ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ವನಾಥ ಎನ್. ನೇರಳಕಟ್ಟೆಯವರ ಕವನ: ಮಳೆ ಸುರಿಯಲಿ ಒಮ್ಮೆ

Published : 1 ಸೆಪ್ಟೆಂಬರ್ 2024, 0:19 IST
Last Updated : 1 ಸೆಪ್ಟೆಂಬರ್ 2024, 0:19 IST
ಫಾಲೋ ಮಾಡಿ
Comments

ಸುರಿದುಬಿಡಲಿ ಮಳೆ ಒಮ್ಮೆ

ಎದೆಯನ್ನು ಆವರಿಸಿದ

ಧಗೆ ಇಳಿದುಬಿಡಲಿ

ಕೊತ ಕೊತ ಕುದಿತ

ಇನ್ನಿಲ್ಲವಾಗಲಿ

ಮಳೆ ಸುರಿದರೆ ತಾನೆ

ತಾನೇತಾನಾಗಿ ಬಣ್ಣಗಳೆಲ್ಲ

ಬಯಲಾಗುವುದು!

ಗಟ್ಟಿಯಾಗಿ ಕಟ್ಟಿಕೊಂಡ

ಮುಖವಾಡಗಳೆಲ್ಲ

ಬಿದ್ದುಹೋಗುವುದು!

ಹೃದಯದೊಳಗುದಿಸಿದ ಉರಿ

ಲೋಕಾಂತರ ಜ್ವಾಲೆಯಾಗಿ

ಹಬ್ಬಿ, ಉಬ್ಬಿ, ಕುಣಿದು

ಎಲ್ಲರ ಬಲಿ ತೆಗೆದುಕೊಳ್ಳುವ

ಬಗೆಗೆ ಭಯವಿದೆ ನನಗೆ

ಮಳೆ ಸುರಿಯುವುದು ತಡವಾದರೆ

ಒಂದೇ ಒಂದು ಸಲ

ಸುರಿದುಬಿಡಲಿ ಮಳೆ

ಮಾನವರನ್ನು ಮಾನವರಾಗಿಯೇ

ಉಳಿಸುವ

ದಾನವರನ್ನು ದಾನವರಾಗಿ

ತೋರಿಸುವ

ಮಳೆ ಸುರಿಯಲಿ ಒಮ್ಮೆ

***

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT