ್ಲಿ ಸೇರಿಸಿಕೊಂಡ ಪ್ರಕ್ರಮದಿಂದ ಶ್ರೀಲೊಂಕಾದಲ್ಲಿ ಜಾತಿ ಭೇದ ಕಡಿಮೆಯಾಯಿತು! ಹೆಶ್ಮಾ ವಿಘ್ನರಾಜ ಇವರ ಮೊಮ್ಮಗಳು. ತಾತನ ಕಾರ್ಯವನ್ನು ಮುಂದುವರಿಸಿಕೊಂಡು ಹೋಗುವಲ್ಲಿ ಆಕೆಗಿರುವ ಬದ್ಧತೆ ಬೆರಗುಗೊಳಿಸುವೊಂಥದು.

(ಸೆಪ್ಟೆಂಬರ್ 25ರಂದು ಭಾನುವಾರ ಸಂಜೆ 7 ಗಂಟೆಗೆ ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್ನಲ್ಲಿ ‘ಆಹುತಿ’ ಪ್ರಯೋಗ ನಡೆಯಲಿದೆ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.