ನೆನಿಕೆಯೊಳು ಮೂಡುವ ಮೊದಲೇ
ಹಠಾತ್ತನೆ ಬಂದು ಬಿಡುವ ಕೆಲವೊಂದು
ಬೆರಗಿನರಮನೆಯಲಿ ಅಲೆಸಿ
ಬೇಕೇ ಬೇಕೆನ್ನುವ ಹಾಗೆ
ಉಳಿದುಬಿಡುತ್ತವೆ

ಬಂದು ಬಿಡುವವು
ಎಲ್ಲಿಂದ ತಂದು ಬರುವುದೋ...

ಮಿದುವಾದ ಹುಳವೊಂದು
ತನ್ನತಾ ಬಂಧಿಸಿ ಘೋರ ಧ್ಯಾನದಲ್ಲಿ ದಂಡಿಸಿ
ಚಂದದ ಚುಕ್ಕಿಯ ರೆಕ್ಕೆಯ ಹುರುಪಲಿ
ಜಗದ ಕಣ್ಣಿಗೆ ಹಬ್ಬವಾಗುವಂತೆಯೇ
ಬಣ್ಣ ಕಳೆದು ಕಾಣೆಯಾಗುವ ಚಿಟ್ಟೆಯ ಹಾಗೆ
ಈ ಪರಿಯ ಸೊಗಸಿನ ಹುಟ್ಟು ಹೇಗೆ?
ಖಾಲಿತನದ ವಿಷಾದವೂ...!
ಕಾರಣಗಳು ತಿಳಿಯುವುದೇ ಇಲ್ಲ

ನಾಜೂಕು ಮೈರೂಪಿನ ನೀರೆ
ದರಗು ಕಲ್ಲಿನೊಡಗೂಡಿ ನಡೆದರೂ
ಸ್ವರ ತರಂಗಗಳ ಕಾಣಿಸಿ ರಿಂಗಣಿಸುತಲೇ
ಹಿತವಾದ ತಳುಕು ಬಳುಕಿನಲಿ
ಕಲ್ಲನೂ ಕರಗಿಸಿ ನುಣುಪಾಗಿಸುತಲೇ
ಒಂದಿನಿತೂ ನಿಲ್ಲಲೊಲ್ಲದೆ
ನಡೆದುಬಿಡುವ ಕಾರಣ ತಿಳಿಯುವುದೇ ಇಲ್ಲ

ಅಂತೆಯೇ ಹೊಸದಾಗಿ ಹಡೆದ ಕನಸೊಂದ ಹಿಡಕೊಂಡು
ಬಳಿ ಬಂದ ಮನಸೊಂದು
ಮುದವಾಗಿ ತುಂಬಿಕೊAಡಷ್ಟೇ ಶೀಘ್ರವಾಗಿ
ಇಷ್ಟದೊಲವಿನ ಮಾತು ಮೌನದಾಟದ ವಸ್ತುವಾದ
ಕಾರಣವೂ ತಿಳಿಯುವುದಿಲ್ಲ

ಯಾವ ಕಾರ್ಯವಿತ್ತು ಅದೇನು ಪಾತ್ರವಿತ್ತು
ದೋಷಾರೋಪಗಳ ನಡುವೆ ಎಷ್ಟು ನಿಯತಿಯಿತ್ತು?
ಯಾರ ಅಪ್ಪಣೆಯನೂ ಕೇಳದೆ
ಯಾರಿಗೂ ಸಮಜಾಯಿಷಿ ನೀಡದೆ
ಅರಿವಿನ ತೆಕ್ಕೆಯೊಳಗೂ ಸಿಗದೆ
ಕಾಲನ ಕಾರಿರುಳಿಗೆ ದಾಟಿಸುವ ಹಿಂದಿನ
ಕಾರಣಗಳ ತಿಳಯಗೊಡುವುದೇ ಇಲ್ಲ

ಚಂದದ ಜಗದಲಿ ಬಣ್ಣದ ನುಣುಪಿನಂತೆ
ಸೂಜಿಯ ಮೊನಚನೂ ಸಹಿಸುತಲೇ
ಮಾಗಬೇಕು ಹದವಾಗಬೇಕು
ಎಂತಿದ್ದರೂ ಹೇಗಿದ್ದರೂ ಕಾರಣಗಳ ಕೇಳದೆಯೇ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ನೆನಿಕೆಯೊಳು ಮೂಡುವ ಮೊದಲೇ
ಹಠಾತ್ತನೆ ಬಂದು ಬಿಡುವ ಕೆಲವೊಂದು
ಬೆರಗಿನರಮನೆಯಲಿ ಅಲೆಸಿ
ಬೇಕೇ ಬೇಕೆನ್ನುವ ಹಾಗೆ
ಉಳಿದುಬಿಡುತ್ತವೆ

ಬಂದು ಬಿಡುವವು
ಎಲ್ಲಿಂದ ತಂದು ಬರುವುದೋ...

ಮಿದುವಾದ ಹುಳವೊಂದು
ತನ್ನತಾ ಬಂಧಿಸಿ ಘೋರ ಧ್ಯಾನದಲ್ಲಿ ದಂಡಿಸಿ
ಚಂದದ ಚುಕ್ಕಿಯ ರೆಕ್ಕೆಯ ಹುರುಪಲಿ
ಜಗದ ಕಣ್ಣಿಗೆ ಹಬ್ಬವಾಗುವಂತೆಯೇ
ಬಣ್ಣ ಕಳೆದು ಕಾಣೆಯಾಗುವ ಚಿಟ್ಟೆಯ ಹಾಗೆ
ಈ ಪರಿಯ ಸೊಗಸಿನ ಹುಟ್ಟು ಹೇಗೆ?
ಖಾಲಿತನದ ವಿಷಾದವೂ...!
ಕಾರಣಗಳು ತಿಳಿಯುವುದೇ ಇಲ್ಲ

ನಾಜೂಕು ಮೈರೂಪಿನ ನೀರೆ
ದರಗು ಕಲ್ಲಿನೊಡಗೂಡಿ ನಡೆದರೂ
ಸ್ವರ ತರಂಗಗಳ ಕಾಣಿಸಿ ರಿಂಗಣಿಸುತಲೇ
ಹಿತವಾದ ತಳುಕು ಬಳುಕಿನಲಿ
ಕಲ್ಲನೂ ಕರಗಿಸಿ ನುಣುಪಾಗಿಸುತಲೇ
ಒಂದಿನಿತೂ ನಿಲ್ಲಲೊಲ್ಲದೆ
ನಡೆದುಬಿಡುವ ಕಾರಣ ತಿಳಿಯುವುದೇ ಇಲ್ಲ

ಅಂತೆಯೇ ಹೊಸದಾಗಿ ಹಡೆದ ಕನಸೊಂದ ಹಿಡಕೊಂಡು
ಬಳಿ ಬಂದ ಮನಸೊಂದು
ಮುದವಾಗಿ ತುಂಬಿಕೊAಡಷ್ಟೇ ಶೀಘ್ರವಾಗಿ
ಇಷ್ಟದೊಲವಿನ ಮಾತು ಮೌನದಾಟದ ವಸ್ತುವಾದ
ಕಾರಣವೂ ತಿಳಿಯುವುದಿಲ್ಲ

ಯಾವ ಕಾರ್ಯವಿತ್ತು ಅದೇನು ಪಾತ್ರವಿತ್ತು
ದೋಷಾರೋಪಗಳ ನಡುವೆ ಎಷ್ಟು ನಿಯತಿಯಿತ್ತು?
ಯಾರ ಅಪ್ಪಣೆಯನೂ ಕೇಳದೆ
ಯಾರಿಗೂ ಸಮಜಾಯಿಷಿ ನೀಡದೆ
ಅರಿವಿನ ತೆಕ್ಕೆಯೊಳಗೂ ಸಿಗದೆ
ಕಾಲನ ಕಾರಿರುಳಿಗೆ ದಾಟಿಸುವ ಹಿಂದಿನ
ಕಾರಣಗಳ ತಿಳಯಗೊಡುವುದೇ ಇಲ್ಲ

ಚಂದದ ಜಗದಲಿ ಬಣ್ಣದ ನುಣುಪಿನಂತೆ
ಸೂಜಿಯ ಮೊನಚನೂ ಸಹಿಸುತಲೇ
ಮಾಗಬೇಕು ಹದವಾಗಬೇಕು
ಎಂತಿದ್ದರೂ ಹೇಗಿದ್ದರೂ ಕಾರಣಗಳ ಕೇಳದೆಯೇ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.