ಭಾನುವಾರ, ಮೇ 29, 2022
23 °C

ಪದ್ಮಶ್ರೀ ಪುರಸ್ಕೃತ ಜಾನಪದ ಕಲಾವಿದಗೆ ₹1 ಕೋಟಿ: ಸಿನಿಮಾಗೆ ಕರೆತಂದ ಪವನ್ ಕಲ್ಯಾಣ್

ಪಿಟಿಐ/ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಹೈದರಾಬಾದ್: ‌ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕಿನ್ನೇರ ಸಂಗೀತ ವಾದ್ಯ ವಾದಕ, ಜಾನಪದ ಕಲಾವಿದ ದರ್ಶನಂ ಮೊಗಿಲಯ್ಯ ಅವರಿಗೆ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಹೈದರಾಬಾದ್‌ನಲ್ಲಿ ನಿವೇಶನ ಮತ್ತು ಒಂದು ಕೋಟಿ ರೂಪಾಯಿ ನಗದು ಬಹುಮಾನವನ್ನು ಘೋಷಿಸಿದ್ದಾರೆ.

ಕಿನ್ನೇರ ಸಂಗೀತ ಕಲಾ ಪ್ರಕಾರವನ್ನು ಉಳಿಸಿಕೊಂಡು ಬಂದಿರುವ ಸಂಗೀತ ವಿದ್ವಾಂಸರು ಪ್ರಶಂಸೆಗೆ ಅರ್ಹರು ಎಂದು ಹೇಳಿರುವ ಮುಖ್ಯಮಂತ್ರಿ ರಾವ್, ತಮ್ಮ ಗೃಹ ಕಚೇರಿಯಲ್ಲಿ ಅವರಿಗೆ ಸನ್ಮಾನ ಮಾಡಿ ಈ ಘೋಷಣೆ ಮಾಡಿದ್ದಾರೆ.

ಜಾನಪದ ಕಲಾವಿದ ದರ್ಶನಂ ಮೊಗಿಲಯ್ಯ ಅವರಿಗೆ ಸರ್ಕಾರ ಬುಧವಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಕಿನ್ನೇರ ವಾದ್ಯವನ್ನು ನುಡಿಸುವ ಐದನೇ ತಲೆಮಾರಿನ ಕಲಾವಿದ ಮೊಗಿಲಯ್ಯ ಅವರು ತೆಲಂಗಾಣದ ನಾಗರಕರ್ನೂಲ್ ಜಿಲ್ಲೆಯ ಲಿಂಗಲ ಮಂಡಲದ ಅವಸಲಿಕುಂಟಾದವರು.

ಪವನ್ ಕಲ್ಯಾಣ್ ಚಿತ್ರದಲ್ಲಿ ಮೊಗಿಲಯ್ಯ ಸಂಗೀತ

ತೆಲುಗಿನ ಸೂಪರ್ ಸ್ಟಾರ್ ಪವನ್ ಕಲ್ಯಾಣ್ ಅವರ ಭೀಮ್ಲಾ ನಾಯಕ್ ಚಿತ್ರದ ಶೀರ್ಷಿಕೆ ಗೀತೆಯ ಆರಂಭಿಕ ಭಾಗವನ್ನು ಸಹ ಮೊಗಿಲಯ್ಯ ಹಾಡಿದ್ದಾರೆ. ಚಿತ್ರದ ನಟ ಪವನ್ ಕಲ್ಯಾಣ್ ಅವರು ಸ್ವತಃ ಆಸಕ್ತಿ ವಹಿಸಿ ನಿರ್ದೇಶಕ ತ್ರಿವಿಕ್ರಮ್ ಮತ್ತು ಸಂಗೀತ ಸಂಯೋಜಕ ತಮನ್ ಅವರಿಗೆ ಮೊಗಿಲಯ್ಯ ಸಂಗೀತದ ಮಹತ್ವ ತಿಳಿಸಿ ಚಿತ್ರಕ್ಕೆ ಕರೆ ತಂದಿದ್ದಾರೆ.

ಎಬಿಎನ್ ಆಂಧ್ರ ಜ್ಯೋತಿಗೆ ನೀಡಿದ ಸಂದರ್ಶನದಲ್ಲಿ, ಸಂಗೀತ ಸಂಯೋಜಕ ಎಸ್ ತಮನ್ ಮೊಗಿಲಯ್ಯ ಹೇಗೆ ತಮ್ಮ ಚಿತ್ರದ ಭಾಗವಾದರು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಮೊಗಿಲಯ್ಯ ಮತ್ತು ಅವರ ಕೆಲಸದ ಬಗ್ಗೆ ತ್ರಿವಿಕ್ರಮ್ ಅವರಿಗೆ ಪವನ್ ಕಲ್ಯಾಣ್ ಹೇಳಿದ್ದಾರೆ. ಹಾಗಾಗಿ, ಅವರು ನನ್ನನ್ನು ಕರೆದು ಚಿತ್ರಕ್ಕಾಗಿ ಮೊಗಿಲಯ್ಯ ಅವರನ್ನು ಬಳಸಿಕೊಳ್ಳುವಂತೆ ಹೇಳಿದರು. ಮಣ್ಣಿನ ಮಗ ಮೊಗಿಲಯ್ಯ ಅವರಿಗೆ ನಿಗೂಢವಾಗಿ ಕಾಣುತ್ತದೆ. ಅವರು ನಗರದ ಪರಿಸರಕ್ಕೆ ಒಗ್ಗಿಕೊಳ್ಳಲು ಸುಮಾರು ನಾಲ್ಕು ದಿನಗಳು ಬೇಕಾಯಿತು. ಅವರೊಬ್ಬ ಒಳ್ಳೆಯ ವ್ಯಕ್ತಿ. ಭೀಮ್ಲಾ ನಾಯಕ್ ಚಿತ್ರದ ಟೈಟಲ್ ಲಿರಿಕಲ್ ಸಾಂಗ್ ಅನ್ನು ನಾವು ಚೆನ್ನೈನಲ್ಲಿ ಚಿತ್ರೀಕರಿಸಿದ್ದೇವೆ. ತ್ರಿವಿಕ್ರಮ್ ಮತ್ತು ಪವನ್ ಕಲ್ಯಾಣ್ ಅವರು ಲಿರಿಕಲ್ ವಿಡಿಯೋ ಸಾಂಗ್‌ನಲ್ಲಿ ಮೊಗಿಲಯ್ಯ ಅವರನ್ನು ತೋರಿಸಲು ತುಂಬಾ ನಿರ್ದಿಷ್ಟವಾಗಿದ್ದರು. ಕಾಡಿನ ಕಥೆಯಾಗಿರುವುದರಿಂದ ಪ್ರತಿಯೊಂದು ಸಂಗೀತದ ಪ್ರತೀ ಶಬ್ದವೂ ನೈಸರ್ಗಿಕ ಆವಾಸಸ್ಥಾನದಿಂದ ಬರಬೇಕು ಮತ್ತು ಅವುಗಳು ಅಲಂಕಾರಿಕವಾಗಿ ಕಾಣಬಾರದು. ಶಬ್ದಗಳು ಮತ್ತು ವಾದ್ಯಗಳನ್ನು ಬಳಸಿಕೊಂಡು ಸಂಗೀತವು ಕಾಡಿನ ಅನುಭವವನ್ನು ನೀಡಬೇಕೆಂದು ನಾವು ಬಯಸಿದ್ದೇವೆ. ಇದು ಪ್ರೇಕ್ಷಕರಿಗೆ ಹೊಸದಾಗಿ ಕಾಣಬಹುದು ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು