ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಥಾ ಸ್ಪರ್ಧೆ: ಇಂದ್ರಕುಮಾರ್‌ಗೆ ಪ್ರಥಮ ಬಹುಮಾನ

Published 10 ಆಗಸ್ಟ್ 2024, 14:00 IST
Last Updated 10 ಆಗಸ್ಟ್ 2024, 14:00 IST
ಅಕ್ಷರ ಗಾತ್ರ

ಬೆಂಗಳೂರು: ಬುಕ್‌ ಬ್ರಹ್ಮ ಸಂಸ್ಥೆಯ 2024ನೇ ಸಾಲಿನ ‘ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ’ಯ ಫಲಿತಾಂಶ ಪ್ರಕಟವಾಗಿದ್ದು, ಇಂದ್ರಕುಮಾರ್ ಎಚ್.ಬಿ. ಅವರ ‘ಅಂತ್ಯವಾಗದು ಕಥೆ’ ಪ್ರಥಮ ಬಹುಮಾನ ಪಡೆದಿದೆ. 

ಶನಿವಾರ ಇಲ್ಲಿ ನಡೆದ ಬುಕ್‌ ಬ್ರಹ್ಮ ಸಾಹಿತ್ಯೋತ್ಸವದಲ್ಲಿ ಫಲಿತಾಂಶ ಘೋಷಿಸಲಾಯಿತು. ಪ್ರಥಮ ಬಹುಮಾನವು ₹ 50 ಸಾವಿರ ನಗದು ಒಳಗೊಂಡಿದೆ. ವಿನಾಯಕ ಅರಳಸುರಳಿ ಅವರ ‘ಪ್ಯಾಸೆಂಜರ್ ನೇಮ್ ನವರೋಜಿ’ ದ್ವಿತೀಯ (₹ 25 ಸಾವಿರ) ಹಾಗೂ ಪೂರ್ಣಿಮಾ ಮಾಳಗಿಮನಿ ಅವರ ‘ಒಂದು ಕಹಿ ಸುದ್ದಿಯ ನಿರೀಕ್ಷೆಯಲ್ಲಿ’ ಕಥೆಯು ತೃತೀಯ (₹ 15 ಸಾವಿರ) ಬಹುಮಾನಕ್ಕೆ ಭಾಜನವಾಯಿತು. 

ಸಂಧ್ಯಾ ಹೆಗಡೆ ದೊಡ್ಡಹೊಂಡ ಅವರ ‘ಅಚ್ಯುತನ ಧ್ಯಾನ’, ಸಲೀಮ ನದಾಫ ಅವರ ‘ಮಾಂತ್‌ ಮಲ್ಲಯ್ಯಾಘೇ’, ಸಚಿನ್ ತೀರ್ಥಹಳ್ಳಿ ಅವರ ‘ಸೆಕ್ಸ್‌ ಆನ್‌ ದಿ ಬೀಚ್‌’, ದೀಪ್ತಿ ಭದ್ರಾವತಿ ಅವರ ‘ಟವರ್‌ ಆಫ್‌ ಲೈಸೆನ್ಸ್‌’ ಹಾಗೂ ಅನುರಾಧ ಪಿ.ಎಂ. ಅವರ ‘ಆ ಎರಡು ಪುಟಗಳು’ ಕಥೆಗಳು ಸಮಾಧಾನಕರ ಬಹುಮಾನ (ತಲಾ ₹ 5 ಸಾವಿರ) ಪಡೆದುಕೊಂಡವು. 

ಮೆಚ್ಚುಗೆ ಪಡೆದ ಕಥೆಗಳು (ತಲಾ ₹2 ಸಾವಿರ):

ರವಿಕುಮಾರ್ ನೀಹ ಅವರ ‘ಬರ್ಗಲ್ಲು’,

ಸುಲ್ತಾನ್ ಮನ್ಸೂರ್ ಅವರ ‘ಕೇಶವ ಪ್ರಭುಗಳ ಅಶ್ವತ್ಥಕಟ್ಟೆ’,

ಚೀಮನಹಳ್ಳಿ ರಮೇಶಬಾಬು ಅವರ ‘ಬೇಟೆ’,

ಶರತ್ ಭಟ್ ಸೇರಾಜೆ ಅವರ ‘ಶ್ರದ್ಧಾಂಜಲಿ ಬೇಕೆ ಶ್ರದ್ಧಾಂಜಲಿ’,

ಸುಷ್ಮ ಸಿಂಧು ಅವರ ‘ಕತೆಯಾಗದ ಕತೆಗಳು’,

ಸಂತೆಬೆನ್ನೂರು ಫೈಜ್ನಟ್ರಾಜ್ ಅವರ ‘ಒಳಹೊರಗೆಂಬ ಉಭಯವು’,

ಶರಣಬಸವ ಕೆ. ಗುಡದಿನ್ನಿ ಅವರ ‘ಅಂಗಾಲ ಕಣ್ಣವರು’,

ಭಾರತಿ ಹೆಗಡೆ ಅವರ ‘ನೀರು ಹಿಡಿಯ ಹೊರಟವರು’,

ಸದಾಶಿವ ಸೊರಟೂರು ಅವರ ‘ಎಲ್ಲ ಹಗಲಿಗೂ ಒಂದು ಹನಿ ನೆತ್ತರ ಕಲೆ’, 

ಶ್ರೀಧರ ಪತ್ತಾರ ಅವರ ‘ಸಾಠ್‌ ಖಬರ್‌ ಮತ್ತು ಹರೀಣಿಯ ಪ್ರೇಮ ವೃತ್ತಾಂತ’,

ಪ್ರೇಮಲತ ಬಿ. ಅವರ ‘ದಳ್ಳುರಿಯ ಬೆಳದಿಂಗಳು’,

ಈಶ್ವರ ಎಂ. ಅವರ ‘ಬೆನ್ನಿಗೆ ಬಿದ್ದ ಬೇತಾಳ’,

ಆನಂದ ಕುಂಚನೂರ ‘ಕಾಟನ್‌ ಫೀವರ್‌’,

ಮಹಾದೇವ್ ಪೊನ್ನಾಚಿ ಅವರ ‘ಅಳಿದವರು ಕಂಡಂತೆ ಉಳಿದವರ ಕಥೆ’,

ಕಾವ್ಯಶ್ರೀ ಮಹಾಗಾಂವಕರ ಅವರ ‘ಒಡಲುಗೊಂಡ ಹಸಿವು’, 

ಅಮರೇಶ ಗಿಣಿವಾರ ಅವರ ‘ಬೆಳ್ಳಿಚುಕ್ಕಿ’

ಮೊಹಮ್ಮದ್ ಅಶೀರುದ್ದೀನ್ ಅವರ ‘ಹನುಮಾನ್‌ ಕಟ್ಟೆಯ ಆಲದ ಮರ’.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT