ಮಂಗಳವಾರ, ಸೆಪ್ಟೆಂಬರ್ 22, 2020
22 °C

ಸಹಾಯಾರ್ಥ ಸಂಗೀತ ಸಂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ನಗರದ  ಹಳೆಯ ಸಂಗೀತ ತಂಡಗಳಲ್ಲಿ ಒಂದಾದ ‘ದಿ ಸಿಸಿಲಿಯನ್‌ ಕೊಯರ್‌’ ಸಹಾಯಾರ್ಥ ಸಂಗೀತ ಕಾರ್ಯಕ್ರಮಗಳನ್ನು 1982ರಿಂದ ನಡೆಸುತ್ತಾ ಬರುತ್ತಿದೆ. 320 ಸಂಗೀತಗಾರರು ಮತ್ತು ಸಹ ಕಲಾವಿದರು ಇದರಲ್ಲಿದ್ದಾರೆ. ಇದೇ 8 ಮತ್ತು 9ರಂದು ‘ದಟ್ಸ್‌ ಎಂಟರ್ಟೇನ್‌ಮೆಂಟ್‌’ ಹೆಸರಿನ ಸಂಗೀತ ಕಾರ್ಯಕ್ರಮ ಆಯೋಜಿಸಿದೆ. ಈ ಕಾರ್ಯಕ್ರಮದಿಂದ ಸಂಗ್ರಹವಾದ ಹಣವನ್ನು ಜೀವರತನಿ ಫೌಂಡೇಷನ್‌ಗೆ ನೀಡಲಾಗುತ್ತದೆ.

ಜೀವರತನಿ ಸಂಸ್ಥೆ ಕಳೆದ ಹದಿನಾಲ್ಕು ವರ್ಷಗಳಿಂದ ಆರ್ಥಿಕವಾಗಿ, ಮಾನಸಿಕವಾಗಿ ಕುಗ್ಗಿರುವ ಹೆಣ್ಣುಮಕ್ಕಳಿಗಾಗಿ ದುಡಿಯುತ್ತಿರುವ ಸಂಸ್ಥೆ.  ಒಂದೂವರೆ ವರ್ಷದಿಂದ 14 ವಯೋಮಾನದ ಹೆಣ್ಣುಮಕ್ಕಳಿಗೆ ಆಶ್ರಯ ನೀಡಲಾಗಿದೆ. ಸಂಗೀತ, ನೃತ್ಯ, ಕರಕುಶಲ ಕಲೆ, ಕ್ರೀಡೆ ಮತ್ತು  ಇಂಗ್ಲಿಷ್‌ ತರಬೇತಿ ನೀಡಲಾಗುತ್ತಿದೆ. ತ್ಯಾಜ್ಯ ನಿರ್ವಹಣೆ, ಸೌರ ವಿದ್ಯುತ್‌ ಉತ್ಪಾದನೆ, ಮೂಲಭೂತ ಸೌಕರ್ಯಗಳಿಗೆ ಸಂಸ್ಥೆಗೆ ಆರ್ಥಿಕ ಸಹಾಯದ ಅಗತ್ಯವಿದೆ. ಈ ಉದ್ದೇಶಕ್ಕೆ ಸಿಸಿಲಿಯನ್‌ ಕೊಯರ್‌ ಸಹಾಯಾರ್ಥ ಸಂಗೀತ ಕಾರ್ಯಕ್ರಮ ಆಯೋಜಿಸಿದೆ.

ಸಿಸಿಲಿಯನ್‌ ಕೊಯರ್‌ ಈಗಾಗಲೇ ಕ್ರೈ, ಹೆಲ್ಪಿಂಗ್‌ ಹ್ಯಾಂಡ್ಸ್‌, ಲಿಟಲ್‌ ಸಿಸ್ಟರ್ಸ್‌ ಆಫ್ ದಿ ಪುವರ್, ಕರುಣಾಶ್ರಯ ಆಸ್ಪತ್ರೆ, ದಿಯಾ ಫೌಂಡೇಷನ್‌ ಎಪಿಡಿ ಅಂಗವಿಕಲರ ಸಂಸ್ಥೆಗಳ ಸಹಾಯಾರ್ಥ ಸಂಗೀತ ಕಾರ್ಯಕ್ರಮ ನಡೆಸಿದೆ. ಅಷ್ಟೇ ಅಲ್ಲ ಎಚ್‌ಐವಿ ಸೋಂಕಿತರ ಚಿಕಿತ್ಸೆಗೆ, ಶಿಕ್ಷಣ ನಿಧಿ, ಬಿಸಿಯೂಟ ಯೋಜನೆಗಳಿಗೂ ಸಹಾಯಾರ್ಥ ಸಂಗೀತ ಕಾರ್ಯಕ್ರಮ ನಡೆಸಿದೆ. ಸಂಪರ್ಕಕ್ಕೆ: ಆರ್ಥರ್‌ ಬಿ ಪಯಾಸ್‌– 98450 10512

ಸ್ಥಳ: ಸೇಂಟ್‌ ಜೋಸೆಫ್ಸ್‌ ಸಭಾಂಗಣ, ಲ್ಯಾಂಗ್‌ಫೋರ್ಡ್‌ ರಸ್ತೆ.

ಸಮಯ: ಸಂಜೆ 3.30 ಮತ್ತು 6.30.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.